ಶಿವಮೊಗ್ಗ : ಕೃಷಿ ಮಸೂದೆಗಳನ್ನು ವಿರೋಧಿಸಿದ ಸಂಸದರನ್ನು ಸಂಸತ್‌ನಿಂದ ಅಮಾನತು ಗೊಳಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.
ರಾಜ್ಯಸಭೆಯಲ್ಲಿ ರೈತರಿಗೆ ಸಂಬಂಧಿಸಿದ ಕೃಷಿ ಮಸೂದೆಗಳನ್ನು ಅಸಂವಿಧಾನಿಕ ರೀತಿ ಅಂಗೀಕರಿಸಿರುವುದು ಸರಿಯಲ್ಲ. ಇದನ್ನು ಪ್ರಶ್ನೆ ಮಾಡಿದ ಆಮ್ ಆದ್ಮಿ ಪಕ್ಷದ ಸಂಸದರಾದ ಸಂಜಯ್ ಸಿಂಗ್ ಸೇರಿ 8 ಸದಸ್ಯರನ್ನು ಸಂಸತ್‌ನಿಂದ ಒಂದು ವಾರ ಅಮಾನತುಗೊಳಿಸಿರುವುದು ಒಳ್ಳೆಯ ನಡೆಯಲ್ಲ.
ಇದು ವಿರೋಧಿಗಳ ಬಾಯಿ ಮುಚ್ಚಿಸುವ ಸರ್ಕಾರದ ಸರ್ವಾಧಿಕಾರಿ ವರ್ತನೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಹೆಚ್ ರವಿಕುಮಾರ್, ದಿನೇಶ್ ಕಾಂತ, ಸುರೇಶ್ ಬಿ ಕೋಟೇಕರ್ ಸೇರಿ ಹಲವರಿದ್ದರು.