ETV Bharat / state

ಮಹಿಳೆ ಕೊಲೆ ಯತ್ನ ಪ್ರಕರಣ- ಆರೋಪಿಗಳಿಗೆ 2 ವರ್ಷ ಕಾರಾಗೃಹ, 22 ಸಾವಿರ ರೂ. ದಂಡ - ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ ಎಸ್

ಕೌಂಟುಂಬಿಕ ಕಲಹ- 2016 ರಲ್ಲಿ ಪತ್ನಿ ಮೇಲೆ ಮೂವರ ಜೊತೆ ಸೇರಿ ಮಾರಣಾಂತಿಕ ಹಲ್ಲೆ- ಪ್ರಕರಣದ ಆರೋಪಿಗಳಿಗೆ 2 ವರ್ಷ ಸಜಾ, 22 ಸಾವಿರ ರೂಪಾಯಿ ದಂಡ

accused
ಆರೋಪಿಗಳು
author img

By

Published : Feb 11, 2023, 8:13 AM IST

ಶಿವಮೊಗ್ಗ: ಮಹಿಳೆಯೋರ್ವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ ಮೂವರು ಆರೋಪಿಗಳಿಗೆ ಶಿವಮೊಗ್ಗ ನ್ಯಾಯಾಲಯ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 22 ಸಾವಿರ ರೂ ದಂಡ ವಿಧಿಸಿ‌ದೆ. 2016 ರಲ್ಲಿ ಶಿವಮೊಗ್ಗದ ಮಲವಗೊಪ್ಪ ಬಡಾವಣೆಯಲ್ಲಿ ಶೋಭಾ(26) ಮತ್ತು ಪತಿ ಹಾಲೇಶ್ ನಾಯ್ಕನಿಗೂ ಕೌಟಂಬಿಕ‌ ವಿಚಾರದಲ್ಲಿ ಗಲಾಟೆ ನಡೆದಿತ್ತು. ಇದರಿಂದ 2016 ರಲ್ಲಿ ಶೋಭಾ ತನ್ನ ತಾಯಿಯೊಂದಿಗೆ ಮಲವಗೊಪ್ಪ ಬಸ್ ನಿಲ್ದಾಣದಲ್ಲಿ ನಿಂತಾಗ ಹಾಲೇಶ್ ನಾಯ್ಕ ಹರಿತವಾದ ಆಯುಧದಿಂದ ಆಕೆಯ ತಲೆ ಹಾಗೂ ಇತರೆ ಕಡೆ ಮಾರಾಣಾಂತಿಕ ಹಲ್ಲೆ ನಡೆಸಿದ್ದರು.

ಹಾಲೇಶ್ ನಾಯ್ಕನ ಜೊತೆ ರವಿ ನಾಯ್ಕ, ದಾದು ನಾಯ್ಕ್ ಹಾಗೂ ವೆಂಕ್ಯಾನಾಯ್ಕ್ ತನ್ನ ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಶೋಭ ಅವರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 114, 307, 326, 504, 506 ರ ಅಡಿ ದೂರು ನೀಡಿದ್ದರು. ಈ ಪ್ರಕರಣದ ಕುರಿತು ಅಂದಿನ ಸಿಪಿಐ ಗಿರೀಶ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಪ್ರಕರಣದ ವಾದ ಆಲಿಸಿದ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್ ಅವರು ಆರೋಪಿಗಳ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗಳಾದ ರವಿ ನಾಯಕ್ (28), ದಾದು ನಾಯ್ಕ(36) ಹಾಗೂ ವೆಂಕ್ಯಾನಾಯ್ಕ್(40) ಅವರಿಗೆ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಮೂರು ಜನಕ್ಕೆ ತಲಾ 22 ಸಾವಿರ ರೂ ದಂಡ ವಿಧಿಸಿದೆ. ಒಂದು ವೇಳೆ ಹಣ ಕಟ್ಟಲು ಆಗದೆ ಹೋದರೆ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ವಾದ ಮಂಡಿಸಿದ್ದರು.

ಪತ್ನಿ ಮೇಲೆ ಸಂಶಯ, ಕೊಲೆ; ಪತಿಯ ಬಂಧನ(ಬೆಂಗಳೂರು): ಮಜೀದ್​ ಎಂಬಾತ ಕೋಲ್ಕತ್ತಾ ಮೂಲದ ಮೊನಿಷ್​ ಎಂಬುವರನ್ನು 6 ವರ್ಷ​ಗಳ ಹಿಂದೆ ಮದುವೆಯಾಗಿದ್ದರು. ಆದರೆ ಪತ್ನಿಯ ಮೇಲೆ ಸಂಶಯವಿದ್ದರಿಂದ ಇಬ್ಬರೂ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದರು. ಇದಾದ ನಂತರವೂ ದಂಪತಿ ನಡುವೆ ಜಗಳ ನಡೆದಿತ್ತು. ಈ ಜಗಳವು ಸ್ವಂತ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿತ್ತು. ಕೋಪದ ಭರದಲ್ಲಿ ಕೃತ್ಯ ನಡೆದ ನಂತರ ಆರೋಪಿ ಪತಿಯು ಮೃತದೇಹವನ್ನು ಮನೆಯಲ್ಲಿ ಹಾಗೆ ಬಿಟ್ಟು ಮನೆ ಬಾಗಿಲು ಹಾಕಿ ಪರಾರಿಯಾಗಿದ್ದರು.

ಘಟನೆ ನಡೆದ 2 ದಿನದ ಬಳಿಕ ಮನೆಯಿಂದ ದುರ್ವಾಸನೆ ಬರಲು ಶುರುವಾಗಿದ್ದು, ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೆ. 7 ರಂದು ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ತನಿಖೆ ನಂತರ ಪತಿಯೇ ಆರೋಪಿ ಎಂದು ತಿಳಿದು ಬಂದಿತ್ತು. ಪೊಲೀಸರ ಮುಂದೆ ತಾನೆ ಸಂಶಯದಿಂದ ಹತ್ಯೆ ಮಾಡಿರುವುದನ್ನು ಪತಿ ಒಪ್ಪಿಕೊಂಡಿದ್ದಾರೆ. ಸದ್ಯ ಆರೋಪಿ ವರ್ತೂರು ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: ಮರಕ್ಕೆ ಬೈಕ್​ ಡಿಕ್ಕಿಯಾಗಿ ಓರ್ವ ಸಾವು, ಮತ್ತೋರ್ವ ಗಂಭೀರ: ಸಿಸಿಟಿವಿ ದೃಶ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.