ಶಿವಮೊಗ್ಗ: ಜಿಲ್ಲೆಯಲ್ಲಿಂದು 77 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 3134ಕ್ಕೆ ಏರಿಕೆಯಾಗಿದೆ. ಓರ್ವ ಸೋಂಕಿನಿಂದ ಸಾವನ್ನಪ್ಪಿದ್ದಾನೆ.
ತಾಲೂಕುವಾರು ಸೋಂಕಿತರ ವಿವರ: ಶಿವಮೊಗ್ಗದಲ್ಲಿ 35, ಭದ್ರಾವತಿಯಲ್ಲಿ 11, ಶಿಕಾರಿಪುರದಲ್ಲಿ 11, ಸಾಗರದಲ್ಲಿ 2, ತೀರ್ಥಹಳ್ಳಿಯಲ್ಲಿ 4, ಹೊಸನಗರದಲ್ಲಿ 12, ಸೊರಬದಲ್ಲಿ 1, ಬೇರೆ ಜಿಲ್ಲೆಯಿಂದ ಬಂದ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ.
ಮಹಾಮಾರಿ ಸೋಂಕಿನಿಂದ ಓರ್ವರು ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 63ಕ್ಕೆ ತಲುಪಿದೆ. ಇಂದು ಒಂದೇ ದಿನ ಬರೋಬ್ಬರಿ 178 ಜನರು ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 2005ಕ್ಕೆ ಏರಿಕೆಯಾಗಿದೆ. ಸದ್ಯ 1066 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಚಿಕಿತ್ಸೆಯಲ್ಲಿರುವ ಸೋಂಕಿತರು:
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 217, ಕೋವಿಡ್ ಕೇರ್ ಸೆಂಟರ್ ನಲ್ಲಿ 478, ಖಾಸಗಿ ಆಸ್ಪತ್ರೆಯಲ್ಲಿ 172, ಆಯುರ್ವೇದ ಕಾಲೇಜಿನಲ್ಲಿ 42 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಮನೆಯಲ್ಲಿಯೇ 157 ಸೋಂಕಿತರು ಐಸೋಲೇಷನ್ ಆಗಿದ್ದಾರೆ.
ಜಿಲ್ಲೆಯಲ್ಲಿ 1297 ಕಂಟೈನ್ಮೆಂಟ್ ಝೋನ್ ನಿರ್ಮಾಣ ಮಾಡಲಾಗಿದೆ. ಇಂದು 432 ಕಂಟೈನ್ಮೆಂಟ್ ಝೋನ್ ಮರು ವಿಸ್ತರಣೆಗೊಂಡಿದೆ.
ಇಂದು 816 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, 344 ಜನರ ವರದಿ ಬಂದಿದೆ. ಇದುವರೆಗೂ ಜಿಲ್ಲೆಯಲ್ಲಿ 35,267 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 30,409 ಜನರ ವರದಿ ಬಂದಿದೆ.