ETV Bharat / state

ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ: ಪರಿಹಾರಕ್ಕಾಗಿ ರೈತರ ಮನವಿ - ಕಾಡಾನೆ ದಾಳಿ ವಿಡಿಯೋ

ಕಾಡಾನೆಗಳ ದಾಳಿಗೆ ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ರೈತರ ಬೆಳೆಗಳು ನಾಶವಾಗಿವೆ. ರೈತ ರಾಜು ಎಂಬುವರಿಗೆ ಸೇರಿದ್ದ ಒಂದು ಪ್ರದೇಶದಲ್ಲಿ ಬೆಳೆದ ಹೂಕೋಸು ಸಂಪೂರ್ಣ ನಾಶವಾಗಿದ್ದು, ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

wild-elephants-destroyed-crop-in-ramanagar-district
ಕಾಡಾನೆ ದಾಳಿ
author img

By

Published : Nov 18, 2021, 4:30 PM IST

ರಾಮನಗರ: ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ಕೆರೆಯಲ್ಲಿ ಬೀಡುಬಿಟ್ಟಿರುವ 5 ಕಾಡಾನೆಗಳ ಹಿಂಡು ಕಳೆದ ರಾತ್ರಿ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಭತ್ತ, ಹೂಕೋಸು, ಸೌತೆಕಾಯಿ, ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.

ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ

ತಿಮ್ಮಸಂದ್ರ ಗ್ರಾಮದ ರೈತ ರಾಜು ಎಂಬುವರು ಒಂದು ಎಕರೆ ಪ್ರದೇಶದಲ್ಲಿ ಹೂಕೋಸು ಬೆಳೆದಿದ್ದರು. 15 ದಿನ ಕಳೆದಿದ್ದರೆ ಫಲವತ್ತಾದ ಪಸಲು ಕೈಸೇರುತ್ತಿತ್ತು. ಆದ್ರೆ ಕಳೆದ ರಾತ್ರಿ ಕಾಡಾನೆ ದಾಳಿಗೆ ಹೂಕೋಸು ನಾಶವಾಗಿದೆ.

ವರ್ಷವಿಡೀ ಕಷ್ಟಪಟ್ಟು ಬೆಳೆದು ಇನ್ನೇನು ಫಸಲು ಕೈ ಸೇರಲಿದೆ ಎನ್ನುವ ಹೊತ್ತಿಗೆ ಆನೆಗಳ ದಾಳಿಯಿಂದ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.