ರಾಮನಗರ: ಹೈವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಕದನ ದಿನೇ ರಂಗು ಪಡೆಯುತ್ತಿದ್ದು, ರೇಷ್ಮೆ ನಗರಿ ರಾಮನಗರದಲ್ಲೂ ಮಂಡ್ಯ ಹೈವೊಲ್ಟೇಜ್ ಎಫೆಕ್ಟ್ ಕಾಣಿಸುತ್ತಿದೆ.
ರಾಮನಗರದಲ್ಲಿ ಸುಮಲತಾ ಪರ ನವ ವಧು-ವರ ಮತಯಾಚನೆ ಮಾಡಿದ್ದಾರೆ. ಜಿಲ್ಲೆಯ ಬಿಡದಿಯಲ್ಲಿರುವ ಎಸ್.ಪಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ರೇಷ್ಮಾ ಹಾಗೂ ವರ ನಾಗರಾಜ್ ನೂತನ ದಂಪತಿ ಸುಮಲತಾ ಪರ ವಿನೂತನವಾಗಿ ಮತಯಾಚನೆ ಮಾಡಿದ್ದಾರೆ. ಮದುವೆಗೆ ಆಗಮಿಸಿದ್ದ ಸಂಬಂಧಿಗಳು ಮತ್ತು ಸ್ನೇಹಿತರಲ್ಲಿ ಸುಮಲತಾ ಅವರಿಗೆ ವೋಟ್ ಹಾಕುವಂತೆ ಮನವಿ ಮಾಡಿದ್ದಾರೆ. ಚನ್ನಪಟ್ಟಣದ ಮಂಗಳವಾರ ಪೇಟೆ ನಿವಾಸಿಯಾದ ವರ ನಾಗರಾಜ್ ಹಾಗೂ ರೇಷ್ಮಾ ಅವರ ವಿನೂತನ ಪ್ರಯತ್ನಕ್ಕೆ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.