ರಾಮನಗರ : ಕನಕಪುರ ತಾಲೂಕಿನ ಪ್ರಸಿದ್ಧ ಶ್ರೀ ದೇಗುಲಮಠದಲ್ಲಿ ಶ್ರೀ ಆದಿ ನಿರ್ವಾಣ ಮಹಾಶಿವಯೋಗಿ ಸ್ವಾಮೀಜಿಯವರ ಎರಡನೇ ವರ್ಷದ ಮಹಾರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಕಳೆದ ಎರಡು ವರ್ಷಗಳಿಂದ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿರುವ ರಥೋತ್ಸವ ಕಾರ್ಯಕ್ರಮ ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಈ ಬಾರಿಯೂ ಸರಳವಾಗಿ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಆದರೆ ಭಕ್ತಾಧಿಗಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮೀಜಿಯವರ ಕೃಪೆಗೆ ಪಾತ್ರರಾದರು.
ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ಹಲವೆಡೆಯಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ರಥೋತ್ಸವಕ್ಕೆ ಸುತ್ತೂರು ಮಠದ ದೇಶಿಕೇಂದ್ರ ಮಹಾಸ್ವಾಮೀಗಳು ಚಾಲನೆ ನೀಡಿದರು.
ಓದಿ : ಮೈಲಾರಲಿಂಗೇಶ್ವರ ಕಾರಣಿಕ: 'ಮುತ್ತಿನ ರಾಶಿ ಮೂರು ಪಾಲು ಆದಿತಲೇ ಪರಾಕ್ '...ಏನಿದರ ಅರ್ಥ?