ETV Bharat / state

ರಾಮನಗರದಲ್ಲಿ ನಾಡದೇವತೆಗೆ ವಿಶೇಷ ಪೂಜೆ, ನವ ಮಧು-ವರರು ಇಲ್ಲಿ ಬರೋದೇಕೆ? - ರಾಮನಗರದಲ್ಲಿ ಚಾಮುಂಡೇಶ್ವರಿ ದೇವಿ ಪೂಜೆ

ಇಲ್ಲಿ ಚಾಮುಂಡೇಶ್ವರಿ ದೇವಿ ಪೂಜೆಯನ್ನು 'ಭೀಮನ ಅಮಾವಾಸ್ಯೆ' ಎಂದು ವಿಶೇಷವಾಗಿ ಆಚರಿಸಲಾಗುತ್ತದೆ. ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದೇ ಗರ್ಭಗುಡಿ ಪ್ರವೇಶಿಸಿ ಭಕ್ತರು ಪೂಜೆ ಸಲ್ಲಿಸುವುದು ವಿಶೇಷ.

ಭೀಮನ ಅಮಾವಾಸ್ಯೆಯಂದು ಚಾಮುಂಡಿ ದೇವಿಯ ವಿಶೇಷ ಪೂಜೆ
author img

By

Published : Aug 2, 2019, 3:43 PM IST

ರಾಮನಗರ: ವರ್ಷಕ್ಕೊಂದು ಬಾರಿ ಮಾತ್ರ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಹೊರಗೆ ತೆಗೆದು ಶುದ್ದೀಕರಿಸಿ ವಿಶೇಷ ಅಲಂಕಾರಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ. ಭೀಮನ ಅಮಾವಾಸ್ಯೆಯಂದು ದೇವಿಗೆ ಪೂಜೆ, ಆರಾಧನೆಗಳು ನಡೆಯುತ್ತವೆ.

ಭೀಮನ ಅಮಾವಾಸ್ಯೆಯಂದು ಚಾಮುಂಡಿ ದೇವಿಯ ವಿಶೇಷ ಪೂಜೆ

ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನೆಲೆಸಿರುವ ಚಾಮುಂಡೇಶ್ವರಿಗೆ ನವ ವಧು-ವರರು ಈ ದಿನ ಪೂಜೆ ಸಲ್ಲಿಸಿದರೆ ದೈವತ್ವ ತುಂಬಿರುವ ಮಕ್ಕಳು ಹುಟ್ಟುತ್ತಾರೆ ಎಂಬುದು ಭಕ್ತರ ನಂಬಿಕೆ.

ದೇವರ ಬಸಪ್ಪ (ಆಕಳು) ನನ್ನು ಗರ್ಭ ಗುಡಿಯೊಳಗೆ ಕರೆ ತಂದು ದೇವಿಗೆ ಪೂಜೆ ಮಾಡಲಾಗುತ್ತಿದೆ. ನಂತರ ಮಡಿಕೆಯಲ್ಲಿನ ಹಾಲನ್ನು ದೇವಿಗೆ ಅರ್ಪಿಸಿ ದೇವರ ಬಸಪ್ಪನಿಗೆ ಅಭಿಷೇಕ ಮಾಡುತ್ತಾರೆ. ಭಕ್ತರಿಂದ ದೇವಿಗೆ ರಥೋತ್ಸವ, ಹೋಮ, ಹವನ, ಅಭಿಷೇಕಾದಿ ಧಾರ್ಮಿಕ ಪೂಜಾಕ್ರಿಯೆಗಳು ನೆರವೇರುತ್ತವೆ.

ರಥೋತ್ಸವ ಸಂದರ್ಭದಲ್ಲಿ ಬಗೆಬಗೆ ಹಣ್ಣು, ಹೂ ಅರ್ಪಿಸುವ ಮೂಲಕ ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ರಾಮನಗರ, ಮಂಡ್ಯ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಸ್ತಿಕರು ಇಲ್ಲಿಗೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

Intro:nullBody:ರಾಮನಗರ : ಭೀಮನ ಅಮಾವ್ಯಾಸೆಯ ದಿನವಾದ ಇಂದು ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇಂದಿನ ದಿನ ನವವಧುವರರು ಚಾಮುಂಡಿಗೆ ಪೂಜೆಸಲ್ಲಿಸಿದರೆ ಜನಿಸುವ ಮಕ್ಕಳಲ್ಲಿ ದೈವತ್ವ ತುಂಬಿರುತ್ತದೆ ಎಂಬ ಪ್ರತೀತಿ ಇದೆ. ದುರ್ಗೆಯ ಸನ್ನಿಧಿಯಲ್ಲಿ ಅಮಾವ್ಯಾಸೆಯ ದಿನದಂದು ತಾಯಿಯನ್ನ ರಥದಲ್ಲಿ ಮೆರವಣಿಗೆ ಕೂಡ ಮಾಡುವುದು ವಿಶೇಷ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭೀಮನ ಅಮಾವ್ಯಾಸೆಯ ಪ್ರಯುಕ್ತ ವಿಶೇಷವಾಗಿ ಪೂಜೆಸಲ್ಲಿಸಲಾಯಿತು. ಬೆಳಗ್ಗೆಯಿಂದಲೂ ತಾಯಿ ದುರ್ಗೆಗೆ ವಿವಿಧ ರೀತಿಯ ಅಲಂಕಾರ, ಅಭಿಷೇಕದ ಜೊತೆಗೆ ಹೋಮಹವನಗಳನ್ನ ನೆರವೇರಿಸುವ ಮೂಲಕ ಸಕಲರಿಗೂ ಶುಭವಾಗಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಮೊದಲಿಗೆ ದೇವರ ಬಸಪ್ಪನನ್ನ ಗರ್ಭಗುಡಿಗೆ ಕರೆತಂದು ತಾಯಿಗೆ ಪೂಜೆ ನಡೆಸಲಾಗುತ್ತೆ, ನಂತರ ಬಂದ ಭಕ್ತಧಿಗಳಿಗೆ ತಾಯಿಯ ದರ್ಶನ ಮಾಡಿಸಿ ಪ್ರಾರ್ಥಿಸಲಾಗುತ್ತದೆ. ಇನ್ನು ಈ ಕ್ಷೇತ್ರದಲ್ಲಿ ಗ್ರಾಮಸ್ಥರಷ್ಟೇ ಅಲ್ಲದೆ ಬೇರೆಕಡೆಗಳಿಂದ ಬಂದಿರುವ ಮಹಿಳಾ ಭಕ್ತರು ಮಡಿಕೆಯಲ್ಲಿ ಹಾಲನ್ನ ತಂದು ತಾಯಿಗೆ ಪೂಜೆಸಲ್ಲಿಸಿದ ನಂತರ ದೇವರ ಬಸಪ್ಪನಿಗೆ ಅದೇ ಹಾಲಿನಲ್ಲಿ ಅಭಿಷೇಕ ಮಾಡುವುದು ವಿಶೇಷವಾಗಿದೆ ಎಂದು ದೇವಸ್ಥಾನದ ಧರ್ಮಾಧಿಕಾರಿ ಮಲ್ಲೇಶ್ ತಿಳಿಸಿದರು.
ಭೀಮನ ಅಮಾವ್ಯಾಸೆಯ ದಿನವಾದ ಇಂದು ತಾಯಿಯ ಉತ್ಸವ ಮೂರ್ತಿಯನ್ನ ರಥದಲ್ಲಿಟ್ಟು ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ರಥದಲ್ಲಿ ಸಾಗುವ ತಾಯಿ ಚೌಡಿಗೆ ಹಣ್ಣು, ಹೂವನ್ನ ಅರ್ಪಿಸುವ ಮೂಲಕ ಬಂದ ಭಕ್ತರು ತಮ್ಮ ಪ್ರಾರ್ಥನೆಯನ್ನ ಸಲ್ಲಿಸುತ್ತಾರೆ. ಇನ್ನು ಪ್ರತಿವರ್ಷಕ್ಕೊಮ್ಮೆ ನಡೆಯುವ ಈ ಉತ್ಸವಕ್ಕೆ ರಾಮನಗರ, ಮಂಡ್ಯ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಭಾಗಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇನ್ನು ತಾಯಿಯ ದರ್ಶನ ಪಡೆದ ದಿನದಿಂದ ನಮಗೆಲ್ಲಾ ಒಳಿತಾಗಿದೆ ಎನ್ನುತ್ತಾರೆ ಇಲ್ಲಿನ ಭಕ್ತಾಧಿಗಳು.
ಮೈಸೂರು ಬೆಟ್ಟದ ತಾಯಿ ಚಾಮುಂಡಿಯನ್ನೇ ಹೆಚ್ಚಾಗಿ ಆರಾಧಿಸುವ ದಿನಗಳ ಮಧ್ಯೆಯೂ ಭಕ್ತರ ದಂಡು ಬೊಂಬೆನಾಡಿನಲ್ಲಿರುವ ತಾಯಿ ಚಾಮುಂಡೇಶ್ವರಿಯ ಸನ್ನಿಧಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರಲ್ಲದೆ‌ದೇವಿಯ ಕೃಪೆಗೆ ಪಾತ್ರರಾಗಿ‌ ಒಳಿತು ಕಾಣುತ್ತಿದ್ದಾರೆ..
Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.