ETV Bharat / state

ರಾಮನಗರದಲ್ಲಿ ನೇಣಿಗೆ ಶರಣಾದ ಪುನೀತ್​​ ಅಭಿಮಾನಿ - ರಾಮನಗರ

ನಟ ಪುನೀತ್ ರಾಜ್​ಕುಮಾರ್ ಸಾವನ್ನು ಅರಗಿಸಿಕೊಳ್ಳಲಾಗದ ರಾಮನಗರದ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೆಂಕಟೇಶ್ ಹಾಗು ಪುನೀತ್​ ರಾಜ್​​ಕುಮಾರ್​​
ವೆಂಕಟೇಶ್ ಹಾಗು ಪುನೀತ್​ ರಾಜ್​​ಕುಮಾರ್​​
author img

By

Published : Nov 4, 2021, 12:59 PM IST

ರಾಮನಗರ: ಪುನೀತ್ ರಾಜ್‍ಕುಮಾರ್ ನಿಧನದಿಂದ ಮನನೊಂದ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಲೆಕೇರಿಯಲ್ಲಿ ನಡೆದಿದೆ.

ವೆಂಕಟೇಶ್ (26) ನೇಣಿಗೆ ಶರಣಾದ ಯುವಕ. ಈತ ಪವರ್​ ಸ್ಟಾರ್​​ ಅಪ್ಪಟ ಅಭಿಮಾನಿಯಾಗಿದ್ದ. ಅಪ್ಪು ನಟಿಸಿದ ಚಿತ್ರ ಎಂದರೆ ಸಾಕು ಮೊದಲ ದಿನವೇ ಚಿತ್ರ ಮಂದಿರಕ್ಕೆ ಹೋಗಿ ನೋಡುತ್ತಿದ್ದನಂತೆ. ಆದರೆ ಪುನೀತ್​​ ನಿಧನದಿಂದ ನೊಂದ ಈತ ಕಳೆದ ಮೂರು ದಿನಗಳಿಂದ ಊಟ ಬಿಟ್ಟಿದ್ದು, ಇಂದು ಎಲೆಕೇರಿಯ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಕ್ಷೌರಿಕ ವೃತ್ತಿ ಮಾಡುತ್ತಿದ್ದ ವೆಂಕಟೇಶ್ ಅಪ್ಪು ಸಮಾಧಿ ನೋಡಲು ಹಠ ಹಿಡಿದಿದ್ದನಂತೆ. ಆದ್ರೆ ಸಮಾಧಿ ನೋಡದೆಯೇ ಸಾವಿಗೆ ಶರಣಾಗಿದ್ದಾನೆ. ಈ ಸಂಬಂಧ ಚನ್ನಪಟ್ಟಣ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.