ETV Bharat / state

ಬೊಂಬೆ ಉದ್ಯಮದ ಮೇಲೆ ದಶಪಥ ಹೆದ್ದಾರಿ ಕರಿ ನೆರಳು - ಈಟಿವಿ ಭಾರತ್​ ಕರ್ನಾಟಕ

ಮೈಸೂರು ಬೆಂಗಳೂರು ಎಕ್ಸಪ್ರೆಸ್​ ವೇ ಬೊಂಬೆ ಉದ್ಯಮ ಕರಿ ನೆರಳಾಗಿದೆ. ಅಲ್ಲದೇ ಪ್ರವಾಸೋಧ್ಯಮ ಮತ್ತು ವ್ಯಾಪಾರಕ್ಕೂ ಸಂಕಷ್ಟ ತಂದೊಡ್ಡಿದೆ.

Mysore Bangalore Express way
ಮೈಸೂರು ಬೆಂಗಳೂರು
author img

By

Published : Sep 26, 2022, 11:01 PM IST

ರಾಮನಗರ : ಮೈಸೂರು ಬೆಂಗಳೂರು ನಡುವೆ ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಎಕ್ಸ್​ಪ್ರೆಸ್​ ವೇ ಎಂದೇ ಕರೆಯಲಾಗುತ್ತಿರುವ ಈ ಹೈವೇ ನಿರ್ಮಾಣದಿಂದ ಚಿನ್ನಪಟ್ಟಣದ ಗೊಂಬೆ ಮಾರಾಟಕ್ಕೆ ಹೊಡೆತ ಬಿದ್ದಿದೆ. ಗೊಂಬೆ ಮಾರಾಟ ಮಾತ್ರವಲ್ಲದೇ ಪ್ರವಾಸೋಧ್ಯಮಕ್ಕೂ ನಷ್ಟ ತಲೆದೂರಿದೆ. ರಸ್ತೆ ಅಭಿವೃದ್ಧಿ ಆದರೆ ಒಳ್ಳೆಯದು ನಗರ ಬೇಗ ಬೆಳೆಯುತ್ತದೆ ಎಂಬ ಮಾತಿಗೆ ಈ ಹೈವೆ ತದ್ವಿರುದ್ದವಾಗುತ್ತಿದೆ.

ಬೆಂಗಳೂರು ಮೈಸೂರು ಹೈವೇ ಇಕ್ಕೆಲದಲ್ಲಿ ಕೋವಿಡ್​ನಿಂದ ಚೇತರಿಕೆ ಕಾಣುತ್ತಿರುವ ಪ್ರವಾಸೋಧ್ಯಮ ಮತ್ತು ವ್ಯಾಪಾರಕ್ಕೆ ಈಗ ಹೆದ್ದಾರಿ ನಿರ್ಮಾಣವೇ ಕುತ್ತಾಗಿದೆ. ನಿರ್ಮಾಣವಾಗುತ್ತಿರುವ ಹೈವೆ ಎಕ್ಸ್​ಪ್ರಸ್​ ವೇ ಆದ ಕಾರಣ ಮೈಸೂರು ಬೆಂಗಳೂರು ನಡುವೆ ಎಲ್ಲಿಯೂ ಹೊರ ಪ್ರವೇಶಕ್ಕೆ ಅವಕಾಶ ಇರದಿರುವುದು ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಬಂದಿರುವ ಕುತ್ತು.

ರಾಮನಗರ ಜಿಲ್ಲೆಯ ಹಲವು ವೈಶಿಷ್ಟ್ಯಗಳನ್ನ ಹೊಂದಿದ್ದು ಸಪ್ತಗಿರಿಗಳ ನಾಡು, ರೇಷ್ಮೇನಗರಿ, ಜೊತೆಗೆ ಸಾಂಸ್ಕೃತಿಕ ಕಣಜ, ಪ್ರಾಕೃತಿಕ ಸಂಪದ್ಭರಿತ ಜಿಲ್ಲೆ ಅಷ್ಟೇ ಏಕೆ ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹೀಗಿದ್ದರೂ ಇಲ್ಲಿಗೆ ಬರಲು ಈ ಹೊಸ ಮಾರ್ಗದಲ್ಲಿ ಅವಕಾಶ ಇಲ್ಲದಂತಾಗಿದೆ. ಬೆಂಗಳೂರು ಮೈಸೂರು ನಡುವಿನ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹೀಗೆ ಹಲವು ನಗರಗಳಿಗೆ ವ್ಯಾಪಾರ ಮತ್ತು ಪ್ರವಾಸೋಧ್ಯಮ ಹಾಗೂ ಸ್ಥಳೀಯ ವೈವಿಧ್ಯತೆಯ ಮೇಲೆ ಬಂಡೆ ಒರಗಿದಂತಾಗಿದೆ.

ಬಿಡದಿ ತಟ್ಟೆ ಇಡ್ಲಿ ಕೇಳುವವರೇ ಇಲ್ಲ : ಬಿಡದಿ ಅಂದ್ರೆ ತಟ್ಟೆ ಇಡ್ಲಿ ಡಾ. ರಾಜ್‌ಕುಮಾರ್ ಸೇರಿದಂತೆ ಖ್ಯಾತನಾಮರ ಮೆಚ್ಚಿನ ಬಿಡದಿ ತಟ್ಟೆ ಇಡ್ಲಿಗೆ ಸಾಕಷ್ಟು ಬೇಡಿಕೆ ಇತ್ತು. ದಶಪಥದಿಂದ ಉದ್ಯಮ ನೆಲಕಚ್ಚಿದೆ. ಇದರಿಂದ ಬಿಡದಿಯ ಹಳೆ ಹೆದ್ದಾರಿ ರಸ್ತೆಯ ಇಕ್ಕೆಲಗಳಲ್ಲಿದ್ದ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ ಇನ್ನು ಕಾರ್ಮಿಕರ ಸ್ಥಿತಿ ಕೇಳೋರಿಲ್ಲ ಎನ್ನುವಂತಾಗಿದೆ. ರಾಮನಗರ ಚನ್ನಪಟ್ಟಣ ಹೆದ್ದಾರಿಯಲ್ಲಿ ಇದ್ದ ಖ್ಯಾತ ನಾಮದ ಹೋಟೆಲ್‌ಗಳು ವ್ಯಾಪಾರ ಇಲ್ಲದ ಬಣಗುತ್ತಿದೆ.

ಮೈಸೂರು ದಸರಾ ಸಂಭ್ರಮಕ್ಕೆ ಬೊಂಬೆ ಉದ್ಯಮ ಕರಿ ನೆರಳು : ನಾಡಹಬ್ಬ ದಸರಾ ಬಂದರೆ ಇಡೀ ನಾಡಿಗೆ ಹಬ್ಬ ಅದರಲ್ಲೂ ಬೊಂಬೆನಾಡು ಚನ್ನಪಟ್ಟಣದ ಬೊಂಬೆ ತಯಾರಿಕರಲ್ಲಿ ದಸರಾ ಹಬ್ಬದ ಸಂಭ್ರಮ ಇಮ್ಮಡಿಯಾಗುತ್ತದೆ. ದಸರಾ ಹಬ್ಬವನ್ನು ಕಣ್ತುಂಬಿಕೊಳ್ಳು ಬರುವ ದೇಶ ವಿದೇಶದ ಪ್ರವಾಸಿಗರು ವಿಶ್ವವಿಖ್ಯಾತ ಚನ್ನಪಟ್ಟಣದ ಬೊಂಬೆ ಮಳಿಗೆಗಳಿಗೆ ಭೇಟಿ ನೀಡಿ ವಿಶ್ವವಿಖ್ಯಾತ ಬಣ್ಣ ಬಣ್ಣದ ಮರದ ಆಟಿಕೆಗಳು, ಇತಿಹಾಸ ಹಾಗೂ ಪುರಾಣ ಪುಣ್ಯ ಕಥೆಗಳನ್ನು ಸಾರುವ ನಾನಾ ಬಗೆಯ ಬೊಂಬೆಗಳನ್ನು ನೋಡಿ ಮಾಹಿತಿ ತಿಳಿದುಕೊಳ್ಳುವ ಜೊತೆಗೆ ಬೊಂಬೆ ಖರೀದಿಸುತ್ತಿದ್ದರು.

ಇದರಿಂದಾಗಿ ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಟಾಯ್ಸ್ ಎಂಪೋರಿಯಂಗಳ ಬೃಹತ್ ಮಳಿಗೆಗಳಿದ್ದು, ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಉದ್ಯೋಗ ಕಂಡುಕೊಂಡಿದ್ದರು. ಅಲ್ಲದೇ ಬಣ್ಣದ ಅಟಿಕೆಗಳಿಗೆ ವಿಶ್ವ ವಿಖ್ಯಾತಿಯನ್ನು ತಂದುಕೊಟ್ಟ ಕುಶಲಕರ್ಮಿಗಳ ಸಾವಿರಾರು ಕುಟುಂಬಗಳು ಜೀವನ ಬಂಡಿ ಸಾಗುತ್ತಿತ್ತು ದಶಪಥ ಎಲ್ಲದಕ್ಕೂ ತೊಡಕಾಗಿ ಉದ್ಯೋಗಕ್ಕೂ ಕತ್ತರಿ ಬೀಳಲಿದೆ.

ಇದನ್ನೂ ಓದಿ : ಧಾರವಾಡ: ಐಐಐಟಿ ಲೋಕಾರ್ಪಣೆಗೊಳಿಸಿದ ದೇಶದ ಮೊದಲ ಪ್ರಜೆ ದ್ರೌಪದಿ ಮುರ್ಮು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.