ETV Bharat / state

ಎಂಎಲ್​ಸಿ ಯೋಗೇಶ್ವರ್ ಸೇರಿದಂತೆ ಹಲವರ ವಿರುದ್ಧ ಜೆಡಿಎಸ್​​ ದೂರು - ಯೋಗೇಶ್ವರ್ ಸೇರಿದಂತೆ ಹಲವರ ವಿರುದ್ಧ ಜೆಡಿಎಸ್​​ ದೂರು

ವಿಧಾನಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರಚೋದನೆ ಹಿನ್ನೆಲೆಯಲ್ಲಿ ನಮ್ಮ ಮೇಲೆ ಹಲ್ಲೆಯಾಗಿದೆ. ಅಧಿಕಾರಿಗಳು, ಪೊಲೀಸರು ನಾನು ಹೇಳಿದಂತೆ ಕೇಳುತ್ತಾರೆ. ನನ್ನ ಬೆಂಬಲಿಗರಿಂದ ಹೊಡೆಸಿ ಪ್ರಾಣ ತೆಗೆಯುವುದಾಗಿ ಸಿಪಿವೈ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್​ ವಿದ್ಯಾರ್ಥಿ ಮುಖಂಡ ಆಶೀಶ್ ದೂರಿದ್ದಾರೆ.

jds-complaint-against-mlc-yogeshwar-and-others
ಯೋಗೇಶ್ವರ್ ಸೇರಿದಂತೆ ಹಲವರ ವಿರುದ್ಧ ಜೆಡಿಎಸ್​​ ದೂರು
author img

By

Published : Oct 3, 2022, 4:40 PM IST

ರಾಮನಗರ: ಚನ್ನಪಟ್ಟಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಹಿನ್ನೆಲೆ ಸಂಬಂಧ ವಿಧಾನಪರಿಷತ್​ ಸದಸ್ಯ ಸಿ.ಪಿ ಯೋಗೇಶ್ವರ್​​​ ಹಾಗೂ 12 ಮಂದಿ ಬೆಂಬಲಿಗರ ವಿರುದ್ಧ ದೂರು ದಾಖಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ಹಲ್ಲೆ ನಡೆಸಿದ ಆರೋಪದಡಿ ಜೆಡಿಎಸ್​​ನಿಂದ ದೂರು ನೀಡಲಾಗಿದೆ.

ಚನ್ನಪಟ್ಟಣ ಜೆಡಿಎಸ್​ ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶೀಶ್ ಎಂಬುವರು ದೂರು ನೀಡಿದ್ದಾರೆ. ಎಂಎಲ್‌ಸಿ ಸಿ.ಪಿ. ಯೋಗೇಶ್ವರ್, ಎಲೆಕೇರಿ ರವೀಶ್, ಮುದಗೆರೆ ಜಯಕುಮಾರ್, ಕೋಟೆ ಸ್ವಾಮಿ, ದೊಡ್ಡಮಳೂರು ಗ್ರಾಮದ ಜಯಂತ್, ಸುರೇಂದ್ರ ರಾಜೇಶ್, ಬೈರಾಪಟ್ಟಣ ಸುರೇಶ್, ಎಪಿಎಂಸಿ ರಾಮು, ಮಳೂರು ಪಟ್ಟಣದ ನಂಜೇಶ್, ಶಿವಕುಮಾರ್, ಜಯಸ್ವಾಮಿ, ಬ್ರಹ್ಮಣಿಪುರ ಗ್ರಾಮದ ಪ್ರಸನ್ನ ಸೇರಿದಂತೆ ಇತರರ ವಿರುದ್ಧ ದೂರು ನೀಡಲಾಗಿದೆ.

ವಿಧಾನಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರಚೋದನೆ ಹಿನ್ನೆಲೆ ಹಲ್ಲೆಯಾಗಿದೆ. ಅಧಿಕಾರಿಗಳು, ಪೊಲೀಸರು ನಾನು ಹೇಳಿದಂತೆ ಕೇಳುತ್ತಾರೆ. ನನ್ನ ಬೆಂಬಲಿಗರಿಂದ ಹೊಡೆಸಿ ಪ್ರಾಣ ತೆಗೆಯುವುದಾಗಿ ಸಿಪಿವೈ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್​ ವಿದ್ಯಾರ್ಥಿ ಮುಖಂಡ ಆಶೀಶ್ ದೂರಿದ್ದಾರೆ.

ಹಾಗೆಯೇ ಎಂಎಲ್‌ಸಿ ಸಿಪಿವೈ ಬೆದರಿಕೆ ಹಾಕಿದ್ದು,‌ ಬೆದರಿಕೆ ಹಾಕಿ ಸಿಪಿವೈ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಮುಂದಾದವರನ್ನು ತಡೆಯುವ ಬದಲು ಲಾಠಿ ಪ್ರಯೋಗ ಮಾಡಲಾಗಿದೆ ಎಂದು ಆಶೀಶ್ ದೂರಿನಲ್ಲಿ ತಿಳಿಸಿದ್ದಾರೆ. ನನ್ನ ಹಾಗೂ ಇತರ ಸ್ನೇಹಿತರ ಮೇಲೆ ಪೊಲೀಸರು ಲಾಠಿ ಬೀಸಿದ್ದರು ಎಂದು ಜೆಡಿಎಸ್​ ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶೀಶ್ ಕಿಡಿಕಾರಿದ್ದು, ಸಿಪಿವೈ ಸೇರಿದಂತೆ 12 ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಇದಕ್ಕೂ ಮುನ್ನ ಚನ್ನಪಟ್ಟಣ ತಾಲೂಕಿನ ಭೈರಪಟ್ಟಣ ಗ್ರಾಮದಲ್ಲಿ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​ನ 14 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಚನ್ನಪಟ್ಟಣ ಡಿವೈಎಸ್ಪಿ ಕಚೇರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿದ್ದರು.

ಇದನ್ನೂ ಓದಿ: ಸಿ ಪಿ ಯೋಗೇಶ್ವರ್ ಮೇಲೆ ಮೊಟ್ಟೆ, ಕಲ್ಲು ಎಸೆದ ಜೆಡಿಎಸ್ ಕಾರ್ಯಕರ್ತರು.. ಪೊಲೀಸರಿಂದ ಲಾಠಿಚಾರ್ಜ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.