ETV Bharat / state

ಭಗವದ್ಗೀತೆ ಪಾಠ ಮಾಡಿದ್ರೆ ಹೊಟ್ಟೆ ತುಂಬಲಿದೆಯೇ!?.. ಸರ್ಕಾರಕ್ಕೆ ಹೆಚ್​ಡಿಕೆ ಪ್ರಶ್ನೆ..

ಸಾರಿಗೆ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ನಾನು 2006ರಲ್ಲಿ ಸಿಎಂ ಆಗಿದ್ದಾಗ ಸಾರಿಗೆ ಲಾಭದಲ್ಲಿತ್ತು. ನಂತರದ ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಳೆದ 10 ವರ್ಷಗಳಲ್ಲಿ ಏನೆಲ್ಲಾ ಅನಾಹುತವಾಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ..

HD Kumaraswamy question to government, HDK question to government over Bhagavad Gita, Bhagavad Gita news, HDK reaction on Bhagavad Gita, ಭಗವದ್ಗೀತೆ ಪಾಠ ಮಾಡಿದ್ರೆ ಹೊಟ್ಟೆ ತುಂಬಲಿದೆಯೇ ಎಂದು ಹೆಚ್​ಡಿಕೆ ಪ್ರಶ್ನೆ, ಸರ್ಕಾರಕ್ಕೆ ಹೆಚ್​ಡಿಕೆ ಪ್ರಶ್ನೆ, ಭಗವದ್ಗೀತೆ ಸುದ್ದಿ, ಭಗವದ್ಗೀತೆ ಬಗ್ಗೆ ಹೆಚ್​ಡಿಕೆ ಪ್ರತಿಕ್ರಿಯೆ,
ಸರ್ಕಾರಕ್ಕೆ ಹೆಚ್​ಡಿಕೆ ಪ್ರಶ್ನೆ
author img

By

Published : Mar 19, 2022, 2:01 PM IST

ರಾಮನಗರ : ಸರ್ಕಾರದ ಮುಂದೆ ಟನ್‌ಗಟ್ಟಲೇ ಸಮಸ್ಯೆಗಳ ಸರಮಾಲೆಯೇ ಇದೆ. ಮೊದಲು ಅವುಗಳನ್ನ ಸರಿಪಡಿಸಲಿ. ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬುತ್ತದೆಯೇ ಎಂದು ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸರ್ಕಾರದ ಮುಂದೆ ರಾಜ್ಯದಲ್ಲಿ ಬಗೆಹರಿಸುವ ಸಮಸ್ಯೆಗಳೇ ಸಾವಿರ ಸಂಖ್ಯೆಯಲ್ಲಿ ಇದ್ದಾವೆ. ಮೊದಲಿಗೆ ಆ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಹೆಚ್ಚು ಗಮನ ಹರಿಸಬೇಕಿದೆ. ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬಲಿದೆಯೇ ಎಂದು ಪ್ರಶ್ನಿಸಿದರು.

ನಾನು ಬೆಳಗ್ಗೆ ಹ್ಯಾಡ್ಸ್ ಅಂಡ್ ಕಲ್ಚರ್ ಎಂಬ ಬುಕ್ ಓದಿದೆ. ಅದರಲ್ಲಿ ಮೊದಲನೇ ಪ್ರಶ್ನೆ ಇದೇ.. ನಾನ್ಯಾರು.. ಎಲ್ಲಿಂದ ಬಂದೆ.. ಎಂಬುದಕ್ಕೆ ಉತ್ತರವಿಲ್ಲ. ಇರೋವರೆಗೂ ನಮ್ಮ ಹಣೆಬರಹ ಏನು.. ಹೋದ್ಮೇಲೆ ಏನು.. ಅನ್ನೋದು ಕೂಡ ಗೊತ್ತಿಲ್ಲ.‌ ಯಾರಿಗೂ ಯಾವುದೂ ಕೂಡ ಶಾಶ್ವತ ಅಲ್ಲ. ಈ ಭೂಮಿ ಹೇಗೆ ಉದ್ಭವ ಆಯ್ತು ಎಂದು ನಮಗೆ ನಿಮಗೆ ಗೊತ್ತಿದೆಯೇ. ಬಿಜೆಪಿಯ ರಾಜ್ಯ-ಕೇಂದ್ರ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ. ಅದನ್ನ ಬಗೆಹರಿಸುವುದು ಅವರಿಗೆ ಬೇಕಿಲ್ಲ ಎಂದರು.

ಓದಿ: ಸಂಜೆಯೊಳಗೆ ತುಮಕೂರು ಗಾಯಾಳುಗಳ ಆರೋಗ್ಯ ವಿಚಾರಿಸುವೆ: ಗೃಹ ಸಚಿವ

ಇನ್ನು ದೇಶದಲ್ಲಿ ಭಾವನಾತ್ಮಕವಾಗಿ ವಿಚಾರಗಳು ನಡೆಯುತ್ತಿವೆ. ಜನ ಸತ್ತರೇನು, ಹಸಿವಾದರೇನು, ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲದಿದ್ದರೇನು, ಅದ್ಯಾವುದರ ಬಗ್ಗೆ ಚಿಂತೆ ಇಲ್ಲ. ಅಧಿಕಾರಕ್ಕಾಗಿ ಅಮಾಯಕರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುತ್ತಿದ್ದಾರೆ. ಅಂತಹ ವಿಚಾರಗಳು ದೊಡ್ಡದಾಗಿ ಪ್ರಚಾರ ಆಗ್ತಿದೆ.

ಇದಕ್ಕೂ ಒಂದು ಅಂತಿಮ ಇರುತ್ತದೆ. ಯಾರಿಗೂ ಶಾಶ್ವತ ಅಲ್ಲ. ರಾಜಮಹಾರಾಜರ ಕಾಲದಿಂದಲೂ ನೋಡಿದ್ದೇವೆ. ಅವುಗಳು ಉಳಿದ್ವಾ, ಇಲ್ಲತ್ತಾನೆ. ಒಂದಲ್ಲಾ ಒಂದು ದಿನ ಎಲ್ಲವೂ ನಶಿಸಿಹೋಗಿವೆ. ಇದಕ್ಕೂ ಒಂದು ಅಂತ್ಯವಿದೆ. ಆದ್ರೆ, ಕಾಯಬೇಕಿದೆ ಎಂದು ಹೆಚ್ ಡಿ ಕುಮಾರಸ್ವಾಮಿ‌ ತಿಳಿಸಿದರು.

ತುಮಕೂರು ಅಪಘಾತ : ರಾಜ್ಯದಲ್ಲಿ ಇಂದು ಮೂರು ಕಡೆ ಅವಘಡಗಳಾಗಿವೆ. ತುಮಕೂರಿನ ಪಾವಗಡದಲ್ಲಿ ಕೂಡ ಖಾಸಗಿ ಬಸ್ ಅನಾಹುತವಾಗಿದ್ದು, ಆ್ಯಕ್ಸಿಡೆಂಟ್​ನಲ್ಲಿ ಎಂಟತ್ತು ಮಂದಿ ಸಾವಿಗೀಡಾಗಿದ್ದಾರೆಂಬ ಸುದ್ದಿ ಇದೆ ಎಂದರು.

ಬಡವರು ಬಸ್ ಅವಘಡದಲ್ಲಿ ಸಾವಿಗೀಡಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡು ಚಿಂತಾಜನಕವಾಗಿದ್ದಾರೆ. ಸರ್ಕಾರ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಬೇಕು. ಸಾರಿಗೆ ಸಚಿವರು ಹಾಗೂ ಸರ್ಕಾರ ಮಾಹಿತಿ ಪಡೆಯಬೇಕು.

ಕೂಡಲೇ ಮಾಹಿತಿ ಪಡೆದು ಪರಿಹಾರ ನೀಡುವ ಕಾರ್ಯವಾಗಬೇಕು. ಪಾವಗಡ ಅತ್ಯಂತ ಬರಗಾಲ ಇರುವ ತಾಲೂಕು. ಬಸ್ ಅವಘಡದಲ್ಲಿ ಕೂಲಿ ನಾಲಿ ಮಾಡುವ ಜನರಿದ್ದರೆ ಹೆಚ್ಚಿನ ಪರಿಹಾರ ನೀಡಬೇಕು. ಹೆಚ್ಚಿನ ಪರಿಹಾರ ನೀಡಬೇಕಾದುದು ರಾಜ್ಯ ಸರ್ಕಾರದ ಕರ್ತವ್ಯ ಎಂದರು‌.

ಓದಿ: ತುಮಕೂರು ಅಪಘಾತದ ಎಲ್ಲಾ ವಿವರ ಪಡೆದು ಕ್ರಮ ಕೈಗೊಳ್ಳುತ್ತೇನೆ : ಸಿಎಂ

ಹಾಗೆಯೇ, ಉಡುಪಿ ಹಾಗೂ ಬಳ್ಳಾರಿಯಲ್ಲಿ ಆಕ್ಸಿಜನ್ ಪ್ಲ್ಯಾಂಟ್​ನಲ್ಲೂ‌ ಅವಘಡವಾಗಿದೆ. ಅಲ್ಲಿ ಸ್ಥಳ ಪರಿಶೀಲನೆ ಮಾಡಿ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಈ ಅನಾಹುತದಲ್ಲಿ ನೊಂದವರಿಗೆ‌ ನೆರವು ಸಿಗಬೇಕು. ನೆರವಿಗೆ ಮುಂದಾಗಲಿ ಎಂದು ಸರ್ಕಾರಕ್ಕೆ ಹೇಳ ಬಯಸುತ್ತೇನೆ ಅಂತಾ ಹೇಳಿದರು.

ಅಪಘಾತಕ್ಕೆ ಕಾರಣ ಏನಿರಬಹುದು?: ಇನ್ನು ತುಮಕೂರಿನ ಬಸ್ ಅವಘಡದಲ್ಲಿ ಯಾರ ತಪ್ಪಿದೆ ಎಂಬುದ ಪರಿಶೀಲನೆ ನಡೆಯಬೇಕು. ಮೆಕಾನಿಕಲ್ ಸಮಸ್ಯೆ ಸೇರಿದಂತೆ ಇನ್ನಿತರೆ ಕಾರಣವೋ ಪರಿಶೀಲಿಸಲಿ. ಅಲ್ಲಿ ವಿದ್ಯಾರ್ಥಿಗಳೇ ಸಾವಿಗೀಡಾಗಿದ್ದಾರೆ. ಇಲ್ಲಿ ಪ್ರಶ್ನೆ ಸರ್ಕಾರದ ಸಾರಿಗೆ ವ್ಯವಸ್ಥೆಯಲ್ಲಿ ಪರಿಸ್ಥಿತಿಯಾಗಿದೆ.

ಸಾರಿಗೆ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ನಾನು 2006ರಲ್ಲಿ ಸಿಎಂ ಆಗಿದ್ದಾಗ ಸಾರಿಗೆ ಲಾಭದಲ್ಲಿತ್ತು. ನಂತರದ ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಳೆದ 10 ವರ್ಷಗಳಲ್ಲಿ ಏನೆಲ್ಲಾ ಅನಾಹುತವಾಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ ಎಂದರು.

ಸರ್ಕಾರ ಉತ್ತಮ ದರ್ಜೆಯ ಸಾರಿಗೆ ಸೌಲಭ್ಯ ಕಲ್ಪಿಸಬೇಕಿದೆ. ಆವಾಗ ಈ ರೀತಿಯ ಅನಾಹುತಗಳು ನಡೆಯುವುದಿಲ್ಲ.‌ ಸಾರ್ವಜನಿಕರು, ವಿದ್ಯಾರ್ಥಿಗಳು ಸಿಕ್ಕ-ಸಿಕ್ಕ ಬಸ್ ಕೂಡ ಏರಲ್ಲ. ಸಾರಿಗೆ ವ್ಯವಸ್ಥೆ ಉತ್ತಮವಾಗಿದ್ರೇ ಇಂತಹ ಅನಾಹುತಗಳು ಕೂಡ ನಡೆಯಲ್ಲ ಎಂದರು.

ಓದಿ: ಗರ್ಭಪಾತಕ್ಕೆ ಬಂದಿದ್ದ ಮಹಿಳೆಯನ್ನೇ ಬಾಡಿಗೆ ತಾಯಿಯೆಂದು ಬಿಂಬಿಸಿ ಮಗು ಮಾರಿದ್ದ ವೈದ್ಯನ ಬಂಧನ

ಕೋವಿಡ್ ಬಳಿಕ ಸಾರಿಗೆ ಇಲಾಖೆ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಸಾರಿಗೆ ನೌಕರರು ಹಾಗೂ ಪ್ರಯಾಣಿಕರು ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.‌ ಯಾರೋ ಪ್ರತಿಭಟನೆ ಮಾಡಿಸಿ ಸಾರಿಗೆ ನೌಕರರನ್ನ ಬೀದಿಪಾಲು ಮಾಡಿದರು. ಸಾರಿಗೆ ನೌಕರರು ಇದೀಗ ಕಣ್ಣೀರು ಹಾಕುತ್ತಿದ್ದಾರೆ.

ಸರ್ಕಾರಕ್ಕೆ ನನ್ನ ಸಲಹೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬಾರದು. ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರು ಅನಾನುಕೂಲ ಆಗದಂತೆ ಸರ್ಕಾರ ಕ್ರಮಕೈಗೊಳ್ಳಲಿ ಎಂದು ಈ ವೇಳೆ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.