ETV Bharat / state

ನಾನು ಗುಡಿಸಲಲ್ಲೂ ಮಲಗಿದ್ದೇನೆ, ಪಂಚತಾರಾ ಹೋಟೆಲ್‌ನಲ್ಲೂ ಮಲಗಿದ್ದೇನೆ: ಹೆಚ್​ಡಿಕೆ - ಹೆಚ್​ಡಿಕೆ

ಸಚಿವ ಅಶ್ವತ್ಥ್‌ ನಾರಾಯಣ್ ಪಂಚತಾರಾ ಹೋಟೆಲ್​​​ನಲ್ಲಿ ಹೆಚ್​ಡಿಕೆ ಉಳಿದುಕೊಳ್ಳುತ್ತಾರೆ ಎಂದು ಏನೇನೋ ಮಾತನಾಡುತ್ತಾರೆ. ಈಗ ದೆಹಲಿಯಿಂದ ಬರುವ ಅಮಿಶ್ ಶಾ, ನಡ್ಡಾ, ಅರುಣ್ ಸಿಂಗ್ ಎಲ್ಲಿ ಹಾಲ್ಟ್‌ ಮಾಡ್ತಾರೆ? ಎಂದು ಹೆಚ್​ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ನಾನು ಗುಡಿಸಲಲ್ಲೂ ಮಲಗಿದ್ದೇನೆ, ಪಂಚತಾರಾದಲ್ಲೂ ಮಲಗಿದ್ದೇನೆ: ಹೆಚ್​ಡಿಕೆ

author img

By

Published : Aug 11, 2022, 4:01 PM IST

ರಾಮನಗರ: ಕಾಡಾನೆ ದಾಳಿಯಿಂದ ಮಹಿಳೆ ಸಾವಿಗೀಡಾಗಿರುವುದು ಶೋಚನೀಯ. ವನ್ಯಜೀವಿ ದಾಳಿ ತಡೆಗೆ ನಾನು ಹಲವು ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು. ಇತ್ತೀಚೆಗೆ ಚನ್ನಪಟ್ಟಣದಲ್ಲಿ ಕಾಡಾನೆ ದಾಳಿಗೆ ಮಹಿಳೆಯ ಸಾವಿಗೆ ಸಂತಾಪ ಸೂಚಿಸಿದ ನಂತರ ಅವರು ಮಾತನಾಡಿದರು.

ಡಿಸಿ ಕಚೇರಿಯಲ್ಲಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಕೂಡ ಸಭೆ ನಡೆಸಿದ್ದು, ನನ್ನ ಮನವಿ ಮೇರೆಗೆ ಕಾಡಾನೆ ಸಾಗಹಾಕುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು. ಬಂಡಿಪುರದಿಂದ ಸಾಕಾನೆಗಳನ್ನು ತಂದು ಓಡಿಸಲು ಕ್ರಮ ಕೈಗೊಂಡು ನಿರಂತರವಾಗಿ 15-20 ಕಾಡಾನೆಗಳ ಹಾವಳಿ ತಪ್ಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಮಾವುತರ ಪ್ರತಿಭಟನೆ ಹಿನ್ನೆಲೆಯಲ್ಲಿ ಆನೆಗಳನ್ನು ಕಾಡಿಗೆ ಕಳಿಸುವುದು ತಡವಾಗಿದೆ ಎಂದರು.

ಹೆಚ್​ಡಿಕೆ ಪ್ರತಿಕ್ರಿಯೆ

ಅಶ್ವತ್ಥ್ ನಾರಾಯಣ್ ವಿರುದ್ಧ ಕಿಡಿ: ಪಂಚತಾರಾ ಹೋಟೆಲ್​​​ನಲ್ಲಿ ಹೆಚ್​ಡಿಕೆ ಉಳಿದುಕೊಳ್ಳುತ್ತಾರೆ ಎಂದು ಏನೇನೋ ಮಾತನಾಡುತ್ತಾರೆ. ಈಗ ದೆಹಲಿಯಿಂದ ಬರುವ ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್ ಎಲ್ಲಿ ಹಾಲ್ಟ್ ಮಾಡ್ತಾರೆ. ಹಾಗಿದ್ರೆ ಅವರು ಆ ಹೋಟೆಲ್‌ಗೆ ಹೋಗಬಹುದಾ? ಕುಮಾರಸ್ವಾಮಿ ಹೋದ್ರೆ ತಪ್ಪಾ? ಎಂದು ಕೇಳಿದರು.

ನಾನು ಗುಡಿಸಲಲ್ಲೂ ಮಲಗಿದ್ದೇನೆ, ಪಂಚತಾರಾ ಹೋಟೆಲ್‌ನಲ್ಲೂ ಮಲಗಿದ್ದೇನೆ. ನನ್ನ ಬಗ್ಗೆ ಚರ್ಚೆ ಮಾಡಲು ಇರುವುದು ಅದೊಂದೇ ವಿಷಯ. ನಾನು ಆ ಹೋಟೆಲ್‌ನಲ್ಲಿ ಒಬ್ಬನೇ ಇದ್ದಿದ್ದಲ್ಲ. ಸಿದ್ದರಾಮಯ್ಯ ಅವರು ಸರ್ಕಾರಿ ಬಂಗಲೆ ಬಿಟ್ಟುಕೊಡಲಿಲ್ಲ. ನಾನು ಬೆಂಗಳೂರಿನಲ್ಲಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲು ಜಾಗ ಇರಲಿಲ್ಲ. 2ನೇ ಬಾರಿ ಸಿಎಂ ಆದಾಗ ಸರ್ಕಾರಿ ಬಂಗಲೆ, ವಾಹನ, ಪೆಟ್ರೋಲ್ ಹಣ, ಮನೆ ಬಾಡಿಗೆ ಸಹ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಈದ್ಗಾ ಮೈದಾನ ವಿವಾದ: ಕಾಂಗ್ರೆಸ್- ಬಿಜೆಪಿಗೆ‌ ಈದ್ಗಾ ಮೈದಾನ ಧರ್ಮದ ಜಗಳವೇ ಜೀವಾಳ. ಕರಾವಳಿಯಿಂದ ಬೆಂಗಳೂರಿನ ಚಾಮರಾಜಪೇಟೆಗೆ ಧರ್ಮದ ದಂಗಲ್ ಬಂದಿದೆ. ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸ್ತಾರೋ ನೋಡೋಣ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಮುಂದಿನ‌ ಸಿಎಂ ಸಿದ್ದರಾಮಯ್ಯ ಎಂದು ಜೈಕಾರ ಕೂಗಿದ ಅಭಿಮಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.