ETV Bharat / state

ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ದೃಢ... 2 ವರ್ಷದ ಮಗುವಿಗೆ ವಕ್ಕರಿಸಿದ ಹೆಮ್ಮಾರಿ!

author img

By

Published : May 25, 2020, 8:39 PM IST

ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ತಮಿಳುನಾಡಿನ ಚೆನ್ನೈ ನಗರದಿಂದ ಬಂದಿದ್ದ ಒಂದು ಕುಟುಂಬದ ಪೈಕಿ 2 ವರ್ಷದ ಗಂಡು ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ.

First Corona Positive Case Detection In Ramanagara
ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ದೃಢ

ರಾಮನಗರ: ರೇಷ್ಮೆ ನಗರಿ ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ತಮಿಳುನಾಡಿನ ಚೆನ್ನೈ ನಗರದಿಂದ ಬಂದಿದ್ದ ಒಂದು ಕುಟುಂಬದ ಪೈಕಿ 2 ವರ್ಷದ ಗಂಡು ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಂ‌.ಎಸ್. ಅರ್ಚನಾ ಮಾಹಿತಿ‌ ನೀಡಿದ್ದಾರೆ.

ಕಳೆದ ಒಂದು ವಾರದ ಹಿಂದೆ ಚೆನ್ನೈನಲ್ಲಿ ವಾಸವಿದ್ದ ಕುಟುಂಬವೊಂದು, ಮಾಗಡಿ ತಾಲೂಕಿನ ಮಾರಸಂದ್ರ ಗ್ರಾಮಕ್ಕೆ ಬಂದಿತ್ತು. ತಂದೆ, ತಾಯಿ, ಅಜ್ಜಿ, ಚಿಕ್ಕಮ್ಮ ಹಾಗೂ 2 ವರ್ಷದ ಮಗು ಬಂದಿದ್ರು‌‌. ಈ ಕುಟುಂಬದವರೆಲ್ಲರ ಗಂಟಲ ದ್ರವವನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಕುಟುಂಬವನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.

ಇದೀಗ ವರದಿ ಬಂದಿದ್ದು 5 ಜನರ ಪೈಕಿ 2 ವರ್ಷದ ಮಗುವಿನಲ್ಲಿ (P-2134) ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಮಗುವಿಗೆ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲದೇ ಕುಟುಂಬದವರನ್ನುಇದೀಗ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಮಾರಸಂದ್ರ ಗ್ರಾಮವನ್ನು ಸೀಲ್​​​ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, ಪಕ್ಕದ ತುಮಕೂರು ಜಿಲ್ಲೆಯಿಂದ ಕರ್ತವ್ಯಕ್ಕೆಂದು ಬಂದಿದ್ದ ಕೆಎಸ್​​ಆರ್​​ಟಿಸಿ ಚಾಲಕನಿಗೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ(P-2135). ಆದ್ರೆ ಆ ಚಾಲಕ ತುಮಕೂರಿನ ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಈ ಚಾಲಕ ಮಾಗಡಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದ. ಅಲ್ಲದೇ ಮಾಗಡಿಯಿಂದ ಬೆಂಗಳೂರಿಗೆ ಬಸ್ ಚಲಾಯಿಸಿದ್ದ ಹಿಸ್ಟರಿ ಕೂಡ ಇದೆ. ಹಾಗಾಗಿ ಅಧಿಕಾರಿಗಳು ಈ ಚಾಲಕನ ಹಿಸ್ಟರಿ ಹುಡುಕಾಟದಲ್ಲಿದ್ದಾರೆ ಎಂದು ತಿಳಿಸಿದರು.

ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ದೃಢ.

ಅಲ್ಲದೇ ಕಳೆದ ಒಂದು ವಾರದ ಹಿಂದೆ ಜಿಲ್ಲೆಯ ಬಂದೋಬಸ್ತ್​​ಗೆಂದು ಹಾಸನದಿಂದ ಕೆಎಸ್​​​ಆರ್​​ಪಿಯ ತುಕಡಿಯನ್ನು ಕರೆಸಿಕೊಳ್ಳಲಾಗಿತ್ತು. ಈ ಪೈಕಿ ಒಬ್ಬ ಕಾನ್ಸ್​ಟೆಬಲ್​​ನಲ್ಲಿ (P- 1,993) ನಿನ್ನೆ ಪಾಸಿಟಿವ್ ಪತ್ತೆಯಾಗಿದೆ. ಅವರು 4 ದಿನ ರಾಮನಗರದಲ್ಲಿ ವಾಸ್ತವ್ಯ ಹೂಡಿದ್ದು, ಮತ್ತಪ್ಪ ರೈ ನಿಧನದ ವೇಳೆ ಹಾಗೂ ರೇಷ್ಮೆ ಮಾರುಕಟ್ಟೆ ಗಲಾಟೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಇದೀಗ ಈ ಪ್ರಕರಣದಿಂದ ಕೂಡ ಜಿಲ್ಲೆಯ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಪೊಲೀಸ್ ವರಿಷ್ಟಾಧಿಕಾರಿಗಳು ಆ ಕಾನ್ಸ್​ಟೆಬಲ್ ಹಿಸ್ಟರಿಯ ಹುಡುಕಾಟದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.