ರಾಮನಗರ : ಡಿ.ಕೆ. ಬ್ರದರ್ಸ್ ಬೇನಾಮಿ ಹೇಸರಿನಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಹೇಳಿಕೆಗೆ ಡಿಕೆ ಸುರೇಶ್ ತಿರುಗೇಟು ನೀಡಿದ್ದು, ಕೆಲಸ ಇಲ್ಲದವರು ಏನಾದ್ರು ಒಂದು ಮಾತನಾಡುತ್ತಾರೆ. ಅವರು ಫ್ರೀಯಾಗಿದ್ದಾರೆ ಮಾತನಾಡಲಿ ಬಿಡಿ ಎಂದು ಸಿ.ಪಿ.ಯೋಗೀಶ್ವರ್ಗೆ ಟಾಂಗ್ ನೀಡಿದ್ದಾರೆ.
ರಾಮನಗರದಲ್ಲಿ ಕಾರ್ಯಕರ್ತರ ಭೇಟಿ ವೇಳೆ ಮಾತನಾಡಿದ ಅವರು, ಆರೋಪ ಮಾಡುವವರು ಚುನಾವಣೆ ಬಿಟ್ಟು ಬೇರೆ ಸಮಯದಲ್ಲಿ ಆರೋಪ ಮಾಡಬೇಕು ಇದಕ್ಕೆ ಅವರ ಬಳಿ ದಾಖಲೆ ಏನಿದೆ ತಂದು ತೋರಿಸಲಿ ಎಂದು ಸಿಪಿವೈಗೆ ಸವಾಲು ಹಾಕಿದ್ದಾರೆ.
ಇದೇ ವೇಳೆ ಬಿಜೆಪಿಯ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ನಮ್ಮ ಬಳಿ ಇದೆ. ಡಿ.ಕೆ.ಸುರೇಶ್ ಬಳಿ ಯಾವ ಅಭಿವೃದ್ಧಿ ಕಾರ್ಡ್ ಇದೆ ಎಂಬ ಅಶ್ವಥ್ ನಾರಾಯಣ ಪ್ರಶ್ನೆಗೆ ತಿರುಗೇಟು ನೀಡಿರುವ ಡಿ.ಕೆ.ಸುರೇಶ್, ಮೊದಲು ಅವರ ಅಭಿವೃದ್ಧಿ ಕಾರ್ಡ್ ತರಲಿ,ನಾನು ನನ್ನ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ತರುತ್ತೇನೆ. ಆಮೇಲೆ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ತಿರುಗೇಟು ನೀಡಿದ್ದಾರೆ