ETV Bharat / state

ಬೆರಳ ತುದಿಯಲ್ಲೇ ಇನ್ಮುಂದೆ ಟೆಂಡರ್ ಜಾಹೀರಾತು ಮಾಹಿತಿ... ರಾಮನಗರ ವಾರ್ತಾ ಇಲಾಖೆಯಿಂದ ವಿನೂತನ ಹೆಜ್ಜೆ - undefined

ಸರಕಾರದ ಯೋಜನೆಗಳು ಪಾರದರ್ಶಕವಾಗಿ ಇದ್ದಷ್ಟು ಜನರಿಗೆ ಹತ್ತಿರವಾಗುತ್ತದೆ. ಇನ್ನು ಬೆರಳತುದಿಯಲ್ಲೇ ಎಲ್ಲಾ ಮಾಹಿತಿ ದೊರೆತರೆ ಯಾರು ತಾನೇ ಬೇಡ ಅಂತಾರೆ. ಹೀಗೊಂದು ವಿನೂತನ ಕಾರ್ಯಕ್ಕೆ ಕೈ ಹಾಕಿದ್ದು ರಾಮನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಏನದು ಯೋಜನೆ ಎಂದು ಈ ಸುದ್ದಿ ತಿಳಿಸುತ್ತದೆ.

ಜಾಹೀರಾತು ಮಾಹಿತಿ
author img

By

Published : May 18, 2019, 5:33 AM IST

ರಾಮನಗರ : ಸರ್ಕಾರದ ಯೋಜನೆಗಳು ಪಾರದರ್ಶಕ ಮತ್ತು ಮುಕ್ತವಾಗಿ ಜನಸಾಮಾನ್ಯರಿಗೆ ಮುಟ್ಟುವಂತೆ ಮಾಡಲು ಹಾಗೂ ಟೆಂಡರ್​ಗಳ ಮೂಲಕ ಸರ್ಕಾರದ ಹಣ ಸೋರಿಕೆಯಾಗುವುದನ್ನ ತಪ್ಪಿಸುವ ನಿಟ್ಟಿನಲ್ಲಿ ಬೆರಳ ತುದಿಯಲ್ಲಿ ಟೆಂಡರ್ ಪ್ರಕಟಣೆ ಎಂಬ ವಿನೂತನ ಯೋಜನೆಯನ್ನು ವಾರ್ತಾ ಮತ್ತು ಪ್ರಚಾರ ಇಲಾಖೆ ಜಾರಿಗೆ‌ ತಂದಿದೆ.

ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಕಾಮಗಾರಿಗಳು, ಹರಾಜು, ಸರಕು ಸೇವೆ, ಖರೀದಿ, ಬಾಹ್ಯ ಮೂಲಕ ಗುತ್ತಿಗೆ ಆಧಾರದ ಸೇವೆಗಳನ್ನು ಕುರಿತ ಟೆಂಡರ್ ಹಾಗೂ ವರ್ಗೀಕೃತ ಜಾಹೀರಾತು ಮಾಹಿತಿಯನ್ನು ಮತ್ತಷ್ಟು ಪಾರದರ್ಶಕವಾಗಿಸಲು ಮುಂದಾಗಿದೆ. ಪತ್ರಿಕೆಗಳಿಗೆ ನೀಡುವ ಟೆಂಡರ್, ಸರಕು ಸೇವೆ, ಜಾಹೀರಾತು ಮಾಹಿತಿಯನ್ನು ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬ್ಲಾಗ್ www.varthabhavanramanagar.blogspot.com ಮೂಲಕ ಪ್ರಕಟಿಸಿ ಸಾರ್ವಜನಿಕರು, ಗುತ್ತಿಗೆದಾರರು ಹಾಗೂ ಸೇವೆ ಒದಗಿಸುವ ಸಂಸ್ಥೆಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಮುಂದಾಗಿದೆ.

ರಾಮನಗರ ವಾರ್ತಾ ಇಲಾಖೆಯಿಂದ ವಿನೂತನ ಹೆಜ್ಜೆ

ಸರ್ಕಾರದ ಯಾವುದೇ ಇಲಾಖೆ, ಪಂಚಾಯತ್ ರಾಜ್ ಸಂಸ್ಥೆ, ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳು, ನಿಗಮ ಮಂಡಳಿಗಳು, ಸಹಾಯಕ ಸಂಸ್ಥೆಗಳು ಅನುಷ್ಠಾನಗೊಳಿಸುವ ಕಾಮಗಾರಿ ಹಾಗೂ ಸರಕು ಸೇವೆಗಳ ಟೆಂಡರ್ ಜಾಹೀರಾತುಗಳನ್ನು ದಿನಪತ್ರಿಕೆಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕವೇ ನೀಡಬೇಕಿದೆ. ಈ ರೀತಿ ನೀಡಲಾಗುವ ಜಾಹೀರಾತುಗಳು ಪತ್ರಿಕೆಗಳ ಮೂಲಕ ಪ್ರಚಾರ ಮಾಡಲಾಗುತ್ತಿದ್ದರೂ ಜಾಲತಾಣದಲ್ಲಿ ದೊರೆಯುತ್ತಿರಲಿಲ್ಲ. ರಾಮನಗರ ಜಿಲ್ಲಾ ವಾರ್ತಾ ಇಲಾಖೆ ಬ್ಲಾಗ್​ನಲ್ಲಿ ಇನ್ನು ಮುಂದೆ ಎಲ್ಲಾ ಟೆಂಡರ್ ಜಾಹೀರಾತು ಪ್ರಕಟಣೆಗಳನ್ನು ಪ್ರಕಟಿಸುವುದರ ಜೊತೆಗೆ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಸುಲಭವಾಗಿ ಮಾಹಿತಿ ದೊರಕಲು ಯಾವ ಪತ್ರಿಕೆ ಈ ಜಾಹೀರಾತು ಪ್ರಕಟಿಸಲಿದೆ ಎಂಬ ಮಾಹಿತಿಯನ್ನು ಹಾಕಲಾಗುವುದು.

1 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳ ವರೆಗಿನ ಕಾಮಗಾರಿ ವ್ಯಾಪ್ತಿ ಪ್ರದೇಶದಲ್ಲಿನ ಎರಡು ಜಿಲ್ಲಾ ದಿನಪತ್ರಿಕೆಗಳು ಮತ್ತು ಮೂಲ ಜಿಲ್ಲೆಯಲ್ಲಿ ಮುದ್ರಣವಾಗಿ ಪ್ರಕಟಗೊಳ್ಳುವ ಒಂದು ಪ್ರಾದೇಶಿಕ ದಿನಪತ್ರಿಕೆಗೆ ಸರದಿಯನುಸಾರ ಪ್ರಕಟಿಸಲಾಗುವುದು. 1 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ಸರಕು ಖರೀದಿ ಬಾಹ್ಯಮೂಲದ ಗುತ್ತಿಗೆ ಆಧಾರಿತ ಸೇವೆಗಳು, ವಿಶೇಷ ಅಧಿಸೂಚನೆಗಳು, ನೌಕರರ ನೇಮಕಾತಿ, ಶಿಸ್ತು ಪ್ರಕರಣದ ವಿಷಯಗಳನ್ನು ಕಾಮಗಾರಿ ವ್ಯಾಪ್ತಿ ಸೇರಿ ಸರ್ಕಾರದ ನಿಯಮಾನುಸಾರ ನೀಡಲಾಗಿತ್ತದೆ. ಅಲ್ಲದೆ ಈ ಎಲ್ಲಾ ಮಾಹಿತಿ ಇನ್ನು ಮುಂದೆ ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬ್ಲಾಗ್​ನಲ್ಲಿ ದೊರೆಯಲಿದೆ. ಈ ಮಾಹಿತಿಯನ್ನು ಕಂಪ್ಯೂಟರ್ ಅಥವಾ ಮೊಬೈಲ್​ನಲ್ಲಿ ನೋಡಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎಸ್. ಶಂಕರಪ್ಪ ಅವರು ತಿಳಿಸಿದ್ದಾರೆ.

ಬೆರಳತುದಿಯಲ್ಲಿ ಟೆಂಡರ್ ಜಾಹೀರಾತು ಮಾಹಿತಿ ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತೊಂದು ವಿನೂತನ ಹೆಜ್ಜೆ ಅಕ್ರಮ ಟೆಂಡರ್ ತಡೆಗೆ‌ ಹೊಸ ಪ್ರಯತ್ನ ____________________________________________________________ ರಾಮನಗರ : ಸರ್ಕಾರದ ಯೋಜನೆಗಳು ಪಾರದರ್ಶಕ ಮತ್ತು ಮುಕ್ತವಾಗಿ ಜನಸಾಮಾನ್ಯರಿಗೆ ಮುಟ್ಟುವಂತೆ ಮಾಡಲು ಹಾಗೂ ಟೆಂಡರ್ ಗಳ ಮೂಲಕ ಸರ್ಕಾರದ ಹಣ ಸೋರಿಕೆಯಾಗುವುದನ್ನ ತಪ್ಪಿಸುವ ನಿಟ್ಟಿನಲ್ಲಿ ಬೆರಳ ತುದಿಯಲ್ಲಿ ಟೆಂಡರ್ ಪ್ರಕಟಣೆ ಎಂಬ ವಿನೂತನ ಯೋಜನೆಯನ್ನು ವಾರ್ತಾ ಮತ್ತು ಪ್ರಚಾರ ಇಲಾಖೆ ಜಾರಿಗೆ‌ ತಂದಿದೆ . ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಕಾಮಗಾರಿಗಳು, ಹರಾಜು, ಸರಕು ಸೇವೆ, ಖರೀದಿ, ಬಾಹ್ಯ ಮೂಲಕ ಗುತ್ತಿಗೆ ಆಧಾರದ ಸೇವೆಗಳನ್ನು ಕುರಿತ ಟೆಂಡರ್ ಹಾಗೂ ವರ್ಗೀಕೃತ ಜಾಹೀರಾತು ಮಾಹಿತಿಯನ್ನು ಮತ್ತಷ್ಟು ಪಾರದರ್ಶಕವಾಗಿಸಲು ಮುಂದಾಗಿದೆ. ಪತ್ರಿಕೆಗಳಿಗೆ ನೀಡುವ ಟೆಂಡರ್, ಸರಕು ಸೇವೆ, ಜಾಹೀರಾತು ಮಾಹಿತಿಯನ್ನು ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬ್ಲಾಗ್ www.varthabhavanramanagar.blogspot.com ಮೂಲಕ ಪ್ರಕಟಿಸಿ ಸಾರ್ವಜನಿಕರು, ಗುತ್ತಿಗೆದಾರರು ಹಾಗೂ ಸೇವೆ ಒದಗಿಸುವ ಸಂಸ್ಥೆಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಮುಂದಾಗಿದೆ. ಸರ್ಕಾರದ ಯಾವುದೇ ಇಲಾಖೆ, ಪಂಚಾಯತ್ ರಾಜ್ ಸಂಸ್ಥೆ, ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳು, ನಿಗಮ ಮಂಡಳಿಗಳು, ಸಹಾಯಕ ಸಂಸ್ಥೆಗಳು ಅನುಷ್ಠಾನಗೊಳಿಸುವ ಕಾಮಗಾರಿ ಹಾಗೂ ಸರಕು ಸೇವೆಗಳ ಟೆಂಡರ್ ಜಾಹೀರಾತುಗಳನ್ನು ದಿನಪತ್ರಿಕೆಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕವೇ ನೀಡಬೇಕಿದೆ. ಈ ರೀತಿ ನೀಡಲಾಗುವ ಜಾಹೀರಾತುಗಳು ಪತ್ರಿಕೆಗಳ ಮೂಲಕ ಪ್ರಚಾರ ಮಾಡಲಾಗುತ್ತಿದ್ದರೂ ಜಾಲತಾಣದಲ್ಲಿ ದೊರೆಯುತ್ತಿರಲಿಲ್ಲ. ರಾಮನಗರ ಜಿಲ್ಲಾ ವಾರ್ತಾ ಇಲಾಖೆ ಬ್ಲಾಗ್ನಲ್ಲಿ ಇನ್ನು ಮುಂದೆ ಎಲ್ಲಾ ಟೆಂಡರ್ ಜಾಹೀರಾತು ಪ್ರಕಟಣೆಗಳನ್ನು ಪ್ರಕಟಿಸುವುದರ ಜೊತೆಗೆ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಸುಲಭವಾಗಿ ಮಾಹಿತಿ ದೊರಕಲು ಯಾವ ಪತ್ರಿಕೆ ಈ ಜಾಹೀರಾತು ಪ್ರಕಟಿಸಲಿದೆ ಎಂಬ ಮಾಹಿತಿಯನ್ನು ಹಾಕಲಾಗುವುದು. ಬೈಟ್ : ಶಂಕರಪ್ಪ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ‌ ನಿರ್ದೇಶಕರು. 1 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳ ವರೆಗಿನ ಕಾಮಗಾರಿ ವ್ಯಾಪ್ತಿ ಪ್ರದೇಶದಲ್ಲಿನ ಎರಡು ಜಿಲ್ಲಾ ದಿನಪತ್ರಿಕೆಗಳು ಮತ್ತು ಮೂಲ ಜಿಲ್ಲೆಯಲ್ಲಿ ಮುದ್ರಣವಾಗಿ ಪ್ರಕಟಗೊಳ್ಳುವ ಒಂದು ಪ್ರಾದೇಶಿಕ ದಿನಪತ್ರಿಕೆಗೆ ಸರದಿಯನುಸಾರ ಪ್ರಕಟಿಸಲಾಗುವುದು. 1 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ಸರಕು ಖರೀದಿ ಬಾಹ್ಯಮೂಲದ ಗುತ್ತಿಗೆ ಆಧಾರಿತ ಸೇವೆಗಳು, ವಿಶೇಷ ಅಧಿಸೂಚನೆಗಳು, ನೌಕರರ ನೇಮಕಾತಿ, ಶಿಸ್ತು ಪ್ರಕರಣದ ವಿಷಯಗಳನ್ನು ಕಾಮಗಾರಿ ವ್ಯಾಪ್ತಿ ಸೇರಿ ಸರ್ಕಾರದ ನಯಮಾನುಸಾರ ನೀಡಲಾಗಿತ್ತದೆ ಅಲ್ಲದೆ ಈ ಎಲ್ಲಾ ಮಾಹಿತಿ ಇನ್ನು ಮುಂದೆ ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬ್ಲಾಗ್ನಲ್ಲಿ ದೊರೆಯಲಿದೆ. ಈ ಮಾಹಿತಿಯನ್ನು ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿ ಬೆರಳತುದಿಯಲ್ಲೇ ನೋಡಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎಸ್. ಶಂಕರಪ್ಪ ಅವರು ತಿಳಿಸಿದ್ದಾರೆ. ಸಾರ್ವಜನಿಕರ ಮೆಚ್ಚುಗೆ : ಟೆಂಡರ್ ಪ್ರಕಟಣೆಯನ್ನ ಕದ್ದು ಮುಚ್ಚಿ ಮಾಡಿಕೊಂಡು ಕಾಮಗಾರಿಗಳನ್ನ‌ ನಡೆಸದೇ ವಂಚಿಸುತ್ತಿದ್ದ ಭ್ರಷ್ಟರಿಗೆ ಕಡಿವಾಣ ಹಾಕಲು ಸರಳ ಹಾಗೂ ನಯವಾದ ಸೂತ್ರವನ್ನ ಇಲಾಖೆ ಮತ್ತು ನೂತನ ಅಧಿಕಾರಿ ಶಂಕರಪ್ಪ ಮಾಡ್ತಿರೋದು ನಿಜಕ್ಕೂ ಶ್ಲಾಘನೀಯ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ ಇದು ನಿಜಕ್ಕೂ ಮೆಚ್ಚಲೇಬೇಕಾದ ವಿಚಾರ ಎಂದು ಸ್ಥಳೀಯ ಕಿರಣ್ ಮೆಚ್ಚುಗೆ ವ್ಯಕ್ತಪಡಿಸಿದರು. ಬೈಟ್ 2 : ಕಿರಣ್ ಸ್ಥಳಿಯ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.