ರಾಮನಗರ: ಸಾರಿಗೆ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. 6ನೇ ವೇತನ ಆಯೋಗ ಜಾರಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಶೇ. 8ರಷ್ಟು ಸಂಬಳ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಸರ್ಕಾರದ ಆದಾಯದ ಮೇಲೆ ಇತರ ನಿರ್ಣಯಗಳನ್ನು ಮಾಡಲಾಗ್ತದೆ. ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ : ಖಾಸಗಿ ಬಸ್ ಓಡಿಸಿರುವುದು ಹಠಮಾರಿ ಧೋರಣೆಯಲ್ಲದೇ ಮತ್ತೇನು? ಎಸ್.ಆರ್.ಪಾಟೀಲ್ ಕಿಡಿ
ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಹಾಗಾಗಿ ಖಾಸಗಿಯವರ ಸಹಕಾರ ಪಡೆಯಲಾಗಿದೆ. ಈ ಕೂಡಲೇ ಸಾರಿಗೆ ನೌಕರರು ಮುಷ್ಕರ ಕೈಬಿಡಬೇಕು. ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.