ರಾಮನಗರ: ಕಲ್ಲಡ್ಕರವರು ಹಿರಿಯರು ಎಂಬ ಗೌರವ ನನಗಿದೆ. ವಯಸ್ಸಾದ ಮೇಲೆ ಅರಳೋ ಮರಳೋ ಅನ್ನೋಹಾಗೆ ತಲೆಕೆಟ್ಟಿರೋ ಜಾಗದಲ್ಲಿ ಅವರು ಇರಬೇಕಿತ್ತು ಇಲ್ಲಿಗೆ ಬಂದು ಬಾಯಿಗೆ ಬಂದಹಾಗೆ ಮಾತನಾಡ್ತಾರೆ. ಬಿಜೆಪಿ ಜೊತೆಗಿದ್ದು, ಕೆಂಪುಬಟ್ಟೆ ಹಾಕಿಕೊಂಡ್ರೆ ಮಾತ್ರ ಹಿಂದೂನಾ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ಕನಕಪುರಕ್ಕೆ ಬಂದು ಯೇಸು ಪ್ರತಿಮೆ ವಿರೋಧಿಸಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾಡಿದ ಭಾಷಣ ಹಿನ್ನೆಲೆಯಲ್ಲಿ ಸಂಸದ ಡಿ.ಕೆ ಸುರೇಶ್ ಗ್ರಾಮ ಪಂಚಾಯ್ತಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಪ್ರತಿಭಟನೆಗೆ ಬಂದು ಬಾಯಿಗೆ ಬಂದಹಾಗೆ ಮಾತಾಡಿದ್ದಾರೆ. ಅವರು ಹಿರಿಯರು ಎಂಬ ಗೌರವ ನನಗಿದೆ. ವಯಸ್ಸಾದ ಮೇಲೆ ಅರಳೋ ಮರಳೋ ಅನ್ನೋಹಾಗೆ ಇರಬೇಕಾದ ಜಾಗದಲ್ಲಿ ಇರಬೇಕಿತ್ತು. ತಲೆಕೆಟ್ಟಿರೋ ಜಾಗದಲ್ಲಿ ಅವರು ಇರಬೇಕಿದ್ದವರು, ಇಂತವರೆಲ್ಲಾ ಬಂದು ಕನಕಪುರದಲ್ಲಿ ಭಾಷಣ ಮಾಡಿ ಹೋಗ್ತಾರೆ. ಅದನ್ನ ಮಾಧ್ಯಮಗಳು ಬೆಳಗ್ಗೆಯಿಂದ ಸಂಜೆವರೆಗೆ ತೋರಿಸ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನಕಪುರಕ್ಕೆ ತನ್ನದೇ ಆದ ಇತಿಹಾಸ ಹಾಗೂ ಸಂಸ್ಕೃತಿ ಇದೆ. 30 ವರ್ಷಗಳಿಂದ ಡಿ.ಕೆ ಶಿವಕುಮಾರ್ ರಾಜಕಾರಣ ಮಾಡುತ್ತಿದ್ದಾರೆ. ಒಬ್ಬರೇ ಒಬ್ಬರನ್ನ ಮತಾಂತರ ಮಾಡಿದ್ದಾರೆ ಅಂತ ತೋರಿಸಿದ್ರೆ, ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ದ. ಕೆಂಪು ಬಟ್ಟೆ ಹಾಕಿಕೊಂಡ್ರೆ ಮಾತ್ರ ಹಿಂದೂಗಳು, ಬಿಜೆಪಿ ಜತೆ ಇದ್ದವರು ಮಾತ್ರ ಹಿಂದೂಗಳಾ..? ಎಂದು ಡಿ.ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.