ರಾಮನಗರ: ಜಿಲ್ಲೆಯ ಚನ್ನಪಟ್ಟಣ ನಗರದ ಮಹದೇಶ್ವರ ದೇವಸ್ಥಾನದ ಬಳಿಯ ಬಾಲಕರ ಹಾಸ್ಟೆಲ್ನಲ್ಲಿ ಕೊರೊನಾ ಕೇರ್ ಸೆಂಟರ್ನಿಂದ ಸ್ಥಳೀಯರು ಪ್ರತಿ ಕ್ಷಣವೂ ಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ.
ಸುಮಾರು 35 ಜನ ಕೊರೊನಾ ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಇದೇ ಬಡಾವಣೆಯಲ್ಲಿ 500 ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಕೋವಿಡ್ ಗೈಡ್ಲೈನ್ ಪ್ರಕಾರವಾಗಿ ಯಾವುದೇ ಕೋವಿಡ್ ಕೇರ್ ಸೆಂಟರ್ ಜನವಸತಿ ಪ್ರದೇಶದಿಂದ 10 ಮೀಟರ್ ದೂರದಲ್ಲಿರಬೇಕು.
ಜೊತೆಗೆ ಇದರಿಂದಾಗಿ ಕೋವಿಡ್ ಸೋಂಕಿತರಲ್ಲದ ಜನರಿಗೆ ಯಾವುದೇ ಸಮಸ್ಯೆಯಾಗಬಾರದೆಂಬ ನಿಯಮವಿದೆ. ಆದರೆ ಇದೆಲ್ಲವನ್ನ ಸ್ವತಃ ಸರ್ಕಾರಿ ಅಧಿಕಾರಿಗಳ ವರ್ಗ ಪಾಲಿಸುತ್ತಿಲ್ಲ. ಇದರಿಂದಾಗಿ ನೊಂದಿರುವ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲ್ಲಿನ ಕೋವಿಡ್ ಕೇರ್ ಸೆಂಟರ್ ಬೇರೆಡೆಗೆ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ನಿಂದ ಅನಾಥರಾದ ಮಕ್ಳಳಿಗೆ ಬಾಲ ಸೇವಾ ಯೋಜನೆ ಘೋಷಿಸಿದ ಸಿಎಂ