ರಾಮನಗರ : ಮಾಗಡಿ ತಾಲೂಕು ಕಚೇರಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆ 48 ಗಂಟೆಗಳ ಕಾಲ ಕಚೇರಿ ಸೀಲ್ಡೌನ್ ಆಗಲಿದೆ. ತಾಲೂಕು ಕಚೇರಿ ಮುಂದಿನ 3 ದಿನಗಳ ಕಾಲ ಬಂದ್ ಆಗಿರುತ್ತದೆಂದು ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಸದ್ಯ ಮಾಗಡಿಯ ಕೊರೊನಾ ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆಯಾಗಿದೆ. ಈವರೆಗೂ 124 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 117 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. 9 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.