ETV Bharat / state

ರಾಮನಗರದಲ್ಲಿ ಬುನಾದಿ ಅಗೆಯುವಾಗ ಪುರಾತನ ಕಟ್ಟಡ ಪತ್ತೆ: ಟಿಪ್ಪು ಕಾಲದ್ದಿರಬಹುದೆಂಬ ಶಂಕೆ - ರೈಲ್ವೆ ಸ್ಟೇಷನ್ ರಸ್ತೆಯ ಯುಕೋ ಬ್ಯಾಂಕ್ ಸಮೀಪ ಹಳೆಯ ನಿವೇಶನವೊಂದರಲ್ಲಿ ಪುರಾತನ ಕಟ್ಟಡ ಪತ್ತೆಯಾಗಿದೆ

ನವಾಜ್ ಅಹಮದ್ ಎಂಬುವರ ಮಾಲೀಕತ್ವದ ಖಾಲಿ ನಿವೇಶನದಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಪಾಯ ತೆಗೆಯುವಾಗ ಟಿಪ್ಪು ಸುಲ್ತಾನ್​ ಕಾಲದ್ದು ಎಂದು ಹೇಳಲಾಗುತ್ತಿರುವ ಕಟ್ಟಡ ಪತ್ತೆಯಾಗಿದೆ.

An ancient building was found while digging the foundation in Ramnagara

author img

By

Published : Jul 5, 2022, 4:17 PM IST

ರಾಮನಗರ: ರೈಲ್ವೆ ಸ್ಟೇಷನ್ ರಸ್ತೆಯ ಯುಕೋ ಬ್ಯಾಂಕ್ ಸಮೀಪ ಹಳೆಯ ನಿವೇಶನವೊಂದರಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಬುನಾದಿ ಅಗೆಯುವಾಗ ಭೂಮಿಯೊಳಗೆ ಪುರಾತನ ಕಟ್ಟಡವೊಂದು ಪತ್ತೆಯಾಗಿದೆ.

ನವಾಜ್ ಅಹಮದ್ ಎಂಬುವವರ ಮಾಲೀಕತ್ವದ ಖಾಲಿ ನಿವೇಶನದಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಪಾಯ ತೆಗೆಯುವಾಗ ಕಟ್ಟಡ ಕಂಡುಬಂದಿದೆ. ಬಹಳ ಪುರಾತನ ಕಟ್ಟಡವಾಗಿದ್ದು, ಬಹಳ ಗಟ್ಟಿಮುಟ್ಟಾಗಿದ್ದು, ಒಳ ಭಾಗದಲ್ಲಿ ಗಾರೆ ಹಾಕಲಾಗಿದೆ. ಹಲವಾರು ವರ್ಷ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದರೂ ಗೋಡೆಗಳಿಗೆ ಯಾವುದೇ ಧಕ್ಕೆಯಾಗಿಲ್ಲ.

ಇದು ತುಂಬಾ ಹಳೇ ಕಟ್ಟಡ. ಈ ಹಿಂದೆ ನಾವು ಬೇರೊಬ್ಬರ ಬಳಿ ಖರೀದಿ ಮಾಡಿದ್ದೆವು. ಆದರೆ, ಈಗ ಅಂಗಡಿ ನಿರ್ಮಾಣ ಮಾಡಲು ಪಾಯ ತೆಗೆಸುವಾಗ ಸಣ್ಣ ಕಿಂಡಿ ಕಂಡು ಬಂತು. ಆಗ ಇದು ಬೆಳಕಿಗೆ ಬಂದಿದೆ. ನಮಗೆ ಇದರಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದಿದ್ದಾರೆ ಮಾಲೀಕರು.

ಸುಮಾರು 1930 ರಲ್ಲಿ ನಗರಸಭೆಯ ನೀರಿನ ಟ್ಯಾಂಕ್​ನ್ನು ಇಲ್ಲಿ ನಿರ್ಮಾಣ ಮಾಡಿದ್ದರು ಎಂದು ಕೆಲವರು ನಮಗೆ ತಿಳಿಸಿದ್ದರು. ನಂತರ 1960 ರಲ್ಲಿ ಈ ಜಾಗ ಅಬ್ದುಲ್ ಅಜೀಂ ಎನ್ನುವರು ನಗರಸಭೆಯ ಹರಾಜಿನಲ್ಲಿ ತೆಗೆದುಕೊಂಡಿದ್ದರು ತದ ನಂತರ ತಮ್ಮ ಸಂಬಂಧಿಗೆ ಗಿಫ್ಟ್‌ ಡೀಡ್ ಮಾಡಿದ್ದರು. ಈ ಜಾಗವನ್ನು ನಾವು 2009 ರಲ್ಲಿ ಖರೀದಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಟಿಪ್ಪು ಕಾಲದ ಶಸ್ತ್ರಗಾರ ?: ನೆಲದಾಳದಲ್ಲಿ ಪತ್ತೆಯಾಗಿರುವ ಕಟ್ಟಡ ಯಾವುದು ಎಂಬುದು ಇನ್ನೂ ನಿಖರವಾಗಿಲ್ಲದಿದ್ದರೂ ಕಟ್ಟಡ ರೂಪುರೇಷೆ ಗಮನಿಸಿದರೆ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್​ ಕಾಲದ ಮದ್ದಿನ ಮನೆಯ ರೀತಿ ಗೋಚರಿಸುತ್ತಿದೆ. ಅಲ್ಲದೇ ಈ ಭಾಗದಲ್ಲಿ ಟಿಪ್ಪು ಅಳ್ವಿಕೆಯ ಕುರುಹು ಇರುವುದರಿಂದ ಬಹುತೇಕ ಟಿಪ್ಪು ಕಾಲದ ಶಸ್ತ್ರಗಾರ ಇರಬೇಕು ಎನ್ನಲಾಗುತ್ತಿದೆ.

ಅಧಿಕಾರಿಗಳು ನಾಪತ್ತೆ : ರಾಮನಗರ ಪ್ರದೇಶವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ಯಾರಿ ಕ್ಲೂಸ್ ಆಳ್ವಿಕೆ ನಡೆಸಿದ ಹಿನ್ನೆಲೆಯಲ್ಲಿ ಕ್ಲೂಸ್ ಪೇಟೆ ಎಂಬ ಹೆಸರು ಇತ್ತು. ಅದಕ್ಕೆ ಸಾಕ್ಷಿಯಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಶಾಸನವು ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಸಂಪೂರ್ಣ ಹಾಳಾಗಿದ್ದು, ಅದನ್ನು ಸಂರಕ್ಷಣೆ ಮಾಡಬೇಕಾಗಿದೆ. ಇಂದು ಪತ್ತೆಯಾಗಿರುವ ಕಟ್ಟಡ ರಾಮನಗರದ ಇತಿಹಾಸವನ್ನು ಮತ್ತೆ ಕೆದಕಬೇಕಾದ ಅನಿವಾರ್ಯತೆ ಇದೆ. ಪುರಾತನ ಕಟ್ಟಡದ ಮೇಲೆ ಹಲವು ಕಟ್ಟಡಗಳು ನಿರ್ಮಾಣವಾಗಿದ್ದು. ಭೂಮಿಯಿಂದ ಕೇವಲ 6-7 ಅಡಿಗಳ ಕೆಳ ಭಾಗದಲ್ಲಿ ಕಟ್ಟಡ ಪತ್ತೆಯಾಗಿರುವುದು ಇತಿಹಾಸದ ಕುರುಹುಗಳನ್ನು ಸಂರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂಬಂತಿದೆ.

ಇದನ್ನೂ ಓದಿ: 'ಕಲಿ' ಚಿತ್ರದ ವಿವಾದಾತ್ಮಕ ಪೋಸ್ಟರ್‌: ಲಖನೌದಲ್ಲಿ ನಿರ್ದೇಶಕಿ ವಿರುದ್ಧ ಎಫ್‌ಐಆರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.