ETV Bharat / state

Ramanagar Crime: ಹೆಣ್ಣಿನ ಧ್ವನಿಯಲ್ಲಿ ಮಾತಾಡಿ ₹41 ಲಕ್ಷ ಸುಲಿದ ಕಿಡಿಗೇಡಿ ಸೆರೆ - ದಾಸರಹಳ್ಳಿಯ ಮೆಟ್ರೋ ಸ್ಟೇಷನ್

Ramanagar extortion case: ಬ್ಲಾಕ್​ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರಾಮನಗರ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ.

ಯುವಕ ರವಿಕುಮಾರ್ (24)
ಯುವಕ ರವಿಕುಮಾರ್ (24)
author img

By

Published : Aug 7, 2023, 10:49 PM IST

ರಾಮನಗರ : ಹೆಣ್ಣಿನ ಧ್ವನಿಯಲ್ಲಿ ವ್ಯಕ್ತಿಯೊಬ್ಬರಿಗೆ ಬ್ಲಾಕ್​ಮೇಲ್ ಮಾಡಿ 41 ಲಕ್ಷ ರೂಪಾಯಿ ವಂಚಿಸಿದ್ದ ರವಿಕುಮಾರ್ (24) ಎಂಬಾತನನ್ನು ರಾಮನಗರ ಸಿಇಎನ್ ಪೊಲೀಸರು ಸೆರೆ ಹಿಡಿದಿದ್ದಾರೆ. ಕುಣಿಗಲ್ ತಾಲೂಕಿನ ಕಗ್ಗರಿಯ ರವಿಕುಮಾರ್ ಬೆಂಗಳೂರಿನಲ್ಲಿ ನೆಲೆಸಿದ್ದ. ದ್ವಿತೀಯ ಪಿಯುಸಿ ಓದಿರುವ ಈತ ಖಾಸಗಿ ಡಾಟಾ ಬೇಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ತಂತ್ರಜ್ಞಾನದಲ್ಲಿ ನಿಪುಣನಾಗಿದ್ದನಲ್ಲದೇ ಹೆಣ್ಣಿನ ಧ್ವನಿಯಲ್ಲಿ ಮಾತನಾಡುವ ಕಲೆ ಈತನಿಗೆ ಕರಗತವಾಗಿತ್ತು.

ತನ್ನ ಈ ಎರಡು ಕೌಶಲಗಳನ್ನು ಬಳಸಿಕೊಂಡು ಪುರುಷರನ್ನು ಬಲೆಗೆ ಬೀಳಿಸಿ, ಬ್ಲಾಕ್​ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ. ಕೃತ್ಯಕ್ಕಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಗೀತಾ ಸೆಕ್ಸಿ ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದಾನೆ. ಪುರುಷರಿಗೆ ತಾನೇ ರಿಕ್ವೆಸ್ಟ್ ಕಳುಹಿಸಿ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಹೆಸರಲ್ಲಿ ಪುರುಷರೊಂದಿಗೆ ಸೆಕ್ಸ್ ಚಾಟಿಂಗ್ ಮಾಡುತ್ತಿದ್ದ ಈತ, ನಂತರ ಅವರ ಮೊಬೈಲ್ ಸಂಖ್ಯೆ ಪಡೆದು ಹೆಣ್ಣಿನ ದನಿಯಲ್ಲೇ ಗಂಟೆಗಟ್ಟಲೆ ಮಾತನಾಡುತ್ತಿದ್ದ. ವಿವಿಧ ಕಾರಣಗಳನ್ನು ಹೇಳಿ ಹಣ ಕೀಳುತ್ತಿದ್ದ. ಅದೇ ರೀತಿ, ದೂರುದಾರ ಹಾರೋಹಳ್ಳಿಯ ರಾಜೇಶ್ ಎಂಬವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾನೆ.

ಇದಲ್ಲದೇ ಫೇಸ್‌ಬುಕ್‌ನಲ್ಲಿ ಪರಿಚಯವಾಗುತ್ತಿದ್ದ ಪುರುಷರಿಗೆ ಆರೋಪಿ, ಗೂಗಲ್‌ನಲ್ಲಿ ಸಿಗುತ್ತಿದ್ದ ಸುಂದರ ಯುವತಿಯವರ ಫೋಟೊಗಳನ್ನು ಕಳಿಸಿ, ಅದು ನಾನೇ ಎಂದು ನಂಬಿಸುತ್ತಿದ್ದ. ಸುಂದರಿಯೆಂದು ಮೋಹಕ್ಕೆ ಮಾರು ಹೋದವರು ಬ್ಲಾಕ್‌ಮೇಲ್ ಜಾಲಕ್ಕೆ ಬೀಳುತ್ತಿದ್ದರು. ಈ ರೀತಿ ಬಂದ ಹಣದಲ್ಲಿ ರವಿಕುಮಾರ್ ಯುವಕರೊಂದಿಗೆ ಟ್ರಿಪ್​ಗೆ ಹೋಗಿ ಮೋಜು-ಮಸ್ತಿ ಮಾಡುತ್ತಿದ್ದನಂತೆ. ತನ್ನನ್ನು ಬಿಟ್ಟು ಹೋಗದಂತೆ, ಅವರು ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದನಂತೆ.

ಹಣ ಕೊಡದೇ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಮರ್ಯಾದೆ ಕಳೆಯುವುದಾಗಿ ಬ್ಲಾಕ್​ಮೇಲ್‌ ಮಾಡಲಾರಂಭಿಸಿದ್ದಾನೆ. ಹೀಗೆ ಆರು ತಿಂಗಳಲ್ಲಿ 41 ಲಕ್ಷ ರೂ. ವಸೂಲಿ ಮಾಡಿದ್ದ. ಈ ಕಾಟದಿಂದ ಬೇಸತ್ತ ರಾಜೇಶ್ ಠಾಣೆಗೆ ಬಂದು ದೂರು ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಇದೇ ರೀತಿ ಹಲವರಿಗೆ ವಂಚಿಸಿರುವ ಸಾಧ್ಯತೆ ಇದೆ. ಕೆಲವರು ಬೇಗನೆ ಎಚ್ಚೆತ್ತುಕೊಂಡು ಈತನ ಸಹವಾಸ ಬಿಟ್ಟಿದ್ದಾರೆ. ಅದೆಲ್ಲದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯಲ್ಲಿ ಹೆಣ್ಣಿನ ಭಾವನೆಗಳು ಹೆಚ್ಚು: ರಾಜೇಶ್ ಜೊತೆ ಆರೋಪಿ ಮಾತನಾಡುತ್ತಿದ್ದ ಮೊಬೈಲ್‌ ಸಂಖ್ಯೆಯ ಕರೆ ವಿವರ, ವಾಟ್ಸ್‌ಆ್ಯಪ್ ಚಾಟಿಂಗ್ ಸಂಖ್ಯೆಯ ಜಾಡು ಹಿಡಿದು ಆತನ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕಡೆಗೆ, ದಾಸರಹಳ್ಳಿಯ ಮೆಟ್ರೋ ಸ್ಟೇಷನ್ ಬಳಿಯ ಪೇಯಿಂಗ್ ಗೆಸ್ಟ್‌ನಲ್ಲಿದ್ದ ಆರೋಪಿಯನ್ನು ಬಂಧಿಸಲಾಯಿತು. ಆತನಲ್ಲಿ ಹೆಣ್ಣಿನ ಭಾವನೆಗಳು ಹೆಚ್ಚಾಗಿದ್ದವು. ಇದರಿಂದ ಮುಜುಗರಕ್ಕೀಡಾಗಿದ್ದ ಕುಟುಂಬದವರು ಮನೆಯಿಂದ ಹೊರ ಹಾಕಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಆತ, ಅದನ್ನು ಬಿಟ್ಟು ಬ್ಲಾಕ್​ಮೇಲ್ ಮಾಡಿ ಹಣ ಸಂಪಾದಿಸುವ ಕೃತ್ಯಕ್ಕೆ ಕೈ ಹಾಕಿದ್ದ. ವಿಚಾರಣೆ ಸಂದರ್ಭದಲ್ಲಿ ಈ ವಿಚಾರ ಬಾಯ್ದಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಮಹಿಳೆಯರಿಗೆ ರಿಯಾಯಿತಿ ಆಸೆ ತೋರಿಸಿ ಲಕ್ಷಾಂತರ ರೂ ಮೋಸ ಮಾಡಿದ ಕಂಪನಿ.. ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.