ETV Bharat / state

ವಿದೇಶದಲ್ಲೂ ಜನಪ್ರಿಯ 'ನಂದಿನಿ' ಹಾಲು ಉತ್ಪನ್ನಗಳು: ಬಾಂಗ್ಲಾದಿಂದ 500 ಟನ್​​ ಹಾಲಿನ ಪುಡಿ ಬೇಡಿಕೆ

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಶಿವನಹಳ್ಳಿ ಬಳಿ ನಿರ್ಮಿಸಿರುವ ನಂದಿನಿ ಹಾಲು ಉತ್ಪನ್ನ ಸಂಕೀರ್ಣದಲ್ಲಿ ಉತ್ಪಾದಿಸುವ ಕೆನೆ ರಹಿತ ಹಾಲಿನ ಪುಡಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈಗಾಗಲೇ ವಿದೇಶಗಳಿಂದ ಬೇಡಿಕೆ ಬಂದಿದೆ. ಹಾಗೆಯೇ ಬಾಂಗ್ಲಾದೇಶದಿಂದ 500 ಟನ್ ಹಾಲಿನ ಪುಡಿಗೆ ಬೇಡಿಕೆ ಬಂದಿದ್ದು, ಇಂದು ಸುಮಾರು 75 ಟನ್ ಹಾಲಿನ ಪೌಡರ್ ಹೊತ್ತ ಮೂರು ಕಂಟೇನರ್​ಗಳ ರಫ್ತಿಗೆ ನಿಗಮದ ಅಧಿಕಾರಿಗಳು ಮತ್ತು ಚುನಾಯಿತ ನಿರ್ದೇಶಕರು ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು.

500-tons-of-nandini-milk-powder-demand-from-bangladesh
ನಂದಿನಿ ಹಾಲು
author img

By

Published : Jun 18, 2021, 7:59 PM IST

ರಾಮನಗರ: ಕೊರೊನಾ ಭೀತಿಯ ನಡುವೆಯೂ ಹಾಲು ಉತ್ಪಾದನೆಯಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಸದ್ಯ ಈ ಹಾಲಿನಿಂದ ತಯಾರಾಗುವ ಉತ್ಪನ್ನಗಳನ್ನು ಬೇರೆ ರಾಷ್ಟ್ರಕ್ಕೆ ರಪ್ತು ಮಾಡಲು ಬೆಂಗಳೂರು ಡೈರಿ ಮುಂದಾಗಿದೆ.

ವಿದೇಶದಲ್ಲಿ ಬಹು ಬೇಡಿಕೆ ಪಡೆದ 'ನಂದಿನಿ ಹಾಲು' ಉತ್ಪನ್ನಗಳು

ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ನೂತನವಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಶಿವನಹಳ್ಳಿ ಬಳಿ ನಿರ್ಮಿಸಿರುವ ನಂದಿನಿ ಹಾಲು ಉತ್ಪನ್ನ ಸಂಕೀರ್ಣದಲ್ಲಿ ಉತ್ಪಾದಿಸುವ ಕೆನೆ ರಹಿತ ಹಾಲಿನ ಪುಡಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹಾಗೆಯೇ ಬಾಂಗ್ಲಾದೇಶದಿಂದ 500 ಟನ್ ಹಾಲಿನ ಪುಡಿಗೆ ಬೇಡಿಕೆ ಬಂದಿದ್ದು, ಇಂದು ಸುಮಾರು 75 ಟನ್ ಹಾಲಿನ ಪೌಡರ್ ಹೊತ್ತ ಮೂರು ಕಂಟೇನರ್​ಗಳ ರಪ್ತಿಗೆ ನಿಗಮದ ಅಧಿಕಾರಿಗಳು ಮತ್ತು ಚುನಾಯಿತ ನಿರ್ದೇಶಕರು ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು.

ನಂದಿನಿ ಹಾಲು ಉತ್ಪನ್ನ ಸಂಕೀರ್ಣ ಕನಕಪುರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸಂಪೂರ್ಣ ಸ್ವಯಂಚಾಲಿತ ವಿದೇಶಿ ಯಂತ್ರೋಪಕರಣಗಳನ್ನು ಅಳವಡಿಸಿ ದಿನನಿತ್ಯ ಸರಾಸರಿ 7 ಲಕ್ಷ ಲೀಟರ್ ಸಾಮರ್ಥ್ಯದ ಡೈರಿ ಘಟಕವನ್ನು ಸ್ಥಾಪಿಸಲಾಗಿದೆ. ಸದರಿ ಡೈರಿ ಘಟಕದಲ್ಲಿ ದಿನನಿತ್ಯ ಸರಾಸರಿ 35 ಮೆಟ್ರಿಕ್ ಟನ್ (MT) ಹಾಲಿನ ಪುಡಿ 35 ಮೆಟ್ರಿಕ್​ ಟನ್​​ ಚೀಸ್ ಮತ್ತು 1 ಲಕ್ಷ ಲೀಟರ್ ದೀರ್ಘ ಜೀವಿತಾವಧಿಯ ಹಾಲು, 1.5 ಲಕ್ಷ ಲೀಟರ್ ಪ್ಯಾಕೆಟ್ ಹಾಲು, 50.000 ಕೆ.ಜಿ. ಸಾಮರ್ಥ್ಯದ ಮೊಸರು, 2 ಮೆಟ್ರಿಕ್​ ಟನ್​​ (MT) ತುಪ್ಪ ಮತ್ತು 20 ಟನ್ ಸಾಮರ್ಥ್ಯದ ಬೆಣ್ಣೆ ಉತ್ಪಾದಿಸುವ ಯಂತ್ರೋಪಕರಣಗಳನ್ನು ಅಳವಡಿಸಲಾಗಿರುತ್ತದೆ.

ಮುಂದಿನ ಒಂದು ವರ್ಷದಲ್ಲಿ 60 MT ಸಾಮರ್ಥ್ಯದ ಮತ್ತೊಂದು ಕೆನೆ ರಹಿತ ಹಾಲಿನ ಪುಡಿ ತಯಾರು ಮಾಡುವ ನೂತನ ಘಟಕವನ್ನ ಸ್ಥಾಪನೆ ಮಾಡಲಾಗುತ್ತದೆ. ಇನ್ನು ಈಗಾಗಲೇ ಕನಕಪುರದ ಮೆಗಾ ಡೈರಿಯಿಂದ ಸಿಂಗಾಪುರ, ಭೂತಾನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಇಲ್ಲಿ ತಯಾರಾಗುವ ಹಾಲಿನ ಉತ್ಪನ್ನಗಳನ್ನ ರಫ್ತು ಮಾಡಲಾಗಿದೆ. ಈಗ ಬಾಂಗ್ಲಾದೇಶದಿಂದ ನಮ್ಮ ಡೈರಿಗೆ ಕೆನೆ ರಹಿತ ಹಾಲಿನ ಪುಡಿಗೆ ಬೇಡಿಕೆ ಬಂದ ಹಿನ್ನೆಲೆ ಈಗ 500 MT ಉತ್ಪನ್ನವನ್ನ ರಫ್ತು ಮಾಡಲಾಗ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.