ETV Bharat / state

ವಂಚನೆ ಆರೋಪ ಪ್ರಕರಣ; ಬಿಗ್‌ಬಾಸ್ ಮನೆಯಿಂದ ಬಂದು ಕೋರ್ಟ್​​ಗೆ ಹಾಜರಾದ BIG BOSS ಸ್ಪರ್ಧಿ ಚೈತ್ರಾ - CHAITRA KUNDAPURA APPEARED IN COURT

ಎಂಎಎಲ್ಎ ಅಭ್ಯರ್ಥಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಆರೋಪ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಗಿದ್ದ ಚೈತ್ರಾ ಅವರು ಬಿಗ್​ ಬಾಸ್​ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಹೋಗಿದ್ದರು.

Chaithra Kundapura spotted near Court
ಕೋರ್ಟ್​ ಬಳಿ ಕಾಣಿಸಿಕೊಂಡ ಚೈತ್ರಾ ಕುಂದಾಪುರ (ETV Bharat)
author img

By ETV Bharat Karnataka Team

Published : Dec 3, 2024, 2:16 PM IST

Updated : Dec 3, 2024, 2:32 PM IST

ಬೆಂಗಳೂರು: ಕಿರುತೆರೆಯ ಬಿಗ್‌ಬಾಸ್ ಸೀಸನ್- 11ರ ಸ್ಪರ್ಧಿಯಾಗಿರುವ ಚೈತ್ರಾ ಅವರು ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಬೈಂದೂರು ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಎಲ್ಎ ಅಭ್ಯರ್ಥಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚಿಸಿದ ಆರೋಪ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಸೇರಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತ್ತು.

ನೋಟಿಸ್ ಬಂದ ಹಿನ್ನೆಲೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ನಗರದ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾಗಿ ವಾಪಾಸ್ ತೆರಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಆರೋಪದಡಿ ಚೈತ್ರಾ ಅವರನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಬಳಿಕ ಜಾಮೀನು ಪಡೆದಿದ್ದ ಚೈತ್ರಾ, ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು.

ಕೋರ್ಟ್​​ಗೆ ಹಾಜರಾದ BIG BOSS ಸ್ಪರ್ಧಿ ಚೈತ್ರಾ (ETV Bharat)

ಇದನ್ನೂ ಓದಿ: 'ಪ್ರೀತಿ ಪಡೆಯಲು ಮತ್ತೆ ಬರುವೆ': ಬಿಗ್​ ಬಾಸ್​​ನಿಂದ ಹೊರಬಂದು ಸುದೀಪ್​​, ಕನ್ನಡಿಗರಿಗೆ ಶೋಭಾ ಶೆಟ್ಟಿ ಪತ್ರ

Last Updated : Dec 3, 2024, 2:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.