ETV Bharat / entertainment

'ಪ್ರೀತಿ ಪಡೆಯಲು ಮತ್ತೆ ಬರುವೆ': ಬಿಗ್​ ಬಾಸ್​​ನಿಂದ ಹೊರಬಂದು ಸುದೀಪ್​​, ಕನ್ನಡಿಗರಿಗೆ ಶೋಭಾ ಶೆಟ್ಟಿ ಪತ್ರ

ಸ್ವಇಚ್ಛೆಯಿಂದ ಬಿಗ್​ ಬಾಸ್​​ ಮನೆಯಿಂದ ಹೊರಬಂದಿರುವ ನಟಿ ಶೋಭಾ ಶೆಟ್ಟಿ ಸುದೀರ್ಘ ಪತ್ರ ಬರೆದಿದ್ದಾರೆ.

Sudeep, Shobha Shetty
ಸುದೀಪ್​​, ಶೋಭಾ ಶೆಟ್ಟಿ (Photo: ETV Bharat, Bigg boss team)
author img

By ETV Bharat Entertainment Team

Published : 18 hours ago

''ಬಿಗ್​ ಬಾಸ್​​ ಸೀಸನ್​ 11''ರ ಹತ್ತನೇ ವಾರದ ಆಟ ಸಾಗಿದೆ. ಒಂಭತ್ತನೇ ವಾರಾಂತ್ಯದ ಸಂಚಿಕೆಯಲ್ಲಿ ಟ್ವಿಸ್ಟ್​ ಒಂದು ನಡೆದಿದ್ದು, ಶೋಭಾ ಶೆಟ್ಟಿ ಸ್ವಇಚ್ಛೆಯಿಂದ ಮನೆಯಿಂದ ಹೊರಬಂದಿದ್ದಾರೆ. ಆಟ ಆಡುವ ಮನಸ್ಸಿದ್ದರೂ, ಆರೋಗ್ಯ ಸಹಕರಿಸಿದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ.

ಈಗಾಗಲೇ 50 ದಿನಗಳು ಪೂರ್ಣಗೊಂಡಿದ್ದಂತ ಹೊತ್ತಲ್ಲಿ ವೈಲ್ಡ್​ ಕಾರ್ಡ್​ ಮೂಲಕ ಹೋದ ನಟಿ ಶೋಭಾ ಶೆಟ್ಟಿ ಎರಡೇ ವಾರಕ್ಕೆ ಬಿಗ್​ ಬಾಸ್​ ಮನೆಯಲ್ಲಿ ತಮ್ಮ ಆಟ ಮುಗಿಸಿದ್ದಾರೆ. ವೈಲ್ಡ್​ ಕಾರ್ಡ್​ ಸ್ಪರ್ಧಿ ಹೀಗೆ ಹೊರಬಂದಿದ್ದು ಬಿಗ್​ ಬಾಸ್​ ಇತಿಹಾಸದಲ್ಲಿ ಬಹುಶಃ ಇದೇ ಮೊದಲು ಎನ್ನಬಹುದು. ಮನೆಯಿಂದ ಹೊರಬಂದಿರುವ ಅವರೀಗ ನಿರೂಪಕ ಸುದೀಪ್​, ಬಿಗ್​ ಬಾಸ್​ ತಂಡ ಮತ್ತು ಕನ್ನಡಿಗರನ್ನುದ್ದೇಶಿಸಿ ಮಾತನಾಡಿದ್ದಾರೆ.

ಪತ್ರದಲ್ಲೇನಿದೆ? ನಟಿ ಶೋಭಾ ಶೆಟ್ಟಿ ಹೆಸರಿನ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್​​ಫಾರ್ಮ್​​ನಲ್ಲಿ ಶೇರ್ ಆಗಿರುವ ಪೋಸ್ಟ್​​ನಲ್ಲಿ, ''ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್​ ಬಾಸ್​ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಇಚ್ಛೆ ಇದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ, ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಾಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ!. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರ ಆಗಿದ್ದರೆ, ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗೂ ನನ್ನ ಪ್ರೀತಿಯ ಕಿಚ್ಚ ಸುದೀಪ್​ ಸರ್​​ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ನಿಮ್ಮ ಪ್ರೀತಿಯ ಶೋಭಾ ಶೆಟ್ಟಿ'' ಎಂದು ಬರೆದುಕೊಂಡಿದ್ದಾರೆ. ​

ಆಗಿದ್ದೇನು? ಸೂಪರ್​ ಸಂಡೆ ವಿತ್ ಸುದೀಪ್​ ಸಂಚಿಕೆ ಭಾನುವಾರ ರಾತ್ರಿ ಪ್ರಸಾರವಾಯಿತು. ಎಂದಿನಂತೆ ಎಪಿಸೋಡ್​ ಕೊನೆಗೆ ಎಲಿಮಿನೇಷನ್​ ಒಂದು ಆಗಬೇಕಿತ್ತು. ಅಂದಿನ ಮನರಂಜನೆ ಮುಗಿದ ಬಳಿಕ ಸುದೀಪ್​ ಅವರು ಎಲಿಮಿನೇಷನ್​ ವಿಚಾರವೆತ್ತಿದರು. ಬಹುಮತಗಳೊಂದಿಗೆ ವೈಲ್ಡ್​​ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿ ಬೇಗನೇ ಸೇವ್​ ಆದ್ರು. ಇವರ ಬಳಿಕ ಎಲಿಮಿನೇಷನ್​ಗೆ ನಾಮಿನೇಟ್​ ಆದವರ ಪೈಕಿ ಚೈತ್ರಾ, ಶಿಶಿರ್​, ಐಶ್ವರ್ಯಾ ಉಳಿದುಕೊಂಡಿದ್ದರು. ಸೇವ್ ಆದ ಸಂದರ್ಭ ಸರ್ವರಿಗೂ ಧನ್ಯವಾದ ಅರ್ಪಿಸಿದ ಶೋಭಾ ಶೆಟ್ಟಿ, ನನ್ನಿಂದ ಇರಲು ಆಗುತ್ತಿಲ್ಲ ಎಂಬಂತೆ ಮಾತು ಶುರು ಮಾಡಿದ್ರು.

ಆಗ ಸುದೀಪ್​​ ಧೈರ್ಯ ತುಂಬುವ ಕೆಲಸ ಮಾಡಿದ್ರು. ನೀವು ಬಿಗ್​ ಬಾಸ್​ಗೆ ಬಂದಿರೋ ಉದ್ದೇಶವೇನು? ನಿಮಗೆ ವೋಟ್​​ ಹಾಕಿರುವ ಜನರಿಗೆ ಏನು ಉತ್ತರ ಕೊಡುತ್ತೀರಿ ಎಂದು ತಿಳಿಸಿದ ನಟ, ತಮ್ಮ ಸ್ವಯಂ ಅನುಭವವನ್ನು ಶೇರ್ ಮಾಡಿದ್ರು. ತಾಯಿಯ ನಿಧನದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದನ್ನು ನೆನಪಿಸಿಕೊಂಡರು. ಅವರ ಮಾತುಗಳನ್ನು ಕೇಳಿ ಶೋಭಾ ಬಿಗ್​ ಬಾಸ್​ನಲ್ಲಿ ಉಳಿಯಲು ನಿರ್ಧರಿಸಿದ್ರು.

ಇದನ್ನೂ ಓದಿ: ಬಿಗ್ ಬಾಸ್​ ಮನೆ ತೊರೆದ ಶೋಭಾ ಶೆಟ್ಟಿ: ನಿಮ್ಮ ಅಭಿಪ್ರಾಯವೇನು?

ನಂತರ ಉಳಿದ ಮೂರು ಜನರ ಪೈಕಿ ಚೈತ್ರಾ ಕುಂದಾಪುರ ಸೇವ್​ ಆದ್ರು. ಶಿಶಿರ್​ ಮತ್ತು ಐಶ್ವರ್ಯಾ ಅವರ ಪೈಕಿ ಯಾರು ಈ ವಾರ ಆಟ ಮುಗಿಸಲಿದ್ದಾರೆ ಎಂದು ತಿಳಿಯುವ ಸಂದರ್ಭ ಮತ್ತೆ ದನಿ ಎತ್ತಿದ ಶೋಭಾ ಅವರನ್ನು ಸುದೀಪ್​ ಮಾತನಾಡಲು ಬಿಡಲಿಲ್ಲ. ನಂತರ ಗೋಗರೆದ ಹಿನ್ನೆಲೆ ಮಾತಿಗೆ ಅವಕಾಶ ಕೊಟ್ರು. ಮನೆಯಿಂದ ಹೊರಹೋಗುತ್ತೇನೆಂದು ಮತ್ತೆ ಕಣ್ಣೀರಿಟ್ಟರು. ಅಸಮಧಾನಗೊಂಡ ಸುದೀಪ್​ ಶೋ ಮುಗಿಸಿ ಹೊರಟರು. ಮತಗಳನ್ನು ಹಾಕಿ ಬೆಂಬಲಿಸಿದ ಕನ್ನಡಿಗರಲ್ಲಿ ಸುದೀಪ್​ ಕ್ಷಮೆಯಾಚಿಸಿ, ಧನ್ಯವಾದ ಅರ್ಪಿಸಿದ್ದರು. ನಿನ್ನೆ ಪ್ರಸಾರ ಕಂಡ ಸಂಚಿಕೆಯಲ್ಲಿ ಶೋಭಾ ಶೆಟ್ಟಿ ಸರ್ವರಲ್ಲೂ ಕ್ಷಮೆ ಕೋರಿ ಮನೆಯಿಂದ ಹೊರ ಬಂದರು. ಆ ಕ್ಷಣ ಬಹಳ ಭಾವನಾತ್ಮಕವಾಗಿತ್ತು.

ಇದನ್ನೂ ಓದಿ: ಮಾಡದ ತಪ್ಪಿಗೆ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸುದೀಪ: ಮಾಣಿಕ್ಯನ ವ್ಯಕ್ತಿತ್ವದ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.