ರಾಯಚೂರು: ಎಲ್ಲೆಡೆ ಏಕಕಾಲಕ್ಕೆ ಮಳೆಯಾಗಿರುವುದರಿಂದ ಯೂರಿಯಾ ಗೊಬ್ಬರದ ಕೊರತೆಯಾಗಿದೆ. ಆ ಕೊರತೆಯನ್ನ ನಿಗಿಸಲು ಗೊಬ್ಬರ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಸದಾನಂದಗೌಡ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲಾ ಕಡೆಯೂ ಉತ್ತಮ ಮಳೆ ಸುರಿದಿದೆ. ಇದರಿಂದಾಗಿ ಏಕ ಕಾಲಕ್ಕೆ ಯೂರಿಯಾ ಗೊಬ್ಬರದ ಬೇಡಿಕೆ ಅಧಿಕವಾಗಿ, ಕೊರತೆ ಉಂಟಾಗಿದೆ. ಆದಷ್ಟು ಬೇಗ ಗೊಬ್ಬರವನ್ನು ಆಮದು ಮಾಡಿಕೊಂಡು ಕೊರತೆ ಸರಿದೂಗಿಸಲಾಗುವುದು ಎಂದರು.
ರಾಜ್ಯದ ದಾವಣಗೆರೆ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ರಸಗೊಬ್ಬರ ತಯಾರಿಕಾ ಕಾರ್ಖಾನೆ ಸ್ಥಾಪನೆ ಮಾಡಬೇಕು ಎನ್ನುವ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದರ ಆಧಾರಮೇಲೆ ತಜ್ಞರ ತಂಡ ಪರಿಶೀಲನೆ ಮಾಡಿದಾಗ, ದಾವಣಗೆರೆ ಸೂಕ್ತ ಸ್ಥಳವೆಂದು ಅಂತಿಮಗೊಳಿಸಲಾಗಿದೆ. ಅಲ್ಲಿ ರಸಗೊಬ್ಬರ ತಯಾರಿಕಾ ಕಾರ್ಖಾನೆ ಸ್ಥಾಪನೆಗೆ ತಯಾರಿ ನಡೆದಿದೆ ಎಂದರು.
ರಾಜ್ಯದ ಜನೌಷಧಿ ಕೇಂದ್ರಗಳಲ್ಲಿ ಕೊರತೆ ಇರುವುದು ನಿಜ. ಪ್ರಸಕ್ತ ವರ್ಷ ಸುಮಾರು 3 ಸಾವಿರ ಹೊಸ ಮಳಿಗೆಗಳನ್ನ ಆರಂಭಿಸಿದ್ದರಿಂದ ಪೂರೈಕೆಗೆ ತೊಂದರೆಯಾಗಿತ್ತು. ಇದೀಗ ಸಮಸ್ಯೆಯನ್ನ ಪರಿಹರಿಸಲಾಗಿದೆ. ಇನ್ನು, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ವಿಷಯವನ್ನ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ರು.