ರಾಯಚೂರು: ಮಾಲ್ನಿಂದ ಹೊರ ಬರುತ್ತಿದ್ದ ಯುವಕನ ಮೇಲೆ ಏಕಾಏಕಿ ಹಲ್ಲೆ ಮಾಡಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ರಿಲಯನ್ಸ್ ಮಾರ್ಟ್ ಮುಂದೆ ಕಳೆದ ವಾರ ಘಟನೆ ನಡೆದಿದೆ. ಮಾಲ್ನಿಂದ ಬೈಕ್ ಮೇಲೆ ಹೊರ ಬರುತ್ತಿದ್ದ ವ್ಯಕ್ತಿಯ ಮೇಲೆ ಯುವಕರು ಮನಬಂದಂತೆ ಥಳಿಸಿದ್ದಾರೆ. ನಂತರ ನಿರ್ಮಾಣ ಹಂತದ ಕಟ್ಟಡದ ಒಳಗಡೆ ಕರೆದೊಯ್ದು ಅಲ್ಲಿಯೂ ಹಲ್ಲೆ ನಡೆಸಿ, ಅಜ್ಞಾತ ಸ್ಥಳದಲ್ಲಿ ಮದ್ಯ ಕುಡಿಸಿದ್ದಾರೆ.
ಸಂಕೇತ್ ಹಲ್ಲೆಗೊಳಗಾದ ಯುವಕ. ಆರೋಪಿಗಳನ್ನು ಅಭಿಷೇಕ್ ಹಾಗೂ ಮತ್ತು ಆತನ ನಾಲ್ವರು ಸ್ನೇಹಿತರು ಎಂದು ಹೇಳಲಾಗುತ್ತಿದೆ. ಸದರ್ ಬಜಾರ್ ಪೊಲೀಸರು ಅಭಿಷೇಕ್ನನ್ನು ಬಂಧಿಸಿದ್ದು, ಉಳಿದವರಿಗೆ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನೂ ಸಾವಿಗೆ ಶರಣಾದ ರೈತ ಸಂಘದ ಅಧ್ಯಕ್ಷನ ಪತ್ನಿ