ETV Bharat / state

ರಿಮ್ಸ್​ನಲ್ಲಿ ಪಿಡಿಯಾಟ್ರಿಕ್​​, ಅರ್ಥೋಪೆಡಿಕ್​​ ಸ್ನಾತಕೋತ್ತರ ಕೋರ್ಸ್​ಗೆ ಗ್ರೀನ್​​​ ಸಿಗ್ನಲ್​​​​ - ರಿಮ್ಸ್​ನಲ್ಲಿ ಪಿಡಿಯಾಟ್ರಿಕ್, ಅರ್ಥೋಪೆಡಿಕ್ ಸ್ನಾತಕೋತ್ತರ ಕೋರ್ಸ್​

ಇಲ್ಲಿನ ರಿಮ್ಸ್​ ವೈದ್ಯಕೀಯ ಕಾಲೇಜಿನಲ್ಲಿ 2020-21ನೇ ಶೈಕ್ಷಣಿಕ ವರ್ಷದಿಂದ ಕ್ಲಿನಿಕಲ್ ಪಿಡಿಯಾಟ್ರಿಕ್ ಮತ್ತು ಅರ್ಥೋಪೆಡಿಕ್ ವಿಭಾಗದ ಎರಡು ಸ್ನಾತಕೋತ್ತರ ಕೋರ್ಸ್​ಗಳ ಪ್ರಾರಂಭಕ್ಕೆ ಗ್ರಿನ್ ಸಿಗ್ನಲ್ ದೊರೆತಿದೆ.

two pg courses start in RIMS
ಸ್ನಾತಕೋತ್ತರ ಕೋರ್ಸ್​ಗೆ ಗ್ರೀನ್​ ಸಿಗ್ನಲ್​
author img

By

Published : Nov 26, 2019, 6:02 PM IST

ರಾಯಚೂರು: ಇಲ್ಲಿನ ರಿಮ್ಸ್​ ವೈದ್ಯಕೀಯ ಕಾಲೇಜಿನಲ್ಲಿ 2020-21ನೇ ಶೈಕ್ಷಣಿಕ ವರ್ಷದಿಂದ ಕ್ಲಿನಿಕಲ್ ಪಿಡಿಯಾಟ್ರಿಕ್ ಮತ್ತು ಅರ್ಥೋಪೆಡಿಕ್ ವಿಭಾಗದ ಎರಡು ಸ್ನಾತಕೋತ್ತರ ಕೋರ್ಸ್​ಗಳ ಪ್ರಾರಂಭಕ್ಕೆ ಗ್ರಿನ್ ಸಿಗ್ನಲ್ ದೊರೆತಿದೆ. ಮೆಡಿಸಿನ್ ವಿಭಾಗದಲ್ಲಿ ಪಿಜಿ ಆರಂಭಕ್ಕೂ ಅನುಮತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿದ್ದು, ರಿಮ್ಸ್​​​ನಲ್ಲಿ ಸದ್ಯ ಇರುವ ಸೌಲಭ್ಯಗಳನ್ನು ಪರಿಗಣಿಸಿ ಎಂಸಿಐ ನೂತನವಾಗಿ ಎರಡು ಪಿಜಿ ಕೋರ್ಸ್ ಆರಂಭಕ್ಕೆ ಅನುಮತಿ ನೀಡಿದೆ. ಇದಕ್ಕೆ ತಕ್ಕಂತೆ ಪ್ರಸ್ತುತ ಇರುವ 500 ಹಾಸಿಗೆ ಸಾಮರ್ಥ್ಯದ ರಿಮ್ಸ್ ಆಸ್ಪತ್ರೆಯನ್ನು 800 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ 300 ಹಾಸಿಗೆಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.

ಸ್ನಾತಕೋತ್ತರ ಕೋರ್ಸ್​ಗೆ ಗ್ರೀನ್​ ಸಿಗ್ನಲ್​

ಕಳೆದ ಶೈಕ್ಷಣಿಕ ವರ್ಷದಿಂದ ಸಂಸ್ಥೆಯಲ್ಲಿ ಎಂಬಿಬಿಎಸ್ ಪ್ರವೇಶ ಸಾಮರ್ಥ್ಯವನ್ನು 100 ವಿದ್ಯಾರ್ಥಿಗಳಿಂದ 150ಕ್ಕೆ ಏರಿಕೆ ಮಾಡಲಾಗಿದ್ದು, ಈಗಾಗಲೇ ಕಾಲೇಜಿನಲ್ಲಿನ 6 ವಿಭಾಗಗಳಲ್ಲಿ ಪ್ರೀ ಕ್ಲಿನಿಕಲ್ ಹಾಗೂ ಪ್ಯಾರಾ ಕ್ಲಿನಿಕಲ್ ಪಿಜಿಯಲ್ಲಿ ತಲಾ ಎರಡು ಸೀಟುಗಳ ಪ್ರವೇಶ ನೀಡಲಾಗಿದೆ. ಕ್ಲಿನಿಕಲ್ ವಿಭಾಗದಲ್ಲಿ ಮೊದಲ ಬಾರಿಗೆ 2 ಪಿಜಿ ಕೋರ್ಸ್ ಪ್ರಾರಂಭಿಸಲಾಗುತ್ತಿದೆ. ಕ್ಲಿನಿಕಲ್ ಪಿಜಿ ಕೋರ್ಸ್ ಆರಂಭಕ್ಕೆ ಬೇಕಾದ ಯಂತ್ರೋಪಕರಣ ಖರೀದಿಗೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ತರಗತಿ ನಡೆಸಲು ಕೊಠಡಿ, ಅಗತ್ಯ ಪ್ರಯೋಗಾಲಯ ತಯಾರಿ ನಡೆಸಲಾಗುತ್ತಿದ್ದು, ಬೋಧನಾ ಸಿಬ್ಬಂದಿಯನ್ನು ನೇರ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪಿರಾಪುರ ಹೇಳಿದ್ದಾರೆ.

ಪಿಡಿಯಾಟ್ರಿಕ್ ಹಾಗೂ ಅರ್ಥೋಪೆಡಿಕ್ ವಿಭಾಗದಲ್ಲಿ ತಲಾ 2 ಸೀಟುಗಳ ಪ್ರವೇಶಕ್ಕೆ ಮಾತ್ರ ಅನುಮತಿ ಸಿಕ್ಕಿದೆ. ಕ್ಲಿನಿಕಲ್ ಮೆಡಿಸಿನ್ ವಿಭಾಗದ ಪಿಜಿ ಆರಂಭಕ್ಕೆ ಎಂಸಿಐನಿಂದ ಸಮ್ಮತಿ ಸಿಗುವ ಆಶಾಭಾವನೆ ಇದೆ. ಇದರಿಂದ ಈ ವಿಭಾಗದಲ್ಲಿ 4 ಸೀಟ್​ಗಳ ಪ್ರವೇಶಕ್ಕೆ ಅನುಮತಿ ದೊರಕಲಿದೆ. ಎಂಬಿಬಿಎಸ್ ಸೀಟ್​​ಗಳ ಸಂಖ್ಯೆ ಏರಿಕೆಯ ಜತೆಯಲ್ಲಿ ಕ್ಲಿನಿಕಲ್ ಸ್ನಾತಕೋತ್ತರ ಕೋರ್ಸ್ ಪ್ರಾರಂಭಕ್ಕೆ ಅನುವು ಮಾಡಿಕೊಟ್ಟಿರುವುದು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿಲಿದೆ.

Intro:¬ಸ್ಲಗ್: ನೂತನವಾಗಿ 2 ಪಿಜಿ ಕೋರ್ಸ್ ಆರಂಭಕ್ಕೆ ಸಮ್ಮತಿ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 26-11-2019
ಸ್ಥಳ: ರಾಯಚೂರು
ಆಂಕರ್: ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಇರುವ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್)ನಲ್ಲಿ 2 ಕ್ಲಿನಿಕಲ್ ಪಿಡಿಯಾಟ್ರಿಕ್ ಸ್ನಾತಕೋತ್ತರ ಕೋರ್ಸ್ ಗಳು ಅನುಮತಿ ನೀಡಲಾಗಿದೆ. ಇದರಿಂದ ಜಿಲ್ಲೆಯ ಕ್ಲಿನಿಕಲ್ ಸ್ನಾತಕೋತ್ತರ ಕೋರ್ಸ್ ಮಾಡುವ ಪದವಿಧರರಿಗೆ ಸರಕಾರ ಅನುವು ಮಾಡಿಕೊಟ್ಟಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.Body:
ವಾಯ್ಸ್ ಓವರ್.1: ರಾಯಚೂರಿ ರಿಮ್ಸ್ ನಲ್ಲಿ ವೈದ್ಯಕೀಯ ಕಾಲೇಜಿನಲ್ಲಿ 2020-21ನೇ ಶೈಕ್ಷಣಿಕ ವರ್ಷದಿಂದ ಕ್ಲಿನಿಕಲ್ ಪಿಡಿಯಾಟ್ರಿಕ್ ಮತ್ತು ಅರ್ಥೋಪೆಡಿಕ್ ವಿಭಾಗದ ಎರಡು ಸ್ನಾತಕೋತ್ತರ ಕೋರ್ಸ್ಗಳ ಪ್ರಾರಂಭಕ್ಕೆ ಗ್ರಿನ್ ಸಿಗ್ನಲ್ ದೊರೆತಿದೆ. ಇದಾದ ಬಳಿಕ ಮೆಡಿಸಿನ್ ವಿಭಾಗದಲ್ಲಿ ಪಿಜಿ ಆರಂಭಕ್ಕೂ ಅನುಮತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ರಿಮ್ಸ್ ನಲ್ಲಿ ಸದ್ಯ ಇರುವ ಸೌಲಭ್ಯದ ಪರಿಗಣಿಸಿ ಎಂಸಿಐ ನೂತನವಾಗಿ ಎರಡು ಪಿಜಿ ಕೋರ್ಸ್ ಆರಂಭಕ್ಕೆ ಅನುಮತಿ ನೀಡಿದೆ. ಇದಕ್ಕೆ ತಕ್ಕಂತೆ ಪ್ರಸ್ತುತ ಇರುವ 500 ಹಾಸಿಗೆ ಸಾಮರ್ಥ್ಯದ ರಿಮ್ಸ್ ಆಸ್ಪತ್ರೆಯನ್ನು 800 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ 300 ಹಾಸಿಗೆಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.
ವಾಯ್ಸ್ ಓವರ್.2: ಕಳೆದ ಶೈಕ್ಷಣಿಕ ವರ್ಷದಿಂದ ಸಂಸ್ಥೆಯಲ್ಲಿ ಎಂಬಿಬಿಎಸ್ ಪ್ರವೇಶ ಸಾಮರ್ಥ್ಯವನ್ನು 100 ವಿದ್ಯಾರ್ಥಿಗಳಿಂದ 150ಕ್ಕೆ ಏರಿಕೆ ಮಾಡಲಾಗಿದ್ದು ಈಗಾಗಲೇ ಕಾಲೇಜಿನಲ್ಲಿನ 6 ವಿಭಾಗಗಳಲ್ಲಿನ ಪ್ರಿ ಕ್ಲಿನಿಕಲ್ ಹಾಗೂ ಪ್ಯಾರಾ ಕ್ಲಿನಿಕಲ್ ಪಿಜಿಯಲ್ಲಿ ತಲಾ ಎರಡು ಸೀಟುಗಳ ಪ್ರವೇಶ ನೀಡಲಾಗಿದೆ. ಕ್ಲಿನಿಕಲ್ ವಿಭಾಗದಲ್ಲಿ ಮೊದಲ ಬಾರಿಗೆ 2 ಪಿಜಿ ಕೋರ್ಸ್ ಪ್ರಾರಂಭಿಸಲಾಗುತ್ತಿದೆ. ಕ್ಲಿನಿಕಲ್ ಪಿಜಿ ಕೋರ್ಸ್ ಆರಂಭಕ್ಕೆ ಬೇಕಾದ ಯಂತ್ರೋಪಕರಣ ಖರೀದಿಗೆ ಸಂಬಂಸಿದಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ತರಗತಿ ನಡೆಸಲು ತರಗತಿ ಕೊಠಡಿ, ಅಗತ್ಯ ಪ್ರಯೋಗಾಲಯ ತಯಾರಿ ನಡೆಸಲಾಗುತ್ತಿದ್ದು, ಬೋಧನಾ ಸಿಬ್ಬಂದಿಗಳನ್ನ ನೇರ ಸಂದರ್ಶನವನ್ನು ನಡೆಸಿ ನೇಮಕ ಮಾಡಿಕೊಳ್ಳಲಾಗಿತ್ತಿದೆ ಅಂತಾರೆ ರಿಮ್ಸ್ ನಿರ್ದೇಶಕರು.
ವಾಯ್ಸ್ ಓವರ್.3: ಪಿಡಿಯಾಟ್ರಿಕ್ ಹಾಗೂ ಅರ್ಥೋಪೆಡಿಕ್ ವಿಭಾಗದಲ್ಲಿ ತಲಾ 2 ಸೀಟುಗಳ ಪ್ರವೇಶಕ್ಕೆ ಮಾತ್ರ ಅನುಮತಿ ಸಿಕಿದೆ. ಕ್ಲಿನಿಕಲ್ ಮೆಡಿಸಿನ್ ವಿಭಾಗದ ಪಿಜಿ ಆರಂಭಕ್ಕೆ ಎಂಸಿಐನಿಂದ ಸಮ್ಮತಿ ಸಿಗುವ ಆಶಾಭಾವನೆ ಇದೆ. ಇದರಿಂದ ಈ ವಿಭಾಗದಲ್ಲಿ 4 ಸೀಟ್ಗಳ ಪ್ರವೇಶಕ್ಕೆ ಅನುಮತಿ ದೊರಕಲಿದೆ. ಎಂಬಿಬಿಎಸ್ ಸೀಟ್ ಗಳ ಸಂಖ್ಯೆ ಏರಿಕೆಯ ಜತೆಯಲ್ಲಿ ಕ್ಲಿನಿಕಲ್ ಸ್ನಾತಕೋತ್ತರ ಕೋರ್ಸ್ ಪ್ರಾರಂಭಕ್ಕೆ ಸಿಕಿರುವುದು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಬ್ಯಾಸಕ್ಕೆ ಸಹಕಾರಿಯಾಗಿಲಿದೆ.
Conclusion:
ಬೈಟ್.1: ಡಾ.ಬಸವರಾಜ ಪಿರಾಪುರ, ನಿರ್ದೇಶಕ, ರಿಮ್ಸ್, ರಾಯಚೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.