ETV Bharat / state

ರಾಯಚೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಮಾಡಲು ಒಪ್ಪಿಗೆ

author img

By

Published : Dec 14, 2020, 5:26 PM IST

ನಗರಸಭೆ ಅಧ್ಯಕ್ಷ ಈ. ವಿನಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆಯನ್ನ ಮಹಾನಗರ ಪಾಲಿಕೆಯಾಗಿ ಮಾಡಲು ಒಪ್ಪಿಗೆ ಸೂಚಿಸಲಾಯಿತು.

ರಾಯಚೂರು ನಗರಸಭೆ ಸಭೆ
ರಾಯಚೂರು ನಗರಸಭೆ ಸಭೆರಾಯಚೂರು ನಗರಸಭೆ ಸಭೆ

ರಾಯಚೂರು: ನಗರಸಭೆಯನ್ನ ಮಹಾನಗರ ಪಾಲಿಕೆ ಮಾಡಲು ಇಂದು ರಾಯಚೂರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು. ಕಳೆದ ಎರಡು ವರ್ಷದ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ನಂತರ ಇಂದು ಮೊದಲ ಸಭೆ ನಡೆಯಿತು.

ನಗರಸಭೆ ಅಧ್ಯಕ್ಷ ಈ. ವಿನಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ

ನಗರಸಭೆ ಅಧ್ಯಕ್ಷ ಈ. ವಿನಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಮೊದಲ ಅಜೆಂಡವಾಗಿ ರಾಯಚೂರು ನಗರಸಭೆಯನ್ನ ಮಹಾನಗರ ಪಾಲಿಕೆಯಾಗಿ ಮಾಡುವ ಕುರಿತು ವಿಷಯವನ್ನು ಮಂಡಿಸುವ ಮೂಲಕ ಒಪ್ಪಿಗೆ ಸೂಚಿಸಲಾಯಿತು. ಮಹಾನಗರ ಪಾಲಿಕೆಯನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಬೇಕಾದ್ದರಿಂದ, ನಗರದ ಕೂದಲಳತೆ ದೂರದಲ್ಲಿರುವ 20 ಗ್ರಾಮಗಳನ್ನ ಸೇರಿಸುವ ಮೂಲಕ ಪಾಲಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗುವುದು ಎಂದು ಅಧ್ಯಕ್ಷರು ಈ ವೇಳೆ ತಿಳಿಸಿದ್ರು.

ಇದನ್ನು ಓದಿ:ಎಲ್ಲ ಬಸ್​ಗಳ ಸಂಚಾರ ಆರಂಭ: ಡಿಸಿ ಆರ್. ವೆಂಕಟೇಶ್ ಕುಮಾರ್​

ಇದಾದ ಬಳಿಕ 2020-2021ನೇ ಸಾಲಿನ ಹಂಚಿಕೆಯಾದ 15.82 ಕೋಟಿ ರೂಪಾಯಿ ಕ್ರೀಯಾ ಯೋಜನೆಯ ವಿಷಯ ಪ್ರಸ್ತಾಪವಾಯಿತು. ಆಗ ಹಲವು ಸದಸ್ಯರು ಈ ಕ್ರಿಯಾ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಮೊದಲಿನಿಂದ ನಗರಸಭೆ ಎಲ್ಲ ವಾರ್ಡ್​ಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ಹೀಗಾಗಿ ಈ ಕ್ರಿಯಾ ಯೋಜನೆ ರದ್ದುಪಡಿಸಿ, ಎಲ್ಲರಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ರು. ಈ ವಿಚಾರಕ್ಕೆ ಕಾಂಗ್ರೆಸ್, ಬಿಜೆಪಿ ಸದಸ್ಯರ ಮಧ್ಯೆ ಜಟಾಪಟಿ ಕೂಡ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.