ETV Bharat / state

ಹಳ್ಳಿ ಪ್ರತಿಭೆಯ ಶ್ರಮಕ್ಕೆ ತಕ್ಕ ಪ್ರತಿಫಲ... ಕೂಲಿ ಮಾಡುವ ದಂಪತಿ ಪುತ್ರ ಈಗ ತಹಶೀಲ್ದಾರ್​​​​! - Tahsildar Tirupati V Patil Amid Poverty

ಸಮಯ ಪ್ರಜ್ಞೆ, ಸತತ ಪ್ರಯತ್ನ, ದೃಢನಂಬಿಕೆ, ಸಾಧಿಸುವ ಛಲ... ಇವೆಲ್ಲವೂ ಇದ್ರೆ ಅದೆಂಥದೇ ಸಾಧನೆಯನ್ನಾದ್ರೂ ಮಾಡೋಕೆ ಸಾಧ್ಯ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದ ತಿರುಪತಿ ವಿ. ಪಾಟೀಲ್ ಅದನ್ನ ಸಾಬೀತು ಮಾಡಿ ತೋರಿಸಿದ್ದಾರೆ.

tahsildar-tirupati-v-patil
ಕೂಲಿ ಕೆಲಸದ ದಂಪತಿ ಪುತ್ರ ತಹಶೀಲ್ದಾರ್
author img

By

Published : Dec 27, 2019, 11:05 PM IST

ರಾಯಚೂರು: ಬಡತನ ಸಾಧಿಸೋದಕ್ಕೆ ಅಡ್ಡಿಯಾಗೋದಿಲ್ಲ ಅನ್ನೋದು ಹಲವು ಬಾರಿ ಸಾಬೀತಾಗಿದೆ. ರಾಯಚೂರಿನ ಹಳ್ಳಿ ಪ್ರತಿಭೆಯೊಂದು ಎಲ್ಲಾ ಕೊರತೆಗಳ ಮಧ್ಯೆ ಸತತ ಪರಿಶ್ರಮದಿಂದ ತಹಶೀಲ್ದಾರ್‌ ಆಗ್ಬೇಕೆಂಬ ಕನಸನ್ನ ನನಸಾಗಿಸಿಕೊಂಡಿದೆ.

ಸಮಯ ಪ್ರಜ್ಞೆ, ಸತತ ಪ್ರಯತ್ನ, ದೃಢನಂಬಿಕೆ, ಸಾಧಿಸುವ ಛಲ... ಇವೆಲ್ಲವೂ ಇದ್ರೆ ಅದೆಂಥದೇ ಸಾಧನೆಯನ್ನಾದ್ರೂ ಮಾಡೋಕೆ ಸಾಧ್ಯ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದ ತಿರುಪತಿ ವಿ. ಪಾಟೀಲ್ ಅದನ್ನ ಸಾಬೀತು ಮಾಡಿ ತೋರಿಸಿದ್ದಾರೆ. ವಡಿಕೆಪ್ಪ-ದೇವಮ್ಮ ದಂಪತಿಯ ಹಿರಿಯ ಪುತ್ರ ತಿರುಪತಿ ಈಗ ತಹಶೀಲ್ದಾರ್‌ ಆಗ್ತಿದ್ದಾರೆ. ಬಡತನ ಮೆಟ್ಟಿ ಸಾಧನೆಯ ಶಿಖರ ಏರಿದ್ದಾರೆ. ತಿರುಪತಿಯವರ ಹೆತ್ತವರಿಗೆ ಸ್ವಂತ ಜಮೀನಿಲ್ಲ. ಕೂಲಿ ಮಾಡಿ ಮಕ್ಕಳನ್ನ ಬೆಳೆಸಿದ್ದಾರೆ. ಹೆತ್ತವರ ಕಷ್ಟಗಳನ್ನು ಕಣ್ಣಾರೆ ಕಂಡ ಕಾರಣವೋ ಏನೋ ಹಿರಿಯ ಮಗನಿಗೆ ಸಾಧಿಸುವ ಛಲ ಬಂದುಬಿಟ್ಟಿತ್ತು.

ತಿರುಪತಿ ವಿ. ಪಾಟೀಲ್ ಬೆಳೆದು ಬಂದ ಹಾದಿ:

tahsildar-tirupati-v-patil
ಕೂಲಿ ಮಾಡುವ ದಂಪತಿ ಪುತ್ರ ಈಗ ತಹಶೀಲ್ದಾರ್
ಹುಟ್ಟೂರು ಯಲಗಟ್ಟಾದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 1ರಿಂದ 10ನೇ ತರಗತಿ ಓದು. ಪಿಯುಸಿ ಬಳಿಕ ಡಿಎಡ್ ಜತೆಗೆ ಪದವಿ ಕೂಡ ಪಡ್ಕೊಂಡಿದ್ದ ತಿರುಪತಿ ಅವರು ಎಂಎ ಅರ್ಥಶಾಸ್ತ್ರ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದಿದ್ದಾರೆ. 3 ವರ್ಷ ಲಿಂಗಸುಗೂರಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿದ್ದುಕೊಂಡು ಪದವಿ ಮುಗಿಸುವಾಗಲೇ ತಹಶೀಲ್ದಾರ್ ಆಗ್ಬೇಕೆಂಬ ಕನಸು ಕಂಡಿದ್ದರು. ಹಾಗೆ ಕನಸು ಬಿತ್ತಿದ್ದವರು ಹಾಸ್ಟೆಲ್‌ ಮೇಲ್ವಿಚಾರಕ ಶಿವಪ್ಪ, ಕಾಲೇಜಿನ ಆಡಳಿತ ಅಧಿಕಾರಿ ಬಸವಂತರಾಯ ಕುರಿ, ಪ್ರಾಚಾರ್ಯ ಹೆಚ್.ಎಲ್.ಪವಾರ್ ಹಾಗೂ ಉಪನ್ಯಾಸಕರಂತೆ. ಬೆನ್ನು ತಟ್ಟಿ ಆಡಿದ ಆ ಉತ್ಸಾಹದ ನುಡಿಗಳಿಂದ ಪ್ರೇರಿತನಾಗಿ ಈಗ ತಹಶೀಲ್ದಾರ್ ಆಗಿರುವೆ ಅಂತಾರೆ ತಿರುಪತಿ ವಿ. ಪಾಟೀಲ್.

ತಹಶೀಲ್ದಾರ್‌ ಆಗುವ ಮೊದಲು ವಿವಿಧ ಹುದ್ದೆಗಳು:
ಎದೆಗೆ ಬಿದ್ದ ಅಕ್ಷರ ಇವರಿಗೆ ಫಲ ಕೊಟ್ಟಿದೆ. ಮೊದಲಿಗೆ ಎಸ್‌ಡಿಎ ಹುದ್ದೆ ಗಿಟ್ಟಿಸಿದ್ದರು. ಬಳಿಕ ಎಫ್‌ಡಿಎ (2 ಬಾರಿ), ಕಂದಾಯ ನಿರೀಕ್ಷಕ, ಚೀಪ್ ಆಫೀಸರ್ ಗ್ರೇಡ್-2, ಮಾರ್ಕೆಟಿಂಗ್ ಅಸಿಸ್ಟೆಂಟ್, ವಸತಿ ಶಾಲೆಯ ಶಿಕ್ಷಕ, ಅಬಕಾರಿ ರಕ್ಷಕ ಹಾಗೂ ಅಬಕಾರಿ ಉಪ ನಿರೀಕ್ಷಕ ಹುದ್ದೆಗಳಿಗೂ ತಿರುಪತಿ ಆಯ್ಕೆಯಾಗಿದ್ದರು. 2 ವರ್ಷ ಧಾರವಾಡದ ಹಲವಾರು ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳಲ್ಲಿ ಅರ್ಥಶಾಸ್ತ್ರ ಮತ್ತು ಭೂಗೋಳ ಶಾಸ್ತ್ರದ ಉಪನ್ಯಾಸಕರಾಗಿದ್ದರು. ವಿಷಯವನ್ನ ಸರಳೀಕರಿಸಿ ಬೋಧಿಸಿದ ಪರಿಣಾಮ ಅಪಾರ ಶಿಷ್ಯ ಬಳಗ ಕೂಡ ಹೊಂದಿದ್ದಾರೆ. ಪ್ರಸ್ತುತ ಹಾವೇರಿ ಜಿಲ್ಲೆ ಹಿರೇಕೆರೂರು ರೇಂಜ್‌ನ ಅಬಕಾರಿ ಉಪ ನಿರೀಕ್ಷಕರಾಗಿರುವ ತಿರುಪತಿ ಅವರು ತಮ್ಮ 2ನೇ ಪ್ರಯತ್ನದಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 1083 ಅಂಕ ಪಡೆದು 43ನೇ
ರ‌್ಯಾಂಕ್​​ನೊಂದಿಗೆ ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಕಷ್ಟ ಕಾಲದಲ್ಲಿ ನೆರವಾದ ಸಹೋದರರು, ಸ್ನೇಹಿತರು ಹಾಗೂ ಶಿಕ್ಷಕರಿಗೆಲ್ಲ ಋಣಿ ಅಂತಾ ಹೇಳುವ ತಿರುಪತಿ, ತಾವು ಬೆಳೆದು ಬಂದ ಹಾದಿ ಮರೆತಿಲ್ಲ. ಹಳ್ಳಿ ಪ್ರತಿಭೆಗಳಿಗೆ ಇವರ ಯಶಸ್ಸು ಸ್ಫೂರ್ತಿಯಾಗಲಿ.

Intro:ಗ್ರಾಮೀಣ ಪ್ರತಿಭೆ ತಿರುಪತಿ ವಿ ಪಾಟೀಲ್ ತಹಶಿಲ್ದಾರ್‌ ಆದ ಯಶೋಗಾಥೆ.
ನನಸಾಯಿತು ಹಳ್ಳಿ ಹೈದನ ಕೆಎಎಸ್ ಕನಸು‌.
ರಾಯಚೂರು. ಡಿ.28
ಸಮಯ ಪ್ರಜ್ಞೆ, ಸತತ ಪ್ರಯತ್ನ, ದೃಢವಾದ ನಂಬಿಕೆ, ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತಿದೆ ಅದು ಇಲ್ಲಿ ಸತ್ಯವಾಗಿದೆ.
ಬಿಸಿಲನಾಡು, ಚಿನ್ನದ ಬೀಡು, ರಾಜ್ಯಕ್ಕೆ ಬೆಳಕು ನೀಡುವ ನಾಡು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದ ವಡಿಕೆಪ್ಪ - ದೇವಮ್ಮ ದಂಪತಿಗಳ ಹಿರಿಯ ಪುತ್ರ ತಿರುಪತಿ ವಿ ಪಾಟೀಲ್ ರವರು ತಹಶಿಲ್ದಾರ್ ಹುದ್ದೆಗೆ ಆಯ್ಕೆಯಾಗುವುದರ ಮೂಲಕ ಬಡತನ ಸಾಧನೆಗೆ ಅಡ್ಡಿಯಾಗಲ್ಲ ಎಂದು ಸಾಬೀತು ಮಾಡಿದ್ದಾರೆ.
ಗ್ರಾಮೀಣ ಭಾಗದ ಅನೇಕ ಪ್ರಜ್ಞಾವಂತ ಪ್ರತಿಭೆಗಳಿಗೆ ಬಡತನ, ಸೂಕ್ತ ಸೌಕರ್ಯಗಳ ಕೊರತೆಯನ್ಬು ಸವಾಲಾಗಿ ಸ್ವೀಕರಿಸಿ ಅವುಗಳನ್ನು ಮೆಟ್ಟಿನಿಂತು ಸಾಧನೆಯ ಶಿಖರವನ್ನು ಏರಿದ್ದಾರೆ.
Body:ವಡಿಕೆಪ್ಪ - ದೇವಮ್ಮ ದಂಪತಿಗಳಿಗೆ ಸ್ವಂತ ಜಮೀನು ಇಲ್ಲ. ಬೇರೆಯವರ ಜಮೀನುಗಳಲ್ಲಿ ಕೂಲಿ - ನಾಲಿ ಮಾಡುತ್ತಾ ಕಷ್ಟಪಟ್ಟು ಮಕ್ಕಳನ್ನು ಬೆಳಸಿದ್ದಾರೆ.
ತಂದೆ - ತಾಯಿ ಹಾಗೂ ಕುಟುಂಬದ ಕಷ್ಟಗಳನ್ನು ಕಣ್ಣಾರೇ ಕಂಡ ಮಕ್ಕಳು ಜೀವನದಲ್ಲಿ ಏನನ್ನಾದರು ಸಾಧಿಸಬೇಕೆಂಬ ಛಲದೊಂದಿಗೆ ತಂದೆ ತಾಯಿಯರು ಇದುವರೆಗೂ ಪಟ್ಟಂತಹ ಕಷ್ಟದ ಫಲವಾಗಿ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವುದರ ಮೂಲಕ ಬೆನ್ನೆಲುಬಾಗಿ ನಿಂತಿದ್ದಾರೆ.
ತಿರುಪತಿ ವಿ ಪಾಟೀಲ್ ಬೆಳೆದುಬಂದ ಹಾದಿ: ತಿರುಪತಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರು ಯಲಗಟ್ಟಾದ ಸರಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಲ್ಲಿ ಮುಗಿಸಿದ್ದಾರೆ. ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಲಿಂಗಸುಗೂರಿನಲ್ಲಿ ಮುಗಿಸಿದ್ದು, ಡಿ.ಎಡ್ ಶಿಕ್ಷಣವನ್ನು ಡೆಕ್ಕನ್ ಶಿಕ್ಷಣ ಸಂಸ್ಥೆ ಕಲಬುರಗಿಯಲ್ಲಿ ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣವನ್ನು ಎಸ್.ಎಮ್.ಎಲ್.ಬಿ ಕಲಾ ಮಹಾವಿದ್ಯಾಲಯ ಲಿಂಗಸುಗೂರುನಲ್ಲಿ ಮುಗಿಸಿದ್ದಾರೆ. ಇನ್ನೂ ಎಂ.ಎ ಅರ್ಥಶಾಸ್ತ್ರ ಪದವಿಯನ್ನು ದೂರ ಶಿಕ್ಷಣದ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪಡೆದಿದ್ದಾರೆ.
ಬದುಕಿನ ದಿಕ್ಕು ಬದಲಿಸಿದ ವಸತಿ ನಿಲಯದ ಅನ್ನ: ಮೂರು ವರ್ಷದ ಪದವಿ ಶಿಕ್ಷಣವನ್ನು ಲಿಂಗಸುಗೂರಿನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ಇದ್ದುಕೊಂಡು ಮುಗಿಸಿದ ಇವರಿಗೆ ಆ ದಿನಗಳಲ್ಲೇ ವಸತಿ ನಿಲಯದ ಮೇಲ್ವಿಚಾರಕ ಶಿವಪ್ಪ, ಎಸ್.ಎಮ್.ಎಲ್.ಬಿ ಕಲಾ ಮಹಾವಿದ್ಯಾಲಯದ ಆಡಳಿತ ಅಧಿಕಾರಿ ಬಸವಂತರಾಯ ಕುರಿ, ಪ್ರಾಚಾರ್ಯ ಹೆಚ್.ಎಲ್ ಪವಾರ್ ಹಾಗೂ ಉಪನ್ಯಾಸಕ ವೃಂದ ಕೆಎಎಸ್ ಹುದ್ದೆಯ ಕನಸಿನ ಬೀಜವನ್ನು ಬಿತ್ತಿದ್ದರು. ಇವರು ಅಂದು ಬೆನ್ನು ತಟ್ಟಿ ಆಡಿದ ಆ ಉತ್ಸಾಹದ ನುಡಿಗಳಿಂದ ಪ್ರೇರಣೆಗೊಂಡದರ ಪ್ರತಿಫಲವಾಗಿ ಇಂದು ನಾನು ತಹಶಿಲ್ದಾರನಾಗಿ ಆಯ್ಕೆಯಾಗಿದ್ದೆನೆ ಇದು ನನಗೆ ಅತೀವ ಸಂತಸ ತಂದಿದೆ ಎಂದಿದ್ದಾರೆ ನೂತನ ತಹಶಿಲ್ದಾರ್ ತಿರುಪತಿ ವಿ ಪಾಟೀಲ್.

ತಿರುಪತಿ ಆಯ್ಕೆಯಾಗಿದ್ದ ವಿವಿಧ ಹುದ್ದೆಗಳು:
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ ಎಂಬ ಮಾತಿನಂತೆ ತಿರುಪತಿ ಸತತ ಪರಿಶ್ರಮದ ಪ್ರತಿಫಲವಾಗಿ ಮೊದಲಿಗೆ ಎಸ್.ಡಿ.ಎ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ನಂತರ ಎಫ್‌ಡಿಎ (2 ಬಾರಿ), ಕಂದಾಯ ನಿರೀಕ್ಷಕ, ಚೀಪ್ ಆಫೀಸರ್ ಗ್ರೇಡ್-2, ಮಾರ್ಕೆಟಿಂಗ್ ಅಸಿಸ್ಟೆಂಟ್, ವಸತಿ ಶಾಲೆಯ ಶಿಕ್ಷಕ, ಅಬಕಾರಿ ರಕ್ಷಕ ಹಾಗೂ ಅಬಕಾರಿ ಉಪ ನಿರೀಕ್ಷಕರು ಹುದ್ದೆಗಳಿಗೂ ಇವರು ಆಯ್ಕೆಯಾಗಿದ್ದರು.
ಇದರ ನಡುವೆ ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ ಎಂಬ ನಾಡ್ನುಡಿಯಂತೆ
ಎರಡು ವರ್ಷಗಳ ಕಾಲ ಧಾರವಾಡದ ಹಲವಾರು ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳಲ್ಲಿ ಅರ್ಥಶಾಸ್ತ್ರ ಮತ್ತು ಭೂಗೋಳ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಗ್ರಾಮೀಣ ಸೊಗಡಿನಲ್ಲಿ ಕಠಿಣ ವಿಷಯ ವಸ್ತುವನ್ನು ಸರಳೀಕರಿಸಿ ಬೋಧಿಸಿ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಪ್ರಸ್ತುತ ಹಾವೇರಿ ಜಿಲ್ಲೆ ಹಿರೇಕೆರೂರು ರೆಂಜ್ ನ ಅಬಕಾರಿ ಉಪ ನಿರೀಕ್ಷಕರಾಗಿ ಸೇವೆಸಲ್ಲಿಸುತ್ತಿರುವ ತಿರುಪತಿಯವರು ತಮ್ಮ ಎರಡನೆಯ ಪ್ರಯತ್ನದಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 1083 ಅಂಕಗಳನ್ನು ಪಡೆದು 43ನೇ ರ್ಯಾಂಕ್ ನೊಂದಿಗೆ ತಹಶಿಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ತಿರುಪತಿಯವರ ಮನದ ಮಾತು:
ನನ್ನ ಬದುಕಿನ ಬಂಡಿಗೆ ಕಡೆಗೀಲಾಗಿ ನಿಂತು ಬದುಕ ಬಂಡಿಯನ್ನು ದಡ ಸೇರಿಸಿದ ನನ್ನ ಸಹೋದರ ಶರಣು ಬಾಗೂರು, ನಿಂಗಪ್ಪ ಸೋಮನಮರಡಿ, ನಾಗಪ್ಪ ಗುರುಗುಂಟಾ, ಸ್ನೇಹಿತ ಸಿ.ಪಿ.ರೆಡ್ಡಿ ಹಾಗೂ ಪ್ರೋತ್ಸಾಹಿಸಿ ಮುನ್ನಡೆಸಿದ ಶಿಕ್ಷಕರು, ಸ್ನೇಹಿತರಿಗೆ ಹಾಗೂ ಸಹೋದರರಿಗೆ ಸದಾಕಾಲ ಋುಣಿಯಾಗಿರುತ್ತೇನೆ. ಕನಸು, ಚಿಂತನೆ, ಕಾರ್ಯ ತತ್ವಗಳನ್ನು ಮೈಗೂಡಿಸಿಕೊಂಡಿದ್ದಾದರೆ ಯಶಸ್ಸು ನಿಶ್ಚಿತ ಎಂದಿದ್ದಾರೆ ತಿರುಪತಿ ವಿ ಪಾಟೀಲ್.
ಇವರು ಈ ಸಾಧನೆಯಿಂದ ಕುಟುಂಬ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯದ ಜನತೆಯ ಮೆಚ್ಚುಗೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ನಮ್ಮ ಗ್ರಾಮೀಣ ಭಾಗದ ಯುವ ಪೀಳಿಗೆಗೆ ಸ್ಪೂರ್ತಿಯಾಗಲಿ ಎಂಬುದೇ ನಮ್ಮ ಆಶಯವಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.