ETV Bharat / state

ಕಾಯಂ ಶಿಕ್ಷಕರನ್ನು ನೇಮಿಸಿ... ಶಾಸಕರ ಎದುರಲ್ಲೇ ಬಿಇಒಗೆ ವಿದ್ಯಾರ್ಥಿನಿ ತಾಕೀತು... ವಿಡಿಯೋ ವೈರಲ್​​​ - ಬಿಇಒಗೆ ಅವಾಜ್

ರಾಯಚೂರಿನ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕರ ಕೊರತೆಗೆ ಪರಿಹಾರ ಸೂಚಿಸದ ಬಿಇಒಗೆ ಶಾಸಕರ ಸಮ್ಮುಖದಲ್ಲಿಯೇ ವಿದ್ಯಾರ್ಥಿನಿಯೊಬ್ಬಳು, ನಮ್ಮ ಶಾಲೆಗೆ ಕೂಡಲೇ ಕಾಯಂ ಶಿಕ್ಷಕರನ್ನು ನೇಮಿಸುವಂತೆ ತಾಕೀತು ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿ
author img

By

Published : Nov 7, 2019, 10:23 AM IST

ರಾಯಚೂರು: ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಿಲ್ಲಿದೇ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

ಈ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಗಣಿತ, ಇಂಗ್ಲಿಷ್​ ವಿಷಯದ ಶಿಕ್ಷಕರ ಕೊರತೆಯಿದೆ. ಹೀಗಾಗಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಶಾಲೆಗೆ ಭೇಟಿ ನೀಡಿ ವಿಚಾರಿಸಿದ ಶಾಸಕರು, ವಿದ್ಯಾರ್ಥಿನಿ ಸಮಸ್ಯೆ ಆಲಿಸಿ ಬಿಇಒಗೆ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಬಳಿಕ ವಿದ್ಯಾರ್ಥಿನಿಗೆ ಮೊಬೈಲ್ ಕೊಟ್ಟು ಬಿಇಒ ಜೊತೆ ಮಾತನಾಡಿಸಿದರು.

ಕಾಯಂ ಶಿಕ್ಷಕರನ್ನು ನೇಮಿಸುವಂತೆ ಬಿಇಒಗೆ ತಾಕೀತು

ನಮಗೆ ಕಾಯಂ ಶಿಕ್ಷಕರನ್ನ ಒದಗಿಸುವಂತೆ ಕೇಳಿದ್ದಾಳೆ. ಇದಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳು ಹಲವು ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ಸಹ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿನಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಬಿಇಒಗೆ ತಾಕೀತು ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Intro:¬ಸ್ಲಗ್: ಮೊಬೈಲ್ ನಲ್ಲಿ ಬಿಇಒಗೆ ಅವಾಜ್ ಹಾಕಿದ ವಿದ್ಯಾರ್ಥಿನಿ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 06-11-2019
ಸ್ಥಳ: ರಾಯಚೂರು
ಆಂಕರ್: ಮಲ್ಲಟ ಸರಕಾರಿ ಪ್ರೌಢ ಶಾಲೆ ಶಿಕ್ಷಕರ ಕೊರತೆ ನಿಗಿಸದ ಶಿಕ್ಷಣ ಇಲಾಖೆ ಕ್ರಮಕ್ಕೆ ಬೇಸತ್ತು ವಿದ್ಯಾರ್ಥಿನಿ ಶಾಸಕ ಸಮ್ಮುಖದಲ್ಲಿಯೇ ಬಿಇಒಗೆ ಅವಾಜ್ ಹಾಕಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.Body: ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಹೊರವಲಯದಲ್ಲಿರುವ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸ ಮಾಡಲು ಗಣಿತ, ಇಂಗ್ಲೀಷ್ ವಿಷಯದ ಶಿಕ್ಷಕರ ಕೊರತೆಯಿದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಹೀಗಾಗಿ ಶಾಲೆಯ ವಿದ್ಯಾರ್ಥಿನಿ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೂರವಾಣಿ ಕರೆ ಮಾಡಿ ವಿಷಯವನ್ನ ತಿಳಿಸಿದ್ದಾಳೆ. ಆಗ ಶಾಸಕರು ಶಾಲೆಗೆ ಭೇಟಿ ವಿದ್ಯಾರ್ಥಿನಿ ಸಮಸ್ಯೆ ಆಲಿಸಿದ್ದು, ಈ ವೇಳೆ ಮಾನವಿ ಬಿಇಒಗೆ ಕರೆ ಸಮಸ್ಯೆ ಪರಿಹಾರಿಸುವ ಕುರಿತು ದೂರವಾಣಿ ಮಾತನಾಡಿದ್ರೆ, ಬಳಿಕ ಶಾಸಕರು ವಿದ್ಯಾರ್ಥಿನಿಗೆ ಮೊಬೈಲ್ ಬಿಇಒಗೆ ನೀಡಿದ ವೇಳೆ ನಮ್ಮಗೆ ಶಿಕ್ಷಕರನ್ನ ಖಾಯಂ ಶಿಕ್ಷಕರನ್ನ ಒದಗಿಸಿ, ಇಲ್ಲದಿದ್ದರೆ ಸರಿಯಿಲ್ಲ ಎನ್ನುವ ನಿಟ್ಟಿನಲ್ಲಿ ಶಾಸಕರ ಸಮ್ಮುಖದಲ್ಲಿ ದೂರವಾಣಿ ಕರೆಯ ಮೂಲಕ ಬಿಇಒಗೆ ಅವಾಜ್ ಹಾಕಿದ್ರೆ. ಅಲ್ಲದೇ ಇದಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದು, ಪ್ರತಿಭಟನೆ ಸಹ ನಡೆಸಿದ್ದರೆ. ಆದ್ರೂ ಸಹ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿನಿ ಮೋನಿಕಾ ಬಿಇಒಗೆ ತರಾಟೆಗೆ ತೆಗೆದುಕೊಂಡಿದ್ದಾರೆ. Conclusion:ಅಲ್ಲದೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.