ರಾಯಚೂರು: ಕೊರೊನಾ ಹಿನ್ನೆಲೆ ಅನಾರೋಗ್ಯದಿಂದ ಲಿಂಗೈಕ್ಯರಾದ ರೌಡಕುಂದಿ ಮಠದ ಪೀಠಾಧಿಪತಿ ಶ್ರೀ ಮರಿ ಸಿದ್ಧಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಅಂತ್ಯಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿ ಅನ್ವಯ ನೇರವೇರಿಸಲಾಯಿತು.
ಶ್ರೀ ಮಠದ ಆವರಣದಲ್ಲಿ ಮಠದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾಗಿದ್ದಾರೆ.
ಇನ್ನು ಮರಣ ಬಳಿಕ ಸ್ವಾಮೀಜಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳ ಅಂತ್ಯಸಂಸ್ಕಾರವನ್ನು ಕೊರೊನಾ ಮಾರ್ಗಸೂಚಿ ಅನ್ವಯ ನೆರವೇರಿಸಲಾಯಿತು. ಶ್ರೀ ಗಳನ್ನು ಕಳೆದುಕೊಂಡ ಅಪಾರ ಭಕ್ತಗಣ ದುಃಖದಲ್ಲಿ ಮೊಳಗಿದೆ.