ETV Bharat / state

ಪಶು ವೈದ್ಯ, ಸಿಬ್ಬಂದಿ ನಿರ್ಲಕ್ಷ್ಯ ವಿರೋಧಿಸಿ ಕುರಿಗಾಹಿಗಳ ಪ್ರತಿಭಟನೆ - ರೈತ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ

ಈಚನಾಳ ಸುತ್ತಮುತ್ತ 40ಕ್ಕೂ ಹೆಚ್ಚು ಕುರಿ - ಮೇಕೆ ಸಾವನ್ನಪ್ಪಿವೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗದ ಕಾರಣ ಸತ್ತ ಕುರಿ, ಮೇಕೆ ಸಮೇತ ಸಹಾಯಕ ನಿರ್ದೇಶಕರ ಕಚೇರಿ ಮುಂದೆ ರೈತ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

shepherds-protest-against-neglect-of-staff-and-veterinarian-lingasaguru
ಲಿಂಗಸುಗೂರು: ಪಶು ವೈದ್ಯ, ಸಿಬ್ಬಂದಿ ನಿರ್ಲಕ್ಷ್ಯ ವಿರೋಧಿಸಿ ಕುರಿಗಾಹಿಗಳ ಪ್ರತಿಭಟನೆ
author img

By

Published : Oct 22, 2020, 9:07 PM IST

ಲಿಂಗಸುಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಕುರಿ ಮತ್ತು ಮೇಕೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪಶು ವೈದ್ಯ, ಸಿಬ್ಬಂದಿ ನಿರ್ಲಕ್ಷ್ಯ ವಿರೋಧಿಸಿ ಕುರಿಗಾಹಿಗಳು ಪ್ರತಿಭಟನೆ ನಡೆಸಿದರು.

ಹದಿನೈದು ದಿನಗಳಿಂದ ನಿರಂತರ ಮಳೆಗೆ ಕಾಲು ಬೇನೆ ಹಾಗೂ ಅತಿಯಾದ ತಂಪಿಗೆ ಕುರಿ - ಮೇಕೆಗಳು ಸಾವನ್ನಪ್ಪುತ್ತಿವೆ. ಈ ಕುರಿತು ವೈದ್ಯರಿಗೆ ಮಾಹಿತಿ ನೀಡದರೂ ಗ್ರಾಮೀಣ ಪ್ರದೇಶಗಳಿಗೆ ಆಗಮಿಸಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಈಚನಾಳ ಸುತ್ತಮುತ್ತ 40ಕ್ಕೂ ಹೆಚ್ಚು ಕುರಿ - ಮೇಕೆ ಸಾವನ್ನಪ್ಪಿವೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗದ ಕಾರಣ ಸತ್ತ ಕುರಿ, ಮೇಕೆ ಸಮೇತ ಸಹಾಯಕ ನಿರ್ದೇಶಕರ ಕಚೇರಿ ಮುಂದೆ ರೈತ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಚಪ್ಪ ಮಾತನಾಡಿ, ಯಾವುದಾದರೂ ಯೋಜನೆಯಡಿ ಪರಿಹಾರ ಕೊಡಿಸುವ ಯತ್ನ ಮಾಡುವೆ. ವೈದ್ಯ, ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡುವೆ ಎಂದು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.