ETV Bharat / state

ರಾಯಚೂರು: ವಕೀಲನಿಗೆ ಚಾಕುವಿನಿಂದ ಬೆದರಿಸಿ ಚಿನ್ನಾಭರಣ, ನಗದು ದರೋಡೆ - ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

ವೈಯಕ್ತಿಕ ಕೆಲಸಕ್ಕಾಗಿ ಹೊರಹೋಗಿದ್ದಾಗ ದಾರಿಮಧ್ಯೆ ಬೈಕ್​ನಲ್ಲಿ ಎದುರಾದ ನಾಲ್ವರು ಅಪರಿಚಿತರು ವಕೀಲ ಶಶಿ ಅವರನ್ನು ಬೆದರಿಸಿ ಅವರಲ್ಲಿದ್ದ ಚಿನ್ನ ಹಾಗೂ ನಗದು ದೋಚಿದ್ದಾರೆ. ಹಟ್ಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Lingasugur Lawyer Shashi
ಲಿಂಗಸೂಗೂರು ವಕೀಲ ಶಶಿ
author img

By

Published : Nov 13, 2022, 10:44 AM IST

ರಾಯಚೂರು: ವಕೀಲರೊಬ್ಬರನ್ನು ಬೆದರಿಸಿದ ದರೋಡೆಕೋರರು ಅವರಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಗೋಲಪಲ್ಲಿ ಕ್ರಾಸ್ ಹತ್ತಿರ ಜರುಗಿದೆ. ಲಿಂಗಸೂಗೂರು ವಕೀಲ ಶಶಿ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ವೈಯಕ್ತಿಕ ಕೆಲಸದ ನಿಮಿತ್ತ ಶಶಿ ತಿಂಥಣಿ ಬ್ರಿಡ್ಜ್​ಗೆ ತೆರಳಿ ವಾಪಸ್ ಲಿಂಗಸೂಗೂರು ಕಡೆ ಬರುತ್ತಿದ್ದರು. ಮಾರ್ಗಮಧ್ಯೆ ಗೋಲಪಲ್ಲಿ ಕ್ರಾಸ್ ಹತ್ತಿರ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಬೈಕ್​ನಲ್ಲಿ ಬಂದ ನಾಲ್ವರು ಅಪರಿಚಿತರು ಚಾಕು ತೋರಿಸಿದ್ದಾರೆ. ಕಾರಿನಲ್ಲಿ ಕುಳಿತಾಗ ಕುತ್ತಿಗೆಗೆ ಬಟನ್​ ಚಾಕು ಇರಿಸಿ, ಕತ್ತಿನಲ್ಲಿದ್ದ 1 ಲಕ್ಷ 5 ಸಾವಿರ ರೂ ಮೌಲ್ಯದ ಬಂಗಾರದ ಸರ, ಲಕ್ಷ ರೂಪಾಯಿ ಮಾಲ್ಯದ ಬೆರಳಲ್ಲಿದ್ದ ಎರಡು ಉಂಗುರ, ಜೇಬಿಗೂ ಕೈ ಹಾಕಿ‌ 40 ಸಾವಿರ ರೂಪಾಯಿ, ಒಪ್ಪೋ ಕಂಪನಿಯ ಮೊಬೈಲ್, ಕಾರು ಕೀಯನ್ನು ಕಸಿದುಕೊಂಡಿದ್ದಾರೆ.

ಅಪಘಾತ ಪ್ರಕರಣ: ರಸ್ತೆ ದಾಟುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ತುಂಟಾಪುರ ಕ್ರಾಸ್ ಗ್ರಾಮದಲ್ಲಿ ನಡೆದಿದೆ. ಅನ್ವರ್ ಗ್ರಾಮದ ಜಂಬಯ್ಯ(53) ಮೃತಪಟ್ಟ ವ್ಯಕ್ತಿ. ರಾಯಚೂರಿನಿಂದ ಮಂತ್ರಾಲಯಕ್ಕೆ ಸಂಚರಿಸುವ ಸಾರಿಗೆ ಬಸ್, ರಸ್ತೆ ದಾಟುತ್ತಿದ್ದಾಗ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಟನ ಪತ್ನಿಯನ್ನು ಕಟ್ಟಾಕಿ 250 ಪವನ್​ ಚಿನ್ನಾಭರಣ ಕಳವು.. ಮನೆಗೆಲಸದವನ ಗ್ಯಾಂಗ್​ನಿಂದ ಕೃತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.