ರಾಯಚೂರು: ಕೃಷ್ಣಾ ನದಿಯಿಂದ ರಾಯಚೂರು ಜಿಲ್ಲೆಗೆ ಎದುರಾಗಿದ್ದ ಪ್ರವಾಹ ಭೀತಿ ಈಗ ತಗ್ಗಿದೆ
ಮಹಾರಾಷ್ಟ್ರ ಹಾಗೂ ಮಲೆನಾಡು ಭಾಗದಲ್ಲಿ ಅತೀವ ಮಳೆಯಿಂದ ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವು ಪ್ರಮಾಣ ಅಧಿಕವಾಗಿತ್ತು. ಹೀಗಾಗಿ ಜಲಾಶಯದ ಗೇಟ್‌ಗಳಿಂದ ಲಕ್ಷಾಂತರ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗಿತ್ತು. ಇದರಿಂದ ರಾಯಚೂರು ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಿತ್ತು.
ಆದ್ರೆ ನಿನ್ನೆಯಿಂದ ಜಲಾಶಯಕ್ಕೆ ನೀರಿನ ಒಳ ಹರಿವು ಇಳಿಮುಖವಾಗಿದೆ. ಇಂದು ಬೆಳಗ್ಗೆ 6 ಗಂಟೆಗೆ ನಾರಾಯಣಪುರ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 30108 ಕ್ಯೂಸೆಕ್ ನೀರು ಹರಿಸಲಾಗುತ್ತದೆ. ಇದರಿಂದ ಜಿಲ್ಲೆಗೆ ಪ್ರವಾಹ ಭೀತಿ ದೂರವಾಗಿದೆ.
ಒಂದು ವೇಳೆ ಜಲಾಶಯಕ್ಕೆ ಒಳಹರಿವಿನ ಏರಿಕೆಯಾಗಿ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನದಿಗೆ ಹರಿ ಬಿಟ್ಟರೆ, ಮತ್ತೆ ಪ್ರವಾಹ ಭೀತಿ ಎದುರಾಗಲಿದೆ.