ರಾಯಚೂರು: ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಎಪಿಎಂಸಿ ಆವರಣದಲ್ಲಿ ಮಾರಾಟಕ್ಕೆ ಇಡಲಾಗಿದ್ದ ಈರುಳ್ಳಿ ನೀರು ಪಾಲಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ಮಾರಾಟ ಮಾಡಲು ನಗರದ ಎಪಿಎಂಸಿಯಲ್ಲಿ ರೈತರು ಆಗಮಿಸಿದ್ದರು. ಆದ್ರೆ ಎರಡು ದಿನಗಳಿಂದ ಟೆಂಡರ್ ಅಗದ ಕಾರಣ ಮಾರಾಟ ಮಾಡದೇ ಮಾರುಕಟ್ಟೆಯ ಆವರಣದಲ್ಲಿ ಇರಿಸಲಾಗಿತ್ತು .
ಇಂದು ಟೆಂಡರ್ ಪ್ರಕ್ರಿಯೆ ಆರಂಭವಾಗಿ ಖರೀದಿಯಲ್ಲಿ ವರ್ತಕರು ತೊಡಗಿದ್ದರು. ಆದ್ರೆ ಏಕಾಏಕಿ ಮಳೆ ಸುರಿದ ಕಾರಣ ಹಲವಾರು ರೈತರ ಈರುಳ್ಳಿ ನೀರು ಪಾಲಾಯಿತು.ಇದ್ದ ಬದ್ದ ಈರುಳ್ಳಿ ಉಳಿಸಿಕೊಳ್ಳಲು ರೈತರು ನೀರು ಹೊರಹಾಕಲು ಹರಸಾಹಸ ನಡೆಸಿದ್ರು.
ಮೊದಲೇ ಎರಡು ದಿನಗಳಿಂದ ಆವರಣದಲ್ಲಿ ಈರುಳ್ಳಿ ಇರಿಸಿಕೊಂಡು ಪರಿತಪಿಸುತ್ತಿದ್ದ ರೈತರು, ನೂರಾರು ಟನ್ ಈರುಳ್ಳಿ ನೀರುಪಾಲಾಗಿದ್ದರಿಂದ ಸಂಕಷ್ಟಕ್ಕೀಡಾಗಿದ್ದಾರೆ.