ETV Bharat / state

ಕಲುಷಿತ ನೀರು ಪೂರೈಕೆ ಆರೋಪ: ರಾಯಚೂರು ನಗರಸಭೆ ಎಇಇ ಅಮಾನತು - ರಾಯಚೂರು ನಗರಸಭೆ ಎಇಇ ಅಮಾನತು

ಕಲುಷಿತ ನೀರು ಪೂರೈಕೆ ಆರೋಪದಡಿ ರಾಯಚೂರು ನಗರಸಭೆ ಎಇಇ ವೆಂಕಟೇಶ ಎಂಬುವರನ್ನು ಅಮಾನತುಗೊಳಿಸಿ‌ ಸರ್ಕಾರ ಆದೇಶಿಸಿದೆ.

Raichur  Municipal council AEE suspended
ವೆಂಕಟೇಶ-ಅಮಾನತುಗೊಂಡಿರುವ ಅಧಿಕಾರಿ
author img

By

Published : Jun 7, 2022, 1:03 PM IST

ರಾಯಚೂರು: ನಗರಸಭೆ ಕಲುಷಿತ ನೀರು ಕುಡಿದು ಅನಾರೋಗ್ಯದಿಂದ ಮೂವರು ಸಾವನ್ನಪ್ಪಿರುವ ಪ್ರಕರಣದ ಹಿನ್ನೆಲೆ ಸಹಾಯಕ ಕಾರ್ಯಪಾಲಕ ಅಭಿಯಂತರ(ಎಇಇ) ಅಮಾನತುಗೊಳಿಸಿ‌ ಸರ್ಕಾರ ಆದೇಶ ಹೊರಡಿಸಿದೆ. ನಗರಸಭೆ ಎಇಇ ವೆಂಕಟೇಶ ಅಮಾನತುಗೊಂಡಿರುವ ಅಧಿಕಾರಿ.

ರಾಜ್ಯಪಾಲರ ಆಜ್ಞಾನುಸಾರ, ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಲ್. ಪ್ರಸಾದ್ ಅಮಾನತು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸಹಾಯಕ ಅಭಿಯಂತರ ಕೃಷ್ಣ ಎಂಬುವರನ್ನು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಈಗ ಜಿಲ್ಲಾಧಿಕಾರಿ ಶಿಫಾರಸು ಮೇರೆಗೆ ಎಇಇ ವೆಂಕಟೇಶ್​​ ಅವರನ್ನು ಅಮಾನತು ಮಾಡಲಾಗಿದೆ.

ನಗರ ಸಭೆಯಿಂದ ಕಲುಷಿತ ನೀರು ಪೂರೈಕೆ ಪರಿಣಾಮ 60ಕ್ಕೂ ಹೆಚ್ಚು ಮಂದಿ ವಾಂತಿ, ಭೇದಿ ಸೇರಿದಂತೆ ನಾನಾ ರೋಗಕ್ಕೆ ತುತ್ತಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಘಟನೆಗೆ ನಗರಸಭೆ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.