ETV Bharat / state

ನಮ್ಮನ್ನು ಕೇಳೋರು ಯಾರೂ ಇಲ್ರೀ...ಇದು ಸಂತ್ರಸ್ತರ ಕೂಗು... - raichur flood

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಡದರಗಡ್ಡಿಯ ನಿವಾಸಿ ಯಲ್ಲಪ್ಪ ಶಿವಪುತ್ರ ಅನಾರೋಗ್ಯಕ್ಕೆ ತುತ್ತಾಗುವ ಮೂಲಕ ತೀವ್ರ ಜ್ವರದಿಂದ ಬಳಲುತ್ತಿದ್ದು, ಬಾಲಕ ಎರಡು ಕಾಲು ಬಾವು(ಕಾಲು ದಪ್ಪ) ಜ್ವರದಿಂದ ಕಷ್ಟ ಅನುಭವಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯಿಂದಾಗಿ ನಡುಗಡ್ಡೆಯಿಂದ ಸ್ಥಳಾಂತರ ಮಾಡಬೇಕಾದ ಅವಶ್ಯಕತೆಯಿದೆ.

ಸಂತ್ರಸ್ಥರು
author img

By

Published : Aug 14, 2019, 8:57 AM IST

ರಾಯಚೂರು : ಸಂತ್ರಸ್ತರ ಕೇಂದ್ರದಲ್ಲಿರುವ ಐದು ವರ್ಷದ ಬಾಲಕನೊಬ್ಬ ತೀವ್ರ ಜ್ವರದಿಂದ ಬಳಲುತ್ತಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ತೀವ್ರ ಜ್ವರದಿಂದ ಬಳಲುತ್ತಿರುವ ಬಾಲಕ

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಡದರಗಡ್ಡಿಯ ನಿವಾಸಿ ಯಲ್ಲಪ್ಪ ಶಿವಪುತ್ರ ಅನಾರೋಗ್ಯಕ್ಕೆ ತುತ್ತಾಗುವ ಮೂಲಕ ತೀವ್ರ ಜ್ವರದಿಂದ ಬಳಲುತ್ತಿದ್ದು, ಬಾಲಕ ಎರಡು ಕಾಲು ಬಾವು(ಕಾಲು ದಪ್ಪ) ಜ್ವರದಿಂದ ಕಷ್ಟ ಅನುಭವಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯಲ್ಲಿ ನಡುಗಡ್ಡೆಯಿಂದ ಸ್ಥಳಾಂತರ ಮಾಡಬೇಕಾದ ಅವಶ್ಯಕತೆಯಿದೆ ಎನ್ನಲಾಗುತ್ತಿದೆ.

ನಾರಾಯಣಪುರ ಜಲಾಶಯದಿಂದ 6 ಲಕ್ಷಕ್ಕೂ ಅಧಿಕ ಕ್ಯೂಸೆಕ್​ ನೀರು ಹರಿದು ಬಿಟ್ಟಿರುವ ಕಾರಣ ಕಡದರಗಡ್ಡಿ ನಿವಾಸಿಗಳನ್ನ ಜಿಲ್ಲಾಡಳಿತ ಮುನ್ನಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ರು. ಆದ್ರೆ, ಕಳೆದ ಬಾಲಕ ಆರೇಳು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾನೆ. ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಆದ್ರೂ ಇನ್ನು ಬಾಲಕ ಗುಣಮುಖವಾಗಿಲ್ಲ. ಈಗ ಕಾಲು ಬಾವು ತೊಂದರೆ ಅನುಭವಿಸಿದ್ರು, ನಮ್ಮನ್ನು ಯಾರು ಕೇಳುತ್ತಿಲ್ಲ, ನನ್ನ ಮೊಮ್ಮಗ ಉಳಿಯುವುದು ಅನುಮಾನವಾಗಿದೆ. ನಮ್ಮ ಗೋಳು ಕೇಳೋರು ಯಾರು ಇಲ್ಲವೆಂದು ಬಾಲಕನ ಅಜ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಇನ್ನು ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಈಗಾಗಲೇ ಬಾಲಕನಿಗೆ ಅಲ್ಲಿಯ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಇನ್ನೊಂದು ದಿನದೊಳಗೆ ಬಾಲಕ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತೇನೆ. ಒಂದು ವೇಳೆ ಚೇತರಿಕ ಕಾಣದಿದ್ದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಸೇತುವೆಗಳು ಮುಳಗಡೆ, ಸಂಪರ್ಕ ಕಡಿತ: ನಾರಾಯಣಪುರ ಜಲಾಶಯದಿಂದ ಅಪಾಯ ಮಟ್ಟಕ್ಕೂ ಮೀರಿ ನೀರು ಹರಿ ಬಿಡಲಾಗಿದೆ. ಇದರ ಪರಿಣಾಮ ಲಿಂಗಸುಗೂರು ತಾಲೂಕಿನ ನಡುಗಡ್ಡೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ, ಯರಗೋಡಿ, ಜಲದುರ್ಗ ಜಲಾವೃತ್ತಗೊಂಡು ಸೇತುವೆ ಮುಳಗಡೆಯಾಗಿ ಸಂಪರ್ಕ ಕಡಿತವಾಗಿದೆ. ಇದರಿಂದ ನಡುಗಡ್ಡೆ ಪ್ರದೇಶದಲ್ಲಿರುವ ಸಂತ್ರಸ್ತರ ಕೇಂದ್ರದಲ್ಲಿ ಆರಂಭದಲ್ಲಿ ಇರುವ ಔಷಧಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಏನಾದರೂ ನೀಡಬೇಕಾದ್ರೂ, ಬೋಟ್ ಸಹಾಯದಿಂದ ನದಿ ದಾಟಬೇಕು. ಆದ್ರೆ ನೀರಿನ ರಭಸದಿಂದ ಬೋಟ್ ನದಿಯಲ್ಲಿ ಸಾಥ್ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ನಾರಾಯಣಪುರ ಜಲಾಶಯದಿಂದ 5.90 ಲಕ್ಷ ಕ್ಯೂಸೆಕ್ ನೀರು ಹರಿದು ಬಿಡಲಾಗುತ್ತಿದೆ.

Intro:ಸ್ಲಗ್: ನಮ್ಮನ ಕೇಳೋರು ಯಾರು ಇಲ್ಲರೀ,
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 13-೦8-2019
ಸ್ಥಳ: ರಾಯಚೂರು
ಆಂಕರ್: ಸಂತ್ರಸ್ತರ ಕೇಂದ್ರದಲ್ಲಿರುವ ಐದು ವರ್ಷದ ಬಾಲಕನೋರ್ವ ತೀವ್ರ ಜ್ವರದಿಂದ ಅನಾರೋಗ್ಯದಿಂದ ಬಳಲುತ್ತಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. Body:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಡದರಗಡ್ಡಿಯ ನಿವಾಸಿ ಯಲ್ಲಪ್ಪ ಶಿವಪುತ್ರ ಅನಾರೋಗ್ಯಕ್ಕೆ ತುತ್ತಾಗುವ ಮೂಲಕ ತೀವ್ರ ಜ್ವರದಿಂದ ಬಳಲುತ್ತಿದ್ದು, ಬಾಲಕ ಎರಡು ಕಾಲು ಬಾವು(ಕಾಲು ದಪ್ಪ) ಜ್ವರದಿಂದ ಕಷ್ಟ ಅನುಭವಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಹಿನ್ನಲೆಯಿಂದಾಗಿ ನಡುಗಡ್ಡೆಯಿಂದ ಸ್ಥಳಾಂತರ ಮಾಡಬೇಕಾದ ಅವಶ್ಯಕತೆಯಿದೆ ಎನ್ನಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದ 6 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬಿಟ್ಟ ಹಿನ್ನಲೆಯಿಂದಾಗಿ ಕಡದರಗಡ್ಡಿ ನಿವಾಸಿಗಳನ್ನ ಜಿಲ್ಲಾಡಳಿತ ಮುನ್ನಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ರು. ಆದ್ರೆ ಕಳೆದ ಆರೇಳು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾನೆ. ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಆದ್ರೂ ಇನ್ನು ಬಾಲಕ ಗುಣಮುಖವಾಗಿಲ್ಲ. ಈಗ ಕಾಲು ಬಾವು ತೊಂದರೆ ಅನುಭವಿಸಿದ್ರು, ನಮ್ಮನ್ನು ಯಾರು ಕೇಳುತ್ತಿಲ್ಲ, ನನ್ನ ಮೊಮ್ಮಗ ಉಳಿಯುವುದು ಅನುಮಾನವಾಗಿದೆ. ನಮ್ಮನು ಅಲ್ಲಿಯೇ ವಾಸಕ್ಕೆ ಬಿಟ್ಟಿದ್ದಾರೆ, ಹೇಗೋ ಜೀವನ ಮಾಡುತ್ತಿದ್ದೀವಿ, ಇಲ್ಲ ಅಂದ್ರೆ, ನದಿ ಹೋಗುತ್ತಿದ್ದೀವಿ. ನಮ್ಮನ ಇಲ್ಲಿಗೆ ಕರೆದುಕೊಂಡು ನಮ್ಮ ಗೋಳು ಯಾರು ಕೇಳುವವರು ಇಲ್ಲವೆಂದು ಬಾಲಕ ಅಜ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಇನ್ನು ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಈಗಾಗಲೇ ಬಾಲಕನಿಗೆ ಅಲ್ಲಿಯ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಬೆಳ್ಳಗೆಯೊಳಗೆ ಬಾಲಕ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತೇನೆ. ಒಂದು ವೇಳೆ ಚೇತರಿಕ ಕಾಣದಿದ್ದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
Conclusion:ಸೇತುವೆಗಳು ಮುಳಗಡೆ, ಸಂಪರ್ಕ ಕಡಿತ: ನಾರಾಯಣಪುರ ಜಲಾಶಯದಿಂದ ಅಪಾಯ ಮಟ್ಟಕ್ಕೂ ಮೀರಿ ನೀರನ್ನ ಹರಿದು ಬಿಡಲಾಗಿದೆ. ಇದರ ಪರಿಣಾಮ ಲಿಂಗಸೂಗೂರು ತಾಲೂಕಿನ ನಡುಗಡ್ಡೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ, ಯರಗೋಡಿ, ಜಲದುರ್ಗ ಜಲಾವೃತ್ತಗೊಂಡ, ಸೇತುವೆ ಮುಳಗಡೆಯಾಗಿ ಸಂಪರ್ಕ ಕಡಿತವಾಗಿದೆ. ಇದರಿಂದ ನಡುಗಡ್ಡೆ ಪ್ರದೇಶದಲ್ಲಿರುವ ಸಂತ್ರಸ್ತರ ಕೇಂದ್ರದಲ್ಲಿ ಆರಂಭದಲ್ಲಿ ಇರುವ ಔಷಧಿಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಏನಾದರೂ ನೀಡಬೇಕಾದ್ರೂ, ಬೋಟ್ ಸಹಾಯದಿಂದ ನದಿಯನ್ನ ದಾಟಬೇಕು. ಆದ್ರೆ ನೀರಿನ ರಭಸದಿಂದ ಬೋಟ್ ನದಿಯಲ್ಲಿ ಸಾಥ್ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ನಾರಾಯಣಪುರ ಜಲಾಶಯದಿಂದ 5.90 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬೀಡಲಾಗುತ್ತಿದೆ.
ಬೈಟ್.1: ಹುಲಿಗೆಮ್ಮ, ಬಾಲಕನ, ಅಜ್ಜಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.