ರಾಯಚೂರು : ಜಿಲ್ಲೆಯಲ್ಲಿ ಏಪ್ರಿಲ್ 19 ರಂದು 225 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 971 ಕ್ಕೆ ಏರಿಕೆಯಾಗಿದೆ. 21 ಮಂದಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಯಚೂರು ತಾಲೂಕಿನಲ್ಲಿ 143, ದೇವದುರ್ಗದಲ್ಲಿ 39, ಮಾನ್ವಿಯಲ್ಲಿ 21, ಲಿಂಗಸುಗೂರಿನಲ್ಲಿ 17, ಸಿಂಧನೂರಿನಲ್ಲಿ 5 ಜನರಿಗೆ ಕೋವಿಡ್ ದೃಢಪಟ್ಟಿದೆ.
ಒಪೆಕ್ ಆಸ್ಪತ್ರೆಯಲ್ಲಿ 92 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 38 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 836 ಜನರು ಹೋಮ್ ಐಸೋಲೇಷನ್‌ನಲ್ಲಿ ಇದ್ದಾರೆ. 2,257 ಜನರ ಪರೀಕ್ಷಾ ವರದಿ ಬರಲು ಬಾಕಿಯಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ 513 ಕೋವಿಡ್ ಸೋಂಕಿತರು ಪತ್ತೆ, 6 ಜನ ಬಲಿ
ಇನ್ನು ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಸೋಮವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರಿಬಾಬು ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಮುಂಜಾಗೃತೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಸೂಚಿಸಿದರು. ಸ್ಥಳದಲ್ಲೇ ಮಾಸ್ಕ್ ಧರಿಸದ ಕೆಲವರಿಗೆ ದಂಡ ವಿಧಿಸಿದರು.