ರಾಯಚೂರು: ಜಿಲ್ಲೆಯಲ್ಲಿ ದಿನ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸಮುದಾಯಕ್ಕೂ ಸೋಂಕು ಹರಡಿದೆಯೇ ಎನ್ನುವ ಆತಂಕ ಜನರಲ್ಲಿ ಆರಂಭವಾಗಿದೆ.
ಕೊರೊನಾ ಲಾಕ್ ಡೌನ್ ಜಾರಿಯಾದ ಬಳಿಕ ಜಿಲ್ಲೆಯು ಸುಮಾರು ತಿಂಗಳಿಗೂ ಹೆಚ್ಚು ದಿನಗಳ ಕಾಲ ಕೊರೊನಾ ಸೋಂಕು ಹರಡದೆ ಸೇಫ್ ಗ್ರೀನ್ ಜೋನ್ ನಲ್ಲಿತ್ತು. ಇತ್ತ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಅನ್ಯ ರಾಜ್ಯಕ್ಕೆ ಕೆಲಸಕ್ಕೆ ತೆರಳಿದ ವಲಸೆ ಕಾರ್ಮಿಕ ಲಾಕ್ ಡೌನ್ ಸಿಲುಕಿ ತೊಂದರೆ ಅನುಭವಿಸುತ್ತಿದ್ದರು. ಸರ್ಕಾರ ವಲಸೆ ಕಾರ್ಮಿಕರು ಜಿಲ್ಲೆಗೆ ಬರುವುದಕ್ಕೆ ಅವಕಾಶಕೊಟ್ಟ ಬಳಿಕ ಸಾವಿರಾರು ಕಾರ್ಮಿಕರು ಮರಳಿದರು. ಜಿಲ್ಲಾಡಳಿತ ತವರಿಗೆ ವಾಪಸ್ ಬಂದವರನ್ನ ಸಾಂಸ್ಥಿಕ ಕ್ವಾರಂಟೈನ್ ಮಾಡಿ, ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿತ್ತು. ವಲಸೆ ಕಾರ್ಮಿಕರಿಂದ ಜಿಲ್ಲೆಗೆ ಸೋಂಕು ಕಾಲಿಡುವ ಮೂಲಕ ಗ್ರೀನ್ ಜೋನ್, ಆರೇಂಜ್ ಜೋನ್ ಮಾರ್ಪಟ್ಟಿತ್ತು.
ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು, ಸೋಂಕಿತರ ಪ್ರಾಥಮಿಕ, ದ್ವೀತಿಯ ಸಂಪರ್ಕಗಳ ಮಾಹಿತಿಯನ್ನು ಕಲೆ ಹಾಕುವ ಮೂಲಕ ಹೋಂ ಕ್ವಾರಂಟೈನ್, ಸಾಂಸ್ಥಿಕ ಕ್ವಾರಂಟೈನ್ ಮಾಡಲಾಯಿತು. ಆದ್ರೆ ಇದರ ನಡುವೆ ಇದೀಗ ದಿನ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸಮುದಾಯಕ್ಕೂ ಸೋಂಕು ಹರಡಿದೆಯೇ ಎನ್ನುವ ಆತಂಕ ಜನರಲ್ಲಿ ಶುರುವಾಗಿದೆ.
ಯಾಕಂದ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಲ್ಯಾಬ್ ಟೆಕ್ನಿಶಿಯನ್‌ಗೆ ಸೋಂಕು ತಗುಲಿರುವ ಸಂಶಯ ವ್ಯಕ್ತವಾಗಿ, ಕಚೇರಿಯನ್ನು ಬೀಗ ಹಾಕುವ ಮೂಲಕ ಬಂದ್ ಮಾಡಲಾಗಿದೆ.
ದಿನ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿ 457 ಜನ ಸೋಂಕಿತರು ಜಿಲ್ಲೆಯ ಪತ್ತೆಯಾಗಿದ್ದು, ಇವರಲ್ಲಿ 398 ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 57 ಪ್ರಕರಣಗಳು ಈಗ ಸಕ್ರಿಯವಾಗಿವೆ.