ETV Bharat / state

ತೆಪ್ಪ ಕಾರ್ಯಾಚರಣೆ ಸ್ಥಗಿತ: ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಮತ್ತು ಪೊಲೀಸರಿಂದ ಶೋಧ ಕಾರ್ಯ

author img

By

Published : Oct 15, 2020, 5:32 PM IST

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಮಸ್ಕಿಯ ಹಿರೇಹಳ್ಳದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಚನ್ನಬಸಪ್ಪನ ಶೋಧ ನಡೆಸುತ್ತಿದ್ದು, ಇಂದು ತೆಪ್ಪ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಬದಲಾಗಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಪೊಲೀಸರಿಂದ ಚನ್ನಬಸಪ್ಪನ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ.

raichur
ಶೋಧ ಕಾರ್ಯ

ರಾಯಚೂರು: ಮಸ್ಕಿ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋದ ಚನ್ನಬಸಪ್ಪನ ಶೋಧ ಕಾರ್ಯ ಇಂದು ಸಹ ಮುಂದುವರೆದಿದೆ.

ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಮಸ್ಕಿಯ ಹಿರೇಹಳ್ಳದಲ್ಲಿ ನೀರಿನ ರಭಸ ಕಡಿಮೆಯಾದ ಹಿನ್ನೆಲೆಯಲ್ಲಿ ಇಂದು ತೆಪ್ಪ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಬದಲಾಗಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಪೊಲೀಸರಿಂದ ಚನ್ನಬಸಪ್ಪನ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಕಳೆದ ಭಾನುವಾರು ಬಹಿರ್ದೆಸೆಗೆ ತೆರಳಿದಾಗ ನೀರಿನ ರಭಸಕ್ಕೆ ಚನ್ನಬಸಪ್ಪ ಹಳ್ಳದಲ್ಲಿ ಸಿಲುಕಿಕೊಂಡಾಗ ರಕ್ಷಣೆಗೆ ಮುಂದಾದರೂ, ಹಗ್ಗ ಹರಿದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಮತ್ತು ಪೊಲೀಸರಿಂದ ಶೋಧ ಕಾರ್ಯ

ಭಾನುವಾರದಿಂದ ತೆಪ್ಪದ ಸಹಾಯದ ಮೂಲಕ ಚನ್ನಬಸಪ್ಪನ ಹುಡಕಾಟ ನಡೆಸಲಾಗುತ್ತಿತ್ತು. ಆದ್ರೆ ಇದು ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಲಿಂಗಸುಗೂರು, ಮಾನವಿ, ಸಿಂಧನೂರು ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಸುಮಾರು 50 ಸಿಬ್ಬಂದಿಗಳೊಂದಿಗೆ ಚನ್ನಬಸಪ್ಪನನ್ನು ಹುಡಕಾಟ ನಡೆಸಲಾಗುತ್ತಿದೆ.

ಮಾಜಿ ಶಾಸಕ ಮನೆಗೆ ಭೇಟಿ, ಪರಿಹಾರ ವಿತರಣೆ:

ಇನ್ನೂ ಚನ್ನಬಸಪ್ಪನ ಮನೆಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಭೇಟಿ ನೀಡಿ, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು. ನೀರಿನಲ್ಲಿ ಕೊಚ್ಚಿ ಹೋಗಿರುವ ಚನ್ನಬಸಪ್ಪನನ್ನು ಬೇಗೆನೆ ಶೋಧನೆ ಮಾಡುವಂತೆ ಜಿಲ್ಲಾಡಳಿತಕ್ಕೂ ಮನವಿ ಮಾಡಲಾಗಿದೆ. ಜೊತೆಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನ ಕುಟುಂಬದವರಿಗೆ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು. ಇದೇ ವೇಳೆ, ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.