ರಾಯಚೂರು : ಟಿಕ್ ಟಾಕ್ ಮೋಜಿಗಾಗಿ ಮೊಲಗಳನ್ನ ಬೇಟೆಯಾಡಿ, ಟಿಕ್‌ಟಾಕ್ ವಿಡಿಯೋ ಮಾಡಿದ ಯುವಕರನ್ನ ರಾಯಚೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ
ತಾಲೂಕಿನ ಚಂದ್ರಬಂಡಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸರ್ಜಾಪುರ ಗ್ರಾಮದ ಪವನ್ ನಾಯಕ, ಸ್ವಾಮಿ ಬಂಧಿತ ಆರೋಪಿಗಳು. ಈ ಆರೋಪಿಗಳು ತಮ್ಮ ಸಾಕು ನಾಯಿ ಸಹಾಯದಿಂದ ಗ್ರಾಮದ ಸುತ್ತಮುತ್ತಲಿನ ಹೊಲ - ಗದ್ದೆಯಲ್ಲಿ ಬರುತ್ತಿರುವ ಮೊಲಗಳು ಬೇಟೆಯಾಡುತ್ತಿದ್ದರು.
ಬೇಟೆಯಾಡಿದ ಮೊಲದ ಚರ್ಮವನ್ನ ಕೈಯಲ್ಲಿ ಹಿಡಿದು ಡ್ಯಾನ್ಸ್ ಮಾಡುವ ಮೂಲಕ ಟಿಕ್‌ಟಾಕ್ ಮಾಡುತ್ತಿದ್ದರು.
ಹೀಗೆ ಕಳೆದ ಮೇ.19ರಂದು ಅಪ್ಲೋಡ್ ಮಾಡಿದ ವಿಡಿಯೋ ಗಮನಿಸಿ, ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಕಾನೂನುಗಳ ಉಲ್ಲಂಘನೆಯಡಿ ಆರೋಪಿಗಳನ್ನ ಸೆರೆ ಹಿಡಿಯಲು ವಿಶೇಷ ತಂಡವನ್ನ ರಚಿಸಲಾಗಿತ್ತು.
ಈ ತಂಡ ಆರೋಪಿಗಳ ಜಾಲ ಕಂಡು ಹಿಡಿದು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.