ರಾಯಚೂರು: ವಕೀಲರೊಬ್ಬರ ಜತೆ ಅನುಚಿತ ವರ್ತನೆ ತೋರಿದ್ದಲ್ಲದೆ, ಅವರ ಕೈಗೆ ಕೋಳ ತೊಡಿಸಿದ ಪಿಎಸ್‌ಐ ಅಮಾನತುಗೊಂಡಿದ್ದಾರೆ.
ನಗರದ ಪಶ್ಚಿಮ ಠಾಣೆಯ ಪಿಎಸ್‌ಐ ನಾಗರಾಜ ಮೇಕಾ ಅಮಾನತುಗೊಂಡ ಪೊಲೀಸ್ ಅಧಿಕಾರಿ.
ಪ್ರಕರಣದ ಹಿನ್ನೆಲೆ:
ಕಳೆದ ಏಪ್ರಿಲ್ 22ರಂದು ರಾತ್ರಿ ನಗರದ ಸ್ಟೇಷನ್ ವೃತ್ತದಲ್ಲಿ ವಕೀಲ ವೀರಯ್ಯ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐ ನಾಗರಾಜ ಮೇಕಾ, ಠಾಣೆಗೆ ಕರೆದೊಯ್ದು ಕೈಗೆ ಕೋಳ ಹಾಕಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಪಿಎಸ್‌ಐ ಕೃತ್ಯವನ್ನು ವಕೀಲರ ಸಂಘಟನೆ ತೀವ್ರವಾಗಿ ಖಂಡಿಸಿ, ಪ್ರತಿಭಟನೆ ನಡೆಸಿತ್ತು. ಪ್ರಕರಣದ ತನಿಖೆ ನಡೆಸಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು, ಪಿಎಸ್‌ಐ ನಾಗರಾಜ ಮೇಕಾರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.