ETV Bharat / state

ಸಿಎಎ, ಎನ್​ಆರ್​ಸಿ ವಿರೋಧಿಸಿ ರಾಯಚೂರಲ್ಲಿ ಪ್ರತಿಭಟನೆ - ರಾಯಚೂರು ಸಿಎಎ, ಎನ್​ಆರ್​ಸಿ ವಿರೋದಿಸಿ ಹೋರಾಟ ಸುದ್ದಿ

ರಾಯಚೂರಿನಲ್ಲಿ ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ಸಂವಿಧಾನ ಹಕ್ಕುಗಳ ನಾಗರಿಕರ ವೇದಿಕೆ ಸಂಸದರ ಕಚೇರಿ ಎದುರಿನ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.

protest-against-to-caa-nrc-in-raichur
ಸಿಎಎ, ಎನ್​ಆರ್​ಸಿ ವಿರೋದಿಸಿ ಮುಂದುವರೆದ ಹೋರಾಟ
author img

By

Published : Jan 26, 2020, 6:15 PM IST

ರಾಯಚೂರು : ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ರಾಯಚೂರು ಸಂವಿಧಾನ ಹಕ್ಕುಗಳ ನಾಗರಿಕರ ವೇದಿಕೆ ಸಂಸದರ ಕಚೇರಿ ಎದುರಿನ ಟಿಪ್ಪುಸುಲ್ತಾನ್ ಗಾರ್ಡನ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.

ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ‌ನೆರವೇರಿಸಿದ ನಂತರ ಹೋರಾಟಕ್ಕೆ ವೇದಿಕೆ ನಿರ್ಮಿಸಿಕೊಂಡು ಧರಣಿ ಆರಂಭಿಸಲಾಯ್ತು.

ಸಿಎಎ, ಎನ್​ಆರ್​ಸಿ ವಿರೋಧಿಸಿ ಮುಂದುವರೆದ ಹೋರಾಟ

ಹೋರಾಟವನ್ನು ವಿನೂತನವಾಗಿ ನಡೆಸಲು ತೀರ್ಮಾನಿಸಿ ಸಿಎಎ, ಎರ್​ಆರ್​ಸಿಯಿಂದ ತೀವ್ರ ಸಮಸ್ಯೆಗೆ ಗುರಿಯಾಗುವ ಸಮುದಾಯವನ್ನು ಗುರುತಿಸಿ ಅವರಿಗೆ ಹೋರಾಟದಲ್ಲಿ ಮುಂಚೂಣಿ ಸ್ಥಾನ ನೀಡಲಾಗಿದೆ. ಪ್ರಮುಖವಾಗಿ ಪೌರ ಕಾರ್ಮಿಕರು, ಅಲೆಮಾರಿ ಜನಾಂಗ, ಅನಾಥರು, ಭಿಕ್ಷುಕರು, ರೈತರು, ದೇವದಾಸಿಯರು ಸೇರಿದಂತೆ ಇತರೆ ಸಮುದಾಯಗಳನ್ನು ಗುರುತಿಸಿ ಅವರಿಂದ ಪಂಜು ಹಚ್ಚುವ ಮೂಲಕ ಧರಣಿಗೆ ಚಾಲನೆ ನೀಡಲಾಯಿತು.

ಕೇಂದ್ರ ಸರ್ಕಾರ ವಿವಾದಾತ್ಮಕ ಕಾಯ್ದೆ ಜಾರಿ ಮಾಡುವ ಮೂಲಕ ದೇಶವನ್ನು ಹಾಳು ಮಾಡಲು ಹೊರಟಿದೆ. ಹಾಗಾಗಿ ಕೂಡಲೇ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು. ದೇಶದ ನಾಗರಿಕರನ್ನು‌ ಧರ್ಮದ ಆಧಾರದ ಮೇಲೆ‌ ವಿಂಗಡಿಸುವ ಮೂಲಕ ಮೋದಿ‌, ಅಮಿತ್ ಷಾ ಸರ್ಕಾರ ಪ್ಯಾಸಿಸ್ಟ್ ದಾಳಿ ನಡೆಸಲು‌ ಮುಂದಾಗಿದೆ ಎಂಬ ಆಕ್ರೋಶ ಈ ವೇಳೆ ಕೇಳಿಬಂತು.

Intro:ಸಿ.ಎ.ಎ.,ಎನ್.ಆರ್.ಸಿ, ಎನ್.ಪಿ.ಎ ವಿರೋಧಿಸಿ ರಾಯಚೂರಿನ ಸಂವಿಧಾನ ಹಕ್ಕುಗಳ ನಾಗರಿಕರ ವೇದಿಕೆಯಿಂದ ಸಂಸದರ ಕಚೇರಿ ಎದುರಿನ ಟಿಪ್ಪುಸುಲ್ತಾನ ಗಾರ್ಡನ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು. ಇಂದು ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ‌ನೆರವೇರಿಸಿ ಹೋರಾಟದ ಸ್ಥಳದಲ್ಲಿ ರಾಮಪ್ರಸಾದ ಬಿಸ್ಮಿಲ್,ಅಶ್ಫಖುಲ್ಲಾಹ್ ಖಾನ್ ವೇದಿಕೆ ನಿರ್ಮಿಸಿಕೊಂಡು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿ ಶಾಹಿನ್ ಭಾಗ್ ಮಾದರಿಯಲ್ಲಿ‌ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.

Body:ಈ ಹೋರಾಟವನ್ನು ವಿನೂತನವಾಗಿ ನಡೆಸಲು ತೀರ್ಮಾನಿಸಿ ಸಿ.ಎಎ,ಎನ್ಆರ್ಸಿಯಿಂದ ತೀವ್ರ ಸಮಸ್ಯೆಗೆ ಗುರಿಯಾಗುವ ಸಮು್ಅಯವನ್ನು ಗುರುತಿಸಿ ಅವರನ್ನು ಹೋರಾಟದ ಮುಂಚೂಣಿ ಸ್ಥಾನ ನೀಡಲಾಗಿದೆ. ಅವರಲ್ಲಿ ಪಂಕ್ಚರ್ ವಾಲಾ ಶೇಖ್ ಫಾರೂಕ್,ಪೌರ ಕಾರ್ಮಿಕ ಮಾಣಿಕಮ್ಮ, ಅಲೆಮಾರಿ ಜಂಬಣ್ಣ,ಅನಾಥ,ಶರಣಬಸವ,ರೈತ ಬಸವರಾಜ,ದೇವದಾಸಿ ಅಯ್ಯಮ್ಮ,ಮಹಿಳೆ ನೂರ್ಜಹಾನ್,ವಿದ್ಯಾರ್ಥಿ ಆಂಜಿನಯ್ಯ ಅವರನ್ನು ಸೇರಿಸಿಕೊಂಡು ಪಂಜು ಹಚ್ಚುವ ಮೂಲಕ ಅವರಿಂದ ಈ ಅನಿರ್ಧಿಷ್ಟ ಧರಣಿಗೆ ಚಾಲನೆ ನೀಡಲಾಯಿತು. ಬೃಹತ್ ಟೆಂಟ್ ನಿರ್ಮಿಸಿ ಟಿಪ್ಪು ಗಾರ್ಡನ್ ನಲ್ಲಿ ಈ ಹೋರಾಟಕ್ಕೆ ಮುಂದಾಗಿದ್ದು ವಿವಾದಾತ್ಮಕ ಕಾಯ್ದೆ ಮೂಲಕ ದೇಶವನ್ನು ಹಾಳು ಮಾಡಲು ಹೊರಟಿದೆ ಎಂದು ಅದನ್ನು‌ರದ್ದುಪಡಿಸುವವರೆಗೂ ಈ ಹೋರಾಟ ಮುಂದುವರೆಸುತ್ತೇವೆಂದು ಸಂದೇಶ ನೀಡುತಿದ್ದಾರೆ. ದೇಶದ ನಾಗರಿಕರನ್ನು‌ ಧರ್ಮದ ಆಧಾರದ ಮೇಲೆ‌ ವಿಂಗಡಿಸಿ ಪೌರತ್ವ ನಿರ್ಧರಿಸಲು ಮುಂದಾಗಿ ರುವ ಮೋದಿ‌ಅಮಿತ್ ಷಾ ಸರಕಾರ ಪ್ಯಾಸಿಸ್ಟ್ ದಾಳಿ ನಡೆಸಲು‌ ಮುಂದಾಗಿದೆ. ಸಂವಿಧಾನ ಹಾಗೂ ಪ್ರಜಪ್ರಭುತ್ವ ರಕ್ಷಣೆಯ ಹೋರಾಟದ ಭಾಗವಾಗಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರರು ತಿಳಿಸಿದರು. ಬೈಟ್: ಆರ್.ಮಾನಸಯ್ಯ.ವೇದಿಕೆಯ ಮುಂಖಡ

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.