ETV Bharat / state

ಸಾವಿತ್ರಿ ಪುರುಷೋತ್ತಮ್ ರೈಸ್ ಮಿಲ್​ನಲ್ಲಿ ಪೊಲೀಸರಿಂದ ಲಘುಲಾಠಿ ಚಾರ್ಜ್​

ರಾಜ್ಯ ರೈಸ್ ಮಿಲ್​ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್ ಮಾಲೀಕತ್ವದ ರೈಸ್ ಮಿಲ್​ನಲ್ಲಿ ಪೊಲೀಸರಿಂದ ಲಘುಲಾಠಿ ಪ್ರಹಾರ ಮಾಡಿರುವ ಘಟನೆ ನಡೆದಿದೆ.

author img

By

Published : Dec 5, 2020, 6:14 PM IST

police lathi charage
ಸಾವಿತ್ರಿ ಪುರುಷೋತ್ತಮ್ ರೈಸ್ ಮಿಲ್​ನಲ್ಲಿ ಪೊಲೀಸರಿಂದ ಲಘುಲಾಠಿ ಚಾರ್ಜ್​

ರಾಯಚೂರು: ನಗರದ ಗದ್ವಾಲ್ ರಸ್ತೆಯಲ್ಲಿರುವ ಸಾವಿತ್ರಿ ರೈಸ್ ಮಿಲ್​ನಲ್ಲಿ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ್ದಾರೆ.

ಸಾವಿತ್ರ ರೈಸ್ ಮಿಲ್​ ಕೆಲಸ ಮಾಡುವ ಬಿಹಾರ ಮೂಲದ ಕಾರ್ಮಿಕನೋರ್ವ ದೇವಿನಗರ ಬಡಾವಣೆ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಚುಡಾಯಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಸಂಬಂಧ ಕಾರ್ಮಿಕ ಕೆಲಸ ಮಾಡುವ ರೈಸ್ ಮಿಲ್​ನೊಳಗೆ ತೆರಳಿದ ವೇಳೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಲಘುಲಾಠಿ ಪ್ರಹಾರ ಮಾಡಿದ್ದಾರೆ.

ಘಟನೆಗೆ ಕಾರಣ: ಸಾವಿತ್ರಿ ರೈಸ್ ಮಿಲ್​ನಲ್ಲಿ ಕೆಲಸ ಮಾಡುವ ಕಾರ್ಮಿಕನೋರ್ವ ಸ್ಥಳೀಯ ಬಾಲಕಿ ಬಹಿದೆರ್ಸೆಗೆ ತೆರಳಿದ ವೇಳೆ ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಬಾಲಕಿ ಪೊಷಕರಿಗೆ ತಿಳಿಸಿದ್ದಾಳೆ. ಬಳಿಕ ಬಡಾವಣೆ ನಿವಾಸಿಗಳು ಈ ಬಗ್ಗೆ ವಿಚಾರಿಸಿ ಕಾರ್ಮಿಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನೆಈ ಘಟನೆ ನಡೆದಿದ್ದು, ಬಳಿಕ ಇಂದು ಈ ಬಗ್ಗೆ ಕಾರ್ಮಿಕ ಕೆಲಸ ಮಾಡುವ ಮಾಲೀಕರನ್ನು ವಿಚಾರಿಸಲು ಸ್ಥಳೀಯರು ತೆರಳಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ್ದಾರೆ.

ಮಾಲೀಕ ಹೇಳುವುದೇನು?: ನಿನ್ನೆ ಈ ಘಟನೆ ನಡೆದಿದೆ. ಘಟನೆಯ ಬಳಿಕ ಸ್ಥಳೀಯರು ಕಾರ್ಮಿಕರ ವಾಸ ಮಾಡುವ ಮನೆಗೆ ನುಗ್ಗಿ ಹಣ, ದವಸ ಧಾನ್ಯಗಳನ್ನ ಕದ ಕದ್ಯೊಯ್ದಿದ್ದಾರೆ. ನಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕ ತಪ್ಪು ಮಾಡಿದ್ದರೆ, ಪೊಲೀಸ್ ಠಾಣೆಗೆ ದೂರು ನೀಡಿ. ತಪ್ಪು ಇದ್ದರೆ ಶಿಕ್ಷೆ ನೀಡಲಿ. ಆದ್ರೆ ಈ ರೀತಿಯಾಗಿ ಗುಂಪಾಗಿ ರೈಸ್ ಮಿಲ್​ನೊಳಗೆ ಬಂದು ಗಲಾಟೆ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ನಾವು ರೈಸ್ ಮಿಲ್ ಅಸೋಶಿಯೇಶನ್​ನಿಂದ ಸಭೆ ಕರೆದು ಚರ್ಚಿಸಿ, ದೂರು ನೀಡುವುದಾಗಿ ಸಾವಿತ್ರಿ ರೈಸ್ ಮೀಲ್ ಮಾಲೀಕ ಸಾವಿತ್ರ ಪುರುಷೋತ್ತಮ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.