ETV Bharat / state

ನಕಲಿ ಎಟಿಎಂ ಕಾರ್ಡ್ ಬಳಸಿ ವಂಚನೆ: ಇಬ್ಬರು ಆರೋಪಿಗಳು ಅಂದರ್ - Raichur crime latest news

ರಾಯಚೂರು ಜಿಲ್ಲೆಯ ವಿವಿಧ ಎಟಿಎಂಗಳಲ್ಲಿ ಲಕ್ಷಗಟ್ಟಲೆ ಹಣ ದೋಚಿ ಪರಾರಿಯಾಗಿದ್ದ ಖದೀಮರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

Raichur
Raichur
author img

By

Published : Jun 20, 2020, 11:12 PM IST

ರಾಯಚೂರು: ಎಟಿಎಂ ಕಾರ್ಡ್ ಕಳ್ಳತನ ಮಾಡಿ ಬ್ಯಾಂಕ್‌ನಿಂದ ಹಣ ದೋಚಿ ಪರಾರಿಯಾಗಿದ್ದ ಖದೀಮರನ್ನ ಸೆರೆ ಹಿಡಿಯುವಲ್ಲಿ ಸೈಬರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರಪ್ರದೇಶ ಮೂಲದ ಹರಿಲಾಲ್, ಬ್ರಿಜವಾನ್ ಬಂಧಿತ ಆರೋಪಿಗಳು. ಇವರು ಜಿಲ್ಲೆಯ ನಾಲ್ಕು ಎಟಿಎಂ ಕೇಂದ್ರಗಳಲ್ಲಿ 2,81,069 ರೂ ದೋಚಿ ಪರಾರಿಯಾಗಿದ್ದರು. ಈ ಕುರಿತಂತೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಭೇದಿಸಿದ ಪೊಲೀಸರು, ಇಬ್ಬರುಆರೋಪಗಳನ್ನು ಸೆರೆ ಹಿಡಿದು ತನಿಖೆ ನಡೆಸಿದಾಗ ಹಲವು ಗ್ರಾಹಕರ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ದೋಚಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಇದೇ ತಂಡ ರಾಜ್ಯದ ನಾನಾ ಕಡೆ ಇದೇ ರೀತಿಯಲ್ಲಿ ಕೃತ್ಯ ಎಸೆಗಿರುವ ಅನುಮಾನ ಕಂಡು ಬಂದಿದ್ದು, ಆರೋಪಿಗಳನ್ನ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

ಸೈಬರ್ ಪೊಲೀಸರ ಯಶಸ್ವಿ ಕಾರ್ಯಚಾರಣೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.