ETV Bharat / state

ಲಂಚ ಕೊಡದಿದ್ದಕ್ಕೆ ಪೇದೆಗಳಿಂದ ಹಲ್ಲೆ ಆರೋಪ: ಪೊಲೀಸರೇ ಅಕ್ರಮ ಮರಳು ದಂಧೆಗೆ ಸಾಥ್​ ನೀಡಿರುವ ಶಂಕೆ...!?

ಅಕ್ರಮ ಮರಳು ದಂಧೆಗೆ ಸಾಥ್​ ನೀಡಿರುವ ಪೊಲೀಸರು ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಟ್ರ್ಯಾಕ್ಟರ್​​ ಚಾಲಕನ ಮೇಲೆ  ಹಲ್ಲೆ ಮಾಡಿರುವ ಆರೋಪ ರಾಯಚೂರಿನಲ್ಲಿ ಕೇಳಿ ಬಂದಿದೆ.

author img

By

Published : Oct 19, 2019, 3:54 PM IST

Updated : Oct 19, 2019, 5:29 PM IST

ಲಂಚ ಕೊಡದಿದ್ದಕ್ಕೆ ಪೇದೆಗಳಿಂದ ಹಲ್ಲೆ: ಪೊಲೀಸರೆ ಅಕ್ರಮ ಮರಳು ದಂಧೆಗೆ ಸಾಥ್​ ನೀಡಿರುವ ಶಂಕೆ...!

ರಾಯಚೂರು: ಅಕ್ರಮ ಮರಳು ದಂಧೆಗೆ ಸಾಥ್​ ನೀಡಿರುವ ಪೊಲೀಸರು ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಟ್ರ್ಯಾಕ್ಟರ್​​​ ಚಾಲಕನ ಮೇಲೆ ಹಲ್ಲೆ ಮಾಡಿರುವ ಆರೋಪ ರಾಯಚೂರಿನಲ್ಲಿ ಕೇಳಿ ಬಂದಿದೆ.

ಲಂಚ ಕೊಡದಿದ್ದಕ್ಕೆ ಪೇದೆಗಳಿಂದ ಹಲ್ಲೆ: ಪೊಲೀಸರೇ ಅಕ್ರಮ ಮರಳು ದಂಧೆಗೆ ಸಾಥ್​ ನೀಡಿರುವ ಶಂಕೆ...!

ತಾಲೂಕಿನ ಯರಗೇರಾ ಠಾಣೆ ವ್ಯಾಪ್ತಿಯ ಪೊಲೀಸರಿಂದ ಹಣ ವಸೂಲಿ ದಂಧೆ ನಡೆದಿದ್ದು, ಹಣ ನೀಡದ ಭೀಮಾಶಂಕರ ಎಂಬುವವರ ಮೇಲೆ ಪೊಲೀಸ್ ಪೇದೆಗಳಾದ ಹನುಮಂತರಾಯ ಹಾಗೂ ಸಂತೋಷ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಬಂದಿದೆ.

ಸದ್ಯ ಹಲ್ಲೆಗೊಳಗಾದ ಭೀಮಾಶಂಕರ್ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿಯ ಪೊಲೀಸರು ಅಕ್ರಮ ಮರಳು ದಂಧೆಕೋರರಿಂದ ಹಣ ವಸೂಲಿ ಮಾಡುತ್ತಿದ್ದು, ಲಂಚ ನೀಡುವಂತೆ ಕೇಳುವ ಪೊಲೀಸ್ ಮೊಬೈಲ್ ಪೋನ್ ಸಂಭಾಷಣೆ ಬಹಿರಂಗಗೊಂಡಿದೆ. ರಾಯಚೂರು ತಾಲೂಕಿನ ಬಾಯಿದೊಡ್ಡಿ ಗ್ರಾಮದ ಭೀಮಾಶಂಕರ ಎಂಬಾತನಿಗೆ ಲಂಚ ನೀಡುವಂತೆ ಪೊಲೀಸರು ಕಿರುಕುಳ ನೀಡಿದ್ದು, ಹಣ ಕೊಡದಿದ್ರೆ ಟ್ರ್ಯಾಕ್ಟರ್​​ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಆನಂತರ ಹಣ ನೀಡದ್ದಕ್ಕೆ ಪೊಲೀಸರು ಹಲ್ಲೆಗೆ ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿರುವುದರಿಂದ ಯಥೇಚ್ಛವಾಗಿ ಮರಳು ದೊರೆಯುತ್ತಿದ್ದು, ಸರಕಾರದ ಬೊಕ್ಕಸಕ್ಕೆ ನಷ್ಟವಾಗದಂತೆ ಮರಳುಗಾರಿಕೆ ಕಾನೂನು ಕ್ರಮ ಕೈಗೊಳ್ಳಬೇಕು. ಆದ್ರೆ, ಇಲ್ಲಿ ಪೊಲೀಸರೇ ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.

Intro:ಸ್ಲಗ್: ಪೊಲೀಸ್‌ರಿಂದ ಹಲ್ಲೆ ಆರೋಪ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೯-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಅಕ್ರಮ ಮರಳುಗಾರಿಕೆ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಟ್ರಾಕ್ಟರ್ ಚಾಲಕನ ಮೇಲೆ ಪೊಲೀಸ್‌ರಿಂದ ಹಲ್ಲೆ ಮಾಡಿರುವ ಆರೋಪ ರಾಯಚೂರಿನಲ್ಲಿ ಕೇಳಿ ಬಂದಿದೆ. Body:ರಾಯಚೂರು ತಾಲೂಕಿನ ಯರಗೇರಾ ಠಾಣೆ ವ್ಯಾಪ್ತಿಯ ಪೊಲೀಸರಿಂದ ಹಣ ವಸೂಲಿ ದಂಧೆ ನಡೆದಿದ್ದು, ಹಣ ನೀಡದ ಭೀಮಾಶಂಕರ ಎಂಬುವವರ ಮೇಲೆ ಯರಗೇರಾ ಠಾಣೆ ಪೊಲೀಸ್ ಪೇದೆಗಳಾದ ಹನುಮಂತ್ರಾಯ ಹಾಗು ಸಂತೋಷ ಹಲ್ಲೆ ಮಾಡಿದೆ ಎನ್ನುವ ಆರೋಪ ಮಾಡಿದ್ದು, ಹಲ್ಲೆಗೊಳಗಾದ ಭೀಮಾಶಂಕರ್ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿಯ ಪೊಲೀಸರು ಅಕ್ರಮ ಮರಳು ದಂಧೆಕೋರರಿಂದ ಹಣ ವಸೂಲಿ ಮಾಡುತ್ತಿದ್ದರು.ಪ್ರತಿ ತಿಂಗಳು ಲಂಚ ಫೀಕ್ಸ್ ಮಾಡಿಕೊಂಡು ವಾರಕ್ಕೆ , ತಿಂಗಳಿಗೊಮ್ಮೆ ಹಣ ವಸೂಲಿ ಮಾಡುತ್ತಿದ್ದಾರೆ, ಲಂಚ ನೀಡುವಂತೆ ಕೇಳುವ ಪೊಲೀಸ್ ಮೊಬೈಲ್ ಪೋನ್ ಸಂಭಾಷಣೆ ಬಹಿರಂಗಗೊಂಡಿದೆ. ರಾಯಚೂರು ತಾಲೂಕಿ ಬಾಯಿದೊಡ್ಡಿ ಗ್ರಾಮದ ಭೀಮಾಶಂಕರ ಎಂಬಾತನಿಗೆ ಲಂಚ ನೀಡುವಂತೆ ಪೊಲೀಸರ ಕಿರುಕುಳ ನೀಡಿದ್ದು ಹಣ ಕೊಡದಿದ್ತೆ ಟ್ರಾಕ್ಟರ್ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಹಣ ನೀಡದಕ್ಕೆ ಭೀಮಾಶಂಕರನಿಗೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿರುವುದರಿಂದ ಯಥೇಚ್ಛವಾಗಿ ಮರಳು ದೊರೆಯುತ್ತಿದ್ದು, ಸರಕಾರದ ಬೊಕ್ಕಸಕ್ಕೆ ನಷ್ಟವಾಗದಂತೆ ಮರಳುಗಾರಿಕೆ ಕಾನೂನು ಕ್ರಮ ಕೈಗೊಳ್ಳಬೇಕು. ಆದ್ರೆ ಪೊಲೀಸ್‌ರೆ ಅಕ್ರಮ ಮರಳುಗಾರಿಕೆ ಸಾಥ್ ನೀಡುತ್ತಿದ್ದರ ಎನ್ನುವ ಸಂಶಯ ವ್ಯಕ್ಯವಾಗಿದೆ. 
Conclusion:ಬೈಟ್.೧: ಭೀಮಾಶಂಕರ್( ಹಲ್ಲೆಗೊಳಗಾದ ಚಾಲಕ) ಪೊಲೀಸರು ಬೈಯ್ದಿರುವ ಆಶ್ಲೀಲ ಶಬ್ದಗಳನ್ನು ಬೈಟ್ ನಲ್ಲಿ ಹೇಳಿದ್ದಾನೆ, ಪರಿಶೀಲಿಸಿ
Last Updated : Oct 19, 2019, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.