ETV Bharat / state

ಜನ್‌ಧನ್ ಖಾತೆಗೆ ಹಣ ಸಂದಾಯ: ಬ್ಯಾಂಕ್ ಮುಂದೆ ಜನರ ನೂಕುನುಗ್ಗಲು

ಲಾಕ್​ಡೌನ್ ಹಿನ್ನೆಲೆ ಕೆಲಸವಿಲ್ಲದೆ ಜನತೆ ತೀವ್ರ ಕಂಗಾಲಾಗಿದ್ದಾರೆ. ಈ ಹಿನ್ನೆಲೆ ಪ್ರಧಾನ ಮಂತ್ರಿ ಜನ್​ಧನ್ ಖಾತೆಗೆ 500 ರೂಪಾಯಿ ಜಮಾ ಮಾಡಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ರಾಯಚೂರಿನ ವಿವಿಧೆಡೆ ಬ್ಯಾಂಕ್​ಗಳ ಮುಂದೆ ಜನಸಂದಣಿ ಏರ್ಪಟ್ಟಿತ್ತು.

people rushed bank for withdraw money from Jan-Dhan account
ಜನ್​-ಧನ್ ಖಾತೆಗೆ ಹಣ ಸಂದಾಯ: ಬ್ಯಾಂಕ್ ಮುಂದೆ ಜನರ ನೂಕುನುಗ್ಗಲು
author img

By

Published : Apr 7, 2020, 7:34 PM IST

ರಾಯಚೂರು: ಲಾಕ್​​ಡೌನ್​ ನಡುವೆಯೇ ಇಲ್ಲಿನ ಲಿಂಗಸುಗೂರು ಬಳಿ ಬ್ಯಾಂಕ್​ ಮುಂದೆ ಜನಜಂಗುಳಿಯೇ ಏರ್ಪಟ್ಟಿತ್ತು. ಲಾಕ್​​ಡೌನ್ ಹಿನ್ನೆಲೆ ಪ್ರಧಾನಮಂತ್ರಿ ಜನ್​-ಧನ್ ಖಾತೆಗೆ ಸಹಾಯ ಧನವಾಗಿ 500 ರೂಪಾಯಿ ಹಾಕಲಾಗಿದೆ. ಈ ಹಿನ್ನೆಲೆ ತಾಲೂಕಿನ ವಿವಿಧ ಬ್ಯಾಂಕ್​ಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದಾರೆ.

ಪ್ರಧಾನಮಂತ್ರಿ ಜನ್​-ಧನ್​ ಯೋಜನೆ ಜೊತೆಗೆ ವಿವಿಧ ಯೋಜನೆಗಳಡಿ ಮಾಶಾಸನ ಪಡೆಯುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೂರು ತಿಂಗಳ ಹಣ ಪಾವತಿಸಲಾಗಿದೆ. ಸ್ವಸಹಾಯ ಗುಂಪು, ಕಿಸಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಹಣ ಪಲಾನುಭವಿಗಳ ಖಾತೆಗೆ ಜಮೆ ಅಗಿದ್ದರಿಂದ ಬಹುತೇಕ ಬ್ಯಾಂಕ್​​ಗಳ ಮುಂದೆ ತಂಡೋಪ ತಂಡವಾಗಿ ಜನತೆ ಜಮಾವಣೆ ಆಗಿದ್ದಾರೆ.

ಈ ವೇಳೆ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಡಿವೈಎಸ್ಪಿ ಎಸ್. ಹುಲ್ಲೂರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಜನರಿಗೆ ತಿಳಿಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.