ರಾಯಚೂರು: ನಗರದ ಬೇಸ್ತವಾರಪೇಟೆಯ ಉಪ್ಪಾರವಾಡಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ 48ನೇ ನವರಾತ್ರಿ ಉತ್ಸವವು ಅದ್ಧೂರಿಯಾಗಿ ನಡೆಯಿತು.
ನವರಾತ್ರಿ ಉತ್ಸವದ ನಿಮಿತ್ತ ಉಚ್ಛಾಯ ವೆಂಕಟೇಶ್ವರ ದೇವಸ್ಥಾನದಲ್ಲಿ ಉಚ್ಛಾಯ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಹೋತ್ಸವದಲ್ಲಿ ಮಹಿಳೆಯರು, ಮಕ್ಕಳು,ಯುವಕರು, ವೃದ್ಧರಾದಿಯಾಗಿ ಎಲ್ಲಾ ವಯೋಮಾನದವರು ಪಾಲ್ಗೊಳ್ಳುವ ಮೂಲಕ ವೆಂಕಟೇಶ್ವರನ ಕೃಪೆಗೆ ಪಾತ್ರರಾದರು.
ಪ್ರತಿವರ್ಷ ಉಪ್ಪಾರ ಸಮಾಜದ ನೇತೃತ್ವದಲ್ಲಿ ನಡೆಯುವ ಈ ಉತ್ಸವವು ಬಹಳ ಅದ್ಧೂರಿಯಾಗಿ ನಡೆಯುತ್ತದೆ. ಈ ಬಾರಿ ಸಂಭ್ರಮ,ಸಡಗರದಿಂದ ಮಹೋತ್ಸವದ ಆಚರಣೆ ಮಾಡಲಾಯಿತು. ಉಚ್ಚಾಯದ ನಿಮಿತ್ತ ಬೆಳಗ್ಗೆ ಪುಷ್ಪ ಅರ್ಚನೆ, ಬಿಲ್ವಾರ್ಚನೆ, ರುದ್ರಭೀಷೇಕ, ಪಂಚಾಮೃತಾಭಿಶೇಕ, ಮಹಾಮಂಗಳಾರತಿ ಹಾಗೂ ಇತರೆ ಧಾರ್ಮಿಕ ಕಾರ್ಯಗಳು ನೆರವೇರಿಸಲಾಯಿತು.