ETV Bharat / state

ಮೊಹರಂ ಹಬ್ಬದಲ್ಲಿ ಪವಾಡ ಸೃಷ್ಟಿಸುವ ಬಸವ.. 29 ಬಂಡಿಗಳನ್ನು ಎಳೆದುಕೊಂಡು ಸಾಗುವ ಎತ್ತು.. - Gurugunta moharam

ಗ್ರಾಮದಲ್ಲಿ 10 ದಿನಗಳ ಕಾಲ ನಡೆಯುವ ಮೊಹರಂ ಹಬ್ಬದ ಆಚರಣೆಯಲ್ಲಿ 7ನೇ ದಿನದಂದು ಒಂಟಿ ಎತ್ತು 29 ಬಂಡಿಗಳನ್ನ ಎಳೆದುಕೊಂಡು ಹೋಗುವ ಮೂಲಕ ಪೀರಲ ದೇವರನ್ನು ಸ್ಥಾಪಿಸುವ ವಿಶೇಷ ಆಚರಣೆ ನೋಡುಗರನ್ನು ಬೆರಗುಗೊಳಿಸುತ್ತದೆ.

ಮೊಹರಂ ಹಬ್ಬ
author img

By

Published : Sep 9, 2019, 12:41 PM IST

ರಾಯಚೂರು : ರಾಜ್ಯದಲ್ಲಿ ಭಾವೈಕ್ಯತೆ ಪ್ರತೀಕವಾಗಿರುವ ಮೊಹರಂ ಹಬ್ಬವನ್ನ ಭಕ್ತಿ-ಭಾವದಿಂದ ಆಚರಣೆ ಮಾಡಲಾಗುತ್ತಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ಒಂಟಿ ಎತ್ತು ಏಕಕಾಲಕ್ಕೆ 29 ಬಂಡಿಗಳನ್ನು ಎಳೆದು ಪೀರಲ ದೇವರನ್ನು ಹೊತ್ತು ತಂದು ಪ್ರತಿಷ್ಠಾಪಿಸುವ ವಿಶೇಷ ಆಚರಣೆ ನೋಡುಗರನ್ನು ಆಚ್ಚರಿಗೊಳಿಸುತ್ತಿದೆ.

ಮೊಹರಂ ಹಬ್ಬದಲ್ಲಿ ಪವಾಡ ಸೃಷ್ಟಿಸುವ ಬಸವ..

ಗ್ರಾಮದಲ್ಲಿ 10 ದಿನಗಳ ಕಾಲ ನಡೆಯುವ ಮೊಹರಂ ಹಬ್ಬದ ಆಚರಣೆಯಲ್ಲಿ 7ನೇ ದಿನದಂದು ಒಂಟಿ ಎತ್ತು 29 ಬಂಡಿಗಳನ್ನ ಎಳೆದುಕೊಂಡು ಹೋಗುವ ಮೂಲಕ ಪೀರಲ ದೇವರನ್ನು ಸ್ಥಾಪಿಸುವ ವಿಶೇಷ ಆಚರಣೆ ನಡೆಸಲಾಗುತ್ತದೆ. ಗ್ರಾಮದ ಮುಖ್ಯ ಬೀದಿಯಿಂದ ಪ್ರಾರಂಭವಾಗಿ ಬಂಡಿಗಳಲ್ಲಿ ಜನರನ್ನು ಕೂಡಿಸಿಕೊಂಡು ಸರಾಗವಾಗಿ ಹೋಗುವ ಎತ್ತು ಪವಾಡವನ್ನೇ ಸೃಷ್ಟಿಸುತ್ತಿದೆ. ಅಲ್ಲದೆ ಒಂದೊಂದು ಬಂಡಿಯಲ್ಲಿ ಬೃಹದಾಕಾರದ ಮರದ ದಿಣ್ಣೆಗಳಿರುತ್ತವೆ. ಈ ದೃಶ್ಯವನ್ನು ನೋಡಲು ಜಿಲ್ಲೆಯ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ.

Intro:ಸ್ಲಗ್: ಒಂಟಿ ಎತ್ತು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 09-೦9-2019
ಸ್ಥಳ: ರಾಯಚೂರು
ಆಂಕರ್: ಭಾವಕೈತ್ಯ ಪ್ರತೀಕವಾಗಿರುವ ಮೊಹರಂ ಹಬ್ಬವನ್ನ ನಾಡಿಲ್ಲೆಡೆ ಭಕ್ತಿ-ಭಾವದಿಂದ ಆಚರಣೆ ಮಾಡಲಾಗುತ್ತಿದೆ. Body:ಇತ್ತ ರಾಯಚೂರು ಜಿಲ್ಲೆಯ ಮೊಹರಂ ಹಬ್ಬ ಸಂಭ್ರಮ ಮನೆ ಮಾಡಿದೆ. ವಿಶೇಷ ಲಿಂಗಸೂಗೂರು ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ಒಂಟಿ ಎತ್ತು 29 ಬಂಡಿಗಳನ್ನ ಎಳೆದುಕೊಂಡ ಹೋಗುವ ಮೂಲಕ ಪೀರಲಾ ದೇವರ ಸ್ಥಾಪಿಸುವ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಗ್ರಾಮದ ೧೦ ದಿನಗಳ ಕಾಲ ನಡೆಯುವ ಮೊಹರಂ ಆಚರಣೆ ಮಾಡಲಾಗುತ್ತದೆ. ೭ನೇ ದಿನದಂದು ಒಂಟಿ ಎತ್ತು ಬಂಡಿಗಳು ಕಟ್ಟಿಕೊಂಡು ಎಳೆಯುವ ವಿಶೇಷ ಆಚರಣೆ ನಡೆಯುತ್ತಿದೆ. ಗ್ರಾಮದ ಮುಖ್ಯಬೀದಿಯಿಂದ ಆರಂಭವಾಗುವ ಒಂಟಿ ಎತ್ತು ಬಂಡಿ ಎಳೆಯುವ ಮೆರವಣಿಗೆಯಲ್ಲಿ, ಆರಂಭದಲ್ಲಿ ಎತ್ತಿಗೆ ವಿಶೇಷವಾಗಿ ಪೂಜೆ ನೇರವೇರಿಸಿ, ಸೈಯದ್ ಖಾಸಿಂ ಪೀರಲ್ ದೇವರ ಪ್ರತಿಷ್ಠಾಪಿಸುವ ಮಸೀದಿವರೆಗೆ ಮೆರವಣಿಗೆಯಲ್ಲಿ ಒಂಟಿ ಎತ್ತು 29 ಬಂಡಿಗಳನ್ನ ಎಳೆದುಕೊಂಡು ಹೋಗುವ ಮೂಲಕ ದೇವರನ್ನ ಪ್ರತಿಷ್ಠಾಪಿಸಲಾಗುತ್ತದೆ. ಈ ವೇಳೆ ಬಂಡಿಯಲ್ಲಿ ದೇವರು ಹಾಗೂ ಕಟ್ಟಿಗೆಗಳನ್ನ ಜನರು ಕುಳಿತುಕೊಂಡಿರುತ್ತಾರೆ. ಆಗ ತಪಡಿ, ಭಜಿ ಸದ್ದಿನ, ಜನರ ಹರ್ಷೋದ್ಗರ, ಸಿಳ್ಳೆ, ಕೇಕ್ ಮಧ್ಯ ಒಂಟಿ ಎತ್ತು ಸಾರಗವಾಗಿ ಬಂಡಿಗಳನ್ನ ಎಳೆದುಕೊಂಡು ಹೋಗುತ್ತಿರುತ್ತದೆ. ಈ 29 ಬಂಡಿಗಳಿಗೆ ಮೊದಲಿನ ಬಂಡಿಗೆ ಮಾತ್ರ ಎತ್ತು ಕಟ್ಟಿ, ಒಳಿದ ಬಂಡಿಗಳಿಗೆ ಒಂದಕ್ಕೊಂದು ಬಂಡಿಗಳನ್ನ ಜೋಡಣೆ ಮಾಡಲಾಗುತ್ತದೆ. ಇನ್ನು ವಿಶೇಷ ಆಚರಣೆಯನ್ನ ಹಿಂದೂ-ಮುಸ್ಲಿಂ ಭಾಂಧವರು ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. Conclusion:ಇದನ್ನ ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಸಹಸ್ರ ಸಂಖ್ಯೆಯಲ್ಲಿ ಜನರು ನೆರೆದಿರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.