ಮಂಗಳೂರು: ಮಂಗಳೂರಲ್ಲಿ SDPI ಮತ್ತು ನಿಷೇಧಿತ PFI ಕಾರ್ಯಕರ್ತರ ಮನೆ ಮೇಲೆ ನಗರ ಪೊಲೀಸರು ದಾಳಿ ಮಾಡಿ, ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬಳಿಕ ನಡೆದ ಮೊದಲ ದಾಳಿ ಇದಾಗಿದೆ.
ಮಂಗಳೂರಿನ ಪಣಂಬೂರು, ಸುರತ್ಕಲ್, ಉಳ್ಳಾಲ, ಮಂಗಳೂರು ಗ್ರಾಮಾಂತರ ಸೇರಿ ಹಲವೆಡೆ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ಇಂದು ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಪಿಎಫ್ಐನ ಐವರು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. UAPA Act, ಸೆಕ್ಷನ್ 121 ಸೇರಿ ವಿವಿಧ ಐಪಿಸಿ ಸೆಕ್ಷೆನ್ ಅಡಿ ಕೇಸ್ ದಾಖಲಿಸಲಾಗಿದೆ.
ಪಿಎಫ್ಐ ನಿಷೇಧಕ್ಕೆ ಮುನ್ನ ಎನ್ ಐ ಎ ಮತ್ತು ರಾಜ್ಯ ಪೊಲೀಸರು ಪಿಎಫ್ಐ ಮತ್ತು ಎಸ್ ಡಿ ಪಿ ಐ ಕಚೇರಿ ಮತ್ತು ಮುಖಂಡರುಗಳ ಮೇಲೆ ದಾಳಿ ನಡೆಸಿದ್ದರು.
(ಓದಿ: ಪಿಎಫ್ಐ ಮರಳಿ ಬರುತ್ತೇವೆ.. ಬ್ಯಾನ್ ಬೆನ್ನಲ್ಲೇ ರಸ್ತೆಯ ಮೇಲೆ ಬಂಟ್ವಾಳದಲ್ಲಿ ಬೆದರಿಕೆ ಸಂದೇಶ)